newsics.com
ಮುಂಬೈ : ಕಾಲಿವುಡ್ ನಟ ಅಜಿತ್ ಜೊತೆ ‘ರೆಡ್’ ಚಿತ್ರದಲ್ಲಿ ನಟಿಸಿದ್ದ ಪ್ರಿಯಾ ಗಿಲ್ 49ನೇ ವಯಸ್ಸಿನಲ್ಲಿ ಎರಡನೇ ಮದುವೆಯಾಗಿದ್ದಾರೆ.
ಮದುವೆಯಾದ ಬಳಿಕವೂ ಚಿತ್ರಗಳಲ್ಲಿ ನಟಿಸುತ್ತಿದ್ದರು. ನಿಕಟ ದೃಶ್ಯಗಳಲ್ಲಿ ನಟಿಸಿದ್ದರಿಂದ ಗಂಡನ ಜೊತೆ ಮನಸ್ತಾಪ ಉಂಟಾಯಿತು ಎನ್ನಲಾಗಿದೆ.2006ರಲ್ಲಿ ಚಿತ್ರರಂಗದಿಂದ ದೂರ ಉಳಿದ ಪ್ರಿಯಾ ಗಿಲ್, ಬಳಿಕ ಗಂಡನಿಂದ ವಿಚ್ಛೇದನ ಪಡೆದರು. ಸದ್ಯ ಈ ನಟಿ 49ನೇ ವಯಸ್ಸಿನಲ್ಲೂ ಫಿಟ್ ಆಗಿ ಕಾಣಿಸುತ್ತಾರೆ.
ಮಾಡೆಲ್ ಮತ್ತು ನಟಿ ಪ್ರಿಯಾ ಗಿಲ್ ಪಂಜಾಬ್ ಮೂಲದವರು. 1995ರಲ್ಲಿ ಫೆಮಿನಾ ಮಿಸ್ ಇಂಡಿಯಾ ಇಂಟರ್ನ್ಯಾಷನಲ್ ಪ್ರಶಸ್ತಿ ಗೆದ್ದ ಇವರು, 1996ರಲ್ಲಿ ಹಿಂದಿಯಲ್ಲಿ ‘Tere Mere Sapne’ ಚಿತ್ರದ ಮೂಲಕ ಪಾದಾರ್ಪಣೆ ಮಾಡಿದರು. ಈ ಚಿತ್ರ ಯಶಸ್ಸು ಗಳಿಸಿತು. ಬಳಿಕ ಬಾಲಿವುಡ್ ನಲ್ಲಿ ಬ್ಯುಸಿ ನಟಿಯಾದರು.
ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ವೆಬ್ ಸೀರಿಸ್ ನಟ ರವಿ ಶಂಕರ್ ಜೊತೆ ಎರಡನೇ ಮದುವೆಯಾಗಿರುವುದಾಗಿ ತಿಳಿಸಿದ್ದಾರೆ. ಪ್ರಿಯಾ ಗಿಲ್ ಗೆ ಒಬ್ಬ ಮಗಳು ಇದ್ದರೆ, ರವಿ ಶಂಕರ್ ಗೆ ಒಬ್ಬ ಮಗಳು ಇದ್ದಾಳೆ.
