newsics.com
ಬೆಂಗಳೂರು : ಬೆಳಗ್ಗೆ, ರಾತ್ರಿ ವಿಪರೀತ ಚಳಿಯಿದ್ದರೆ, ಮಧ್ಯಾಹ್ನ ರಣಬಿಸಿಲಿಗೆ ಕಂಗಾಲಾಗಿದ್ದಾರೆ. ಮಿಕ್ಸ್ ವೆದರ್ ಬೆನ್ನಲ್ಲೇ ಸಿಟಿ ಮಂದಿಗೆ ವೈದ್ಯರು ವಿಶೇಷ ಸಲಹೆ ನೀಡಿದ್ದಾರೆ.
ಚಳಿಯ ಜೊತೆಗೆ ಬಿಸಿಲು ಕೂಡ ಸಿಟಿ ಮಂದಿಯನ್ನ ಕಂಗೆಡುವಂತೆ ಮಾಡಿದೆ. ಬೆಳಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೂ ವಿಪರೀತ ಬಿಸಿಲು ಜನರನ್ನ ಕಾಡಿದರೆ, ಸಂಜೆ 5 ಗಂಟೆ ಬಳಿಕ ಚಳಿ ನಡುಕ ಹುಟ್ಟಿಸ್ತಿದೆ. ಇನ್ನು ಮುಂಜಾನೆ 4 ಗಂಟೆಯಿಂದ 7 ಗಂಟೆಯವರೆಗೂ ಚಳಿಗೆ ಗಢಗಢ ನಡುಗುವಂತಾಗಿದೆ. ಈ ಮಿಕ್ಸ್ ವೆದರ್ ಬೆಂಗಳೂರಿಗರನ್ನ ಹೈರಾಣಾಗಿಸಿದೆ.
ಬಿಸಿಲು ಹಾಗೂ ಚಳಿ ಇರೋದ್ರಿಂದ ಮಕ್ಕಳು, ವೃದ್ಧರು ಆರೋಗ್ಯದ ಬಗ್ಗೆ ಗಮನಹರಿಸಬೇಕಿದೆ. ಈ ವೇಳೆ ಸೈನಸ್, ಅಸ್ತಮಾ ಸೇರಿದಂತೆ ಹಲವು ಸಮಸ್ಯೆ ಕಾಡುವ ಸಾಧ್ಯತೆ ಇದೆ. ಮೈತುಂಬಾ ಬಟ್ಟೆ ಧರಿಸುವುದು, ಬಿಸಿನೀರು ಕುಡಿಯುವುದು ಹಾಗೂ ಬಿಸಿಯಾದ ಊಟ ಸೇವಿಸಿದ್ರೆ ಉತ್ತಮ ಅಂತಾರೆ ಡಾಕ್ಟರ್.
ಚಳಿ ಜಾಸ್ತಿ ಇರುವ ಸಂದರ್ಭದಲ್ಲಿ ಮಕ್ಕಳನ್ನು ಜಾಗೃತಿ ಇಂದ ನೋಡಿಕೊಳ್ಳಬೇಕು, ಪೋಷಕರು ಕೂಡ ಎಚ್ಚರ ವಹಿಸಬೇಕು.