newsics.com
ಬೆಂಗಳೂರು: ಹೊಸ ವರ್ಷಕ್ಕೆ ಕೆಲವೇ ದಿನಗಳು ಬಾಕಿ ಇದ್ದು, ನೂತನ ವರ್ಷ ಬರಮಾಡಿಕೊಳ್ಳಲು ನಗರದ ಮಂದಿ ಕಾತರರಾಗಿದ್ದಾರೆ. ಇದೇ ವೇಳೆ, ನಗರದಲ್ಲಿ ಗರ್ಲ್ ಫ್ರೆಂಡ್ ಸ್ವ್ಯಾಪಿಂಗ್ ನಡೆಯುತ್ತಿರುವುದು ಬಹಿರಂಗವಾಗಿದೆ.
‘ಸ್ವಿಂಗರ್ಸ್’ ಎನ್ನುವ ಹೆಸರಿನಲ್ಲಿ ಪಾರ್ಟಿಗೆಂದು ಕರೆದು ಪರಸ್ಪರ ಗರ್ಲ್ ಫ್ರೆಂಡ್ ಎಕ್ಸ್ ಚೇಂಜ್ ಮಾಡಿಕೊಳ್ಳುವ ದಂಧೆಯೊಂದು ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದ್ದು, ಪರಿಚಯಸ್ಥರನ್ನು ನಂಬಿ ಪಾರ್ಟಿ, ಮೋಜು ಮಸ್ತಿ ಎಂದು ಹೊರಹೋಗುವ ಹೆಣ್ಮಕ್ಕಳು ಸ್ವಲ್ಪ ಹುಷಾರಾಗಿರುವುದು ಉತ್ತಮ.
ಪಾರ್ಟ್ನರ್ ಸ್ವ್ಯಾಪ್ ಕ್ಲಬ್ ರಚಿಸಿಕೊಂಡಿದ್ದ ಯುವಕನೋರ್ವ ಪರಿಚಯಸ್ಥ ಯುವತಿಯನ್ನು ಪಾರ್ಟಿಗೆಂದು ಕರೆದು ಬಳಿಕ ಸ್ನೇಹಿತನ ಜತೆಗೆ ಸಹಕರಿಸುವಂತೆ ಬಲವಂತ ಮಾಡಿದ್ದಾನೆ. ಇದಕ್ಕೆ ಒಪ್ಪದ ಯುವತಿ ಮೇಲೆ ಸ್ನೇಹಿತರ ಜತೆ ಸೇರಿ ಅತ್ಯಾಚಾರ ನಡೆಸಿದ್ದಾರೆ.
ಇದರಿಂದ ನೊಂದ ಯುವತಿ ಘಟನೆ ಸಂಬಂಧ ಸಿಸಿಬಿಗೆ ದೂರು ನೀಡಿದ್ದು, ಕೂಡಲೇ ಅಲರ್ಟ್ ಆದ ಪೊಲೀಸರು ಕರಾಳ ದಂಧೆ ನಡೆಸುತ್ತಿದ್ದ ಇಬ್ಬರು ಕಾಮುಕರನ್ನು ಬಂಧಿಸಿದ್ದಾರೆ.
ಹರೀಶ್, ಹೇಮಂತ್ ಬಂಧಿತ ಆರೋಪಿಗಳು. ಹರೀಶ್ ಎಂಬಾತ ಯುವತಿಯನ್ನು ಪರಿಚಯ ಮಾಡಿಕೊಂಡಿದ್ದ. ಅಲ್ಲದೇ ಆಕೆಯನ್ನು ಲೈಂಗಿಕವಾಗಿ ಬಳಸಿಕೊಂಡಿದ್ದ. ಜೋಡಿ ಹಕ್ಕಿಯಂತೆ ಎಲ್ಲಾ ಕಡೆ ಸುತ್ತಾಡಿದ್ದಾರೆ. ಬಳಿಕ ಹರೀಶ್ ತನ್ನ ಅಸಲಿ ಮುಖ ತೋರಿಸಿದ್ದಾನೆ.
ವಾಟ್ಸ್ಯಾಪ್ ಗ್ರೂಪ್ ಮಾಡಿಕೊಂಡಿದ್ದ ‘ಸ್ವಿಂಗರ್ಸ್’ ಟೀಂ, ಬೆಂಗಳೂರು ಹೊರ ವಲಯದಲ್ಲಿ ಪಾರ್ಟಿ ಆಯೋಜನೆ ಮಾಡಿತ್ತು. ಪಾರ್ಟಿಗೆ ಕಪಲ್ಸ್ ಜತೆಗೆ ಆಸಾಮಿಗಳು ತಮ್ಮ ಪ್ರಿಯತಮೆಯರನ್ನು ಪರಸ್ಪರ ಎಕ್ಸ್ಚೇಂಜ್ ಮಾಡಿಕೊಳ್ಳುತ್ತಿದ್ದರು.
ಅಷ್ಟೇ ಅಲ್ಲ, ಒಬ್ಬನ ಗರ್ಲ್ ಫ್ರೆಂಡ್ ಜತೆಗೆ ಮತ್ತೊಬ್ಬ ಬೆಡ್ ಶೇರ್ ಮಾಡ್ತಿದ್ದ. ಇದೇ ರೀತಿ ಯುವತಿಯನ್ನು ಹರೀಶ್ ಎಂಬಾತ ಕೂಪಕ್ಕೆ ದೂಡಿದ್ದ. ಒಪ್ಪದಿದ್ದಾಗ ಸ್ನೇಹಿತರ ಜತೆ ಸೇರಿ ಅತ್ಯಾಚಾರವೆಸಗಿದ್ದಾನೆ.
ಆರೋಪಿಗಳ ಮೊಬೈಲ್ ಪರಿಶೀಲನೆ ವೇಳೆ ಭಯಾನಕ ಸತ್ಯ ಬಯಲಾಗಿದೆ. ಮೊಬೈಲ್ ನಲ್ಲಿ ಹತ್ತಾರು ಯುವತಿಯರ ಬೆತ್ತಲೆ ಫೋಟೊ ಪತ್ತೆಯಾಗಿದೆ. ಅಷ್ಟೇ ಅಲ್ಲ ಏಕಾಂತದಲ್ಲಿದ್ದ ವಿಡಿಯೋಗಳನ್ನು ಆರೋಪಿಗಳು ಮಾಡಿಟ್ಟುಕೊಂಡಿದ್ದರು.
ಅದೇ ವೀಡಿಯೋ ತೋರಿಸಿ ಯುವತಿಯರಿಗೆ ಬ್ಲಾಕ್ ಮೇಲ್ ಮಾಡುತ್ತಿರುವುದೂ ಪೊಲೀಸರ ತನಿಖೆಯಲ್ಲಿ ಪತ್ತೆಯಾಗಿದೆ.
Bengaluru Weather: ಬೆಂಗಳೂರು ಬೆಳಗ್ಗೆ ಕೂಲ್, ಮಧ್ಯಾಹ್ನ ರಣಬಿಸಿಲು..ಸಿಟಿ ಮಂದಿಗೆ ಎಚ್ಚರಿಕೆ ನೀಡಿದ ವೈದ್ಯರು
Health tips ಸಂಜೆ ಟೀ ಕುಡಿಯೋದು ಒಳ್ಳೆಯದಾ? ಕೆಟ್ಟದ್ದಾ? ತಜ್ಞರು ಹೇಳಿದ್ದೇನು?
Viral News: ಹಿಂದೂ ಯುವಕನಿಗೆ ಇಬ್ಬರು ಮುಸ್ಲಿಂ ಪತ್ನಿಯರು, ಹನುಮಾನ್ ಚಾಲೀಸ್ ಪಠಿಸ್ತಾರೆ
Life style ನಿಮ್ಮ ಹೆಬ್ಬೆರಳು ಏನು ಹೇಳುತ್ತದೆ? ನಿಮ್ಮ ವ್ಯಕ್ತಿತ್ವವನ್ನು ಈ ರೀತಿ ತಿಳಿದುಕೊಳ್ಳಬಹುದು
Relationship ಯುವಕರು ಇಂಥ ಹುಡುಗಿಯರನ್ನೇ ಯಾಕೆ ಇಷ್ಟಪಡ್ತಾರೆ? ವಿಜ್ಞಾನಿಗಳು ಬಿಚ್ಚಿಟ್ಟ ಅಚ್ಚರಿ ರಹಸ್ಯ