newsics.com
ಡಿಸೆಂಬರ್ 21 ವಿಶ್ವ ಧ್ಯಾನ ದಿವಸ. ವಿಶ್ವ ಸಂಸ್ಥೆಯೇ ಧ್ಯಾನದ ಮಹತ್ವ ಅರಿತು ವಿಶ್ವ ಧ್ಯಾನ ದಿವಸವೆಂದು ಘೋಷಿಸಿದೆ.
ನಮ್ಮ ಸಮಗ್ರ ಯೋಗಕ್ಷೇಮ ಮತ್ತು ಆಂತರಿಕ ಪರಿವರ್ತನೆಗಾಗಿ ಧ್ಯಾನವು ನೀಡುವ ವಿವಿಧ ಸಾಧನಗಳ ಸಾಧ್ಯತೆಯನ್ನು ಅವಲೋಕಿಸುವ ಮತ್ತು ಅನುಭವಿಸುವ ದಿನವಾಗಲಿದೆ.
ಧ್ಯಾನದ ಬಗ್ಗೆ ಅರಿವು ಮೂಡಿಸಲು ಮತ್ತು ಧ್ಯಾನದ ವಿವಿಧ ವಿಧಾನಗಳ ಮೂಲಕ ನಮ್ಮ ದೈಹಿಕ-ಮಾನಸಿಕ-ಆಧ್ಯಾತ್ಮಿಕ ಯೋಗಕ್ಷೇಮದ ಅತ್ಯುನ್ನತ ಹಂತಕ್ಕೆ ತಲುಪುವ ಅನುಭವ ಪಡೆಯಲು ನಮ್ಮ ಇಚ್ಛೆ ಮತ್ತು ಸಂಪನ್ಮೂಲಗಳನ್ನು ಬಳಸಿಕೊಳ್ಳಲು ನೆರವಾಗಲಿದೆ.
ಹಾರ್ಟ್‌ಫುಲ್‌ನೆಸ್ ಬೆಂಗಳೂರು ಸಮುದಾಯವು, ಬೆಂಗಳೂರಿನ ವಿವಿಧ ಸ್ಥಳಗಳಲ್ಲಿ ಧ್ಯಾನಾವಧಿಗಳನ್ನು ನಡೆಸಲಿದೆ.