Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > VB G RAM G ವಿಬಿ ಜಿ ರಾಮ್ ಜಿ ಇಂದಿನಿಂದ ಜಾರಿ, ಕೂಲಿ ದಿನ,‌ ದರ ಎಲ್ಲವೂ ಹೆಚ್ಚಳ!
ಕರ್ನಾಟಕದೇಶಪ್ರಮುಖ

VB G RAM G ವಿಬಿ ಜಿ ರಾಮ್ ಜಿ ಇಂದಿನಿಂದ ಜಾರಿ, ಕೂಲಿ ದಿನ,‌ ದರ ಎಲ್ಲವೂ ಹೆಚ್ಚಳ!

Share
2 Min Read
SHARE

newsics.com | ನ್ಯೂಸಿಕ್ಸ್

ನವದೆಹಲಿ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ‘ವಿಕಸಿತ ಭಾರತ-ಉದ್ಯೋಗ ಮತ್ತು ಜೀವನೋಪಾಯ ಮಿಷನ್ ಗ್ಯಾರಂಟಿ (ಗ್ರಾಮೀಣ) ಕಾಯ್ದೆ, 2025’ (VB-G RAM-G) ಇಂದಿನಿಂದ (ಜುಲೈ 1) ದೇಶಾದ್ಯಂತ ಅಧಿಕೃತವಾಗಿ ಜಾರಿಗೆ ಬಂದಿದೆ.

ಈ ಹೊಸ ಕಾಯ್ದೆಯಡಿ ಪರಿಷ್ಕೃತಗೊಂಡಿರುವ ದಿನಗೂಲಿ ದರಗಳನ್ನು ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯವು ಪ್ರಕಟಿಸಿದೆ.

 ಕೂಲಿ 327.4 ರೂಪಾಯಿಗೆ ಏರಿಕೆ

ಹೊಸ ಯೋಜನೆಯಡಿ ರಾಷ್ಟ್ರೀಯ ಸರಾಸರಿ ದಿನಗೂಲಿಯನ್ನು ದಿನಕ್ಕೆ 327.4 ರೂಪಾಯಿಗಳಿಗೆ ಹೆಚ್ಚಿಸಲಾಗಿದೆ. ಈ ಮೊದಲು ನರೇಗಾ (MNREGA) ಯೋಜನೆಯಡಿ ಇದು 298.8 ರೂಪಾಯಿ ಆಗಿತ್ತು. ಅಂದರೆ, ಸರಾಸರಿ ಕೂಲಿಯಲ್ಲಿ ದಿನಕ್ಕೆ 28.6 ರೂಪಾಯಿಗಳಷ್ಟು ಏರಿಕೆಯಾಗಿದ್ದು, ದೇಶಾದ್ಯಂತ ಒಟ್ಟಾರೆ ಶೇಕಡಾ 10 ಕ್ಕಿಂತ ಹೆಚ್ಚು ಕೂಲಿ ಹೆಚ್ಚಳವಾದಂತಾಗಿದೆ. ಯಾರಿಗೂ ಕನಿಷ್ಠ ಕೂಲಿಗಿಂತ ಕಡಿಮೆ ಸಿಗಬಾರದು ಎಂಬ ಉದ್ದೇಶದಿಂದ ಕನಿಷ್ಠ ಮಧ್ಯಂತರ ಮೂಲ ಕೂಲಿ ದರವನ್ನು ದಿನಕ್ಕೆ 300 ರೂಪಾಯಿ ಎಂದು ನಿಗದಿಪಡಿಸಲಾಗಿದೆ.

100ರ ಬದಲಿಗೆ ಇನ್ಮುಂದೆ 125 ದಿನಗಳ ಕೆಲಸ!

ಹೊಸ ಕಾಯ್ದೆಯ ಪ್ರಕಾರ, ಅರ್ಹ ಗ್ರಾಮೀಣ ಕುಟುಂಬಗಳಿಗೆ ವರ್ಷದಲ್ಲಿ ಸಿಗುತ್ತಿದ್ದ ಉದ್ಯೋಗದ ಗ್ಯಾರಂಟಿಯನ್ನು 100 ದಿನಗಳಿಂದ 125 ದಿನಗಳಿಗೆ ಹೆಚ್ಚಿಸಲಾಗಿದೆ. 21 ರಾಜ್ಯಗಳು ಮತ್ತು ಆಡಳಿತಾತ್ಮಕ ಘಟಕಗಳಲ್ಲಿ ಕೂಲಿಯನ್ನು ಹೊಸ ಮಧ್ಯಂತರ ದರವಾದ 300 ರೂಪಾಯಿಗಳಿಗೆ ತರಲಾಗಿದೆ. ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್, ಪಶ್ಚಿಮ ಬಂಗಾಳ ಮತ್ತು ಅಸ್ಸಾಂನಂತಹ ರಾಜ್ಯಗಳಲ್ಲಿ ಶೇಕಡಾ 15 ರಿಂದ 25 ರಷ್ಟು ಕೂಲಿ ಹೆಚ್ಚಳವಾಗಲಿದ್ದು, ಅರುಣಾಚಲ ಪ್ರದೇಶ ಮತ್ತು ನಾಗಾಲ್ಯಾಂಡ್‌ನಲ್ಲಿ ಗರಿಷ್ಠ ಶೇಕಡಾ 24.5 ರಷ್ಟು ಹೆಚ್ಚಳ ಮಾಡಲಾಗಿದೆ.

ರಾಜ್ಯ / ಕೇಂದ್ರಾಡಳಿತ ಪ್ರದೇಶದ ಹೊಸ ಪರಿಷ್ಕೃತ ದಿನಗೂಲಿ

ಕರ್ನಾಟಕ ₹349
ಹರಿಯಾಣ ₹409
ಗೋವಾ ₹406
ಕೇರಳ ₹401
ಸಿಕ್ಕಿಂ (ಎತ್ತರದ ಪ್ರದೇಶದ ಗ್ರಾ.ಪಂ)₹450
ಆಂಧ್ರಪ್ರದೇಶ / ತೆಲಂಗಾಣ ₹307
ತಮಿಳುನಾಡು / ಪಂಜಾಬ್ ₹336
ಜಮ್ಮು ಮತ್ತು ಕಾಶ್ಮೀರ ₹329
ಹಿಮಾಚಲ ಪ್ರದೇಶ ₹328
ಮಹಾರಾಷ್ಟ್ರ ₹312
ರಾಜಸ್ಥಾನ ₹308
ಗುಜರಾತ್ ₹316
(ಉತ್ತರ ಪ್ರದೇಶ, ಬಿಹಾರ, ಉತ್ತರಾಖಂಡ, ಪಶ್ಚಿಮ ಬಂಗಾಳ, ಒಡಿಶಾ, ಜಾರ್ಖಂಡ್, ಅಸ್ಸಾಂ, ಮಧ್ಯಪ್ರದೇಶ ಹಾಗೂ ಛತ್ತೀಸ್‌ಗಢ ಸೇರಿದಂತೆ 21 ರಾಜ್ಯಗಳಿಗೆ ಕನಿಷ್ಠ ವೇತನ ಮಿತಿ ₹300 ಅನ್ನು ಅನ್ವಯಿಸಲಾಗಿದೆ.)

ಹರಿಯಾಣ, ಗೋವಾ ಮತ್ತು ಕೇರಳ ರಾಜ್ಯಗಳಲ್ಲಿ ಹೊಸ ಪರಿಷ್ಕರಣೆಯ ನಂತರ ದಿನಗೂಲಿ ದರವು ₹400 ರ ಗಡಿಯನ್ನು ದಾಟಿದೆ.

95,692.31 ಕೋಟಿ ರೂಪಾಯಿ ಹಂಚಿಕೆ:

ಹೊಸ ವ್ಯವಸ್ಥೆಯನ್ನು ಸುಗಮವಾಗಿ ಜಾರಿಗೊಳಿಸಲು ಹಾಗೂ ಕಾರ್ಮಿಕರಿಗೆ ಸರಿಯಾದ ಸಮಯಕ್ಕೆ ವೇತನ ಪಾವತಿಸಲು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸರ್ಕಾರವು ಒಟ್ಟು 95,692.31 ಕೋಟಿ ರೂಪಾಯಿಗಳ ಮಧ್ಯಂತರ ಹಣವನ್ನು ಹಂಚಿಕೆ ಮಾಡಿದೆ.

ಹಳೇ ಜಾಬ್ ಕಾರ್ಡ್‌ಗಳು ಇನ್ಮುಂದೆ ಮಾನ್ಯವೇ?

ಹೊಸ ಗ್ರಾಮೀಣ ಉದ್ಯೋಗ ಖಾತರಿ ಕಾರ್ಡ್‌ಗಳನ್ನು ವಿತರಿಸುವವರೆಗೆ, ಪ್ರಸ್ತುತ ಚಾಲ್ತಿಯಲ್ಲಿರುವ ಇ-ಕೆವೈಸಿ (e-KYC) ಪರಿಶೀಲನೆ ಮುಗಿದಿರುವ ಹಳೆಯ ಜಾಬ್ ಕಾರ್ಡ್‌ಗಳೇ ಮಾನ್ಯವಾಗಿರುತ್ತವೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

ಯೋಜನೆಯ ಅನುಷ್ಠಾನದಲ್ಲಿ ಗ್ರಾಮ ಪಂಚಾಯತಿಗಳ ಪಾತ್ರ ಮೊದಲಿನಂತೆಯೇ ಮುಂದುವರಿಯಲಿದ್ದು, ಜಲ ಸಂರಕ್ಷಣೆ, ಕೃಷಿ ಮತ್ತು ಮಹಿಳಾ ಸಬಲೀಕರಣದಂತಹ ಕೆಲಸಗಳಿಗೆ ವಿಶೇಷ ಆದ್ಯತೆ ನೀಡಲಾಗುತ್ತದೆ.

ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಮಾತನಾಡಿ, “ಯಾವುದೇ ಅರ್ಹ ಗ್ರಾಮೀಣ ಕಾರ್ಮಿಕ ಒಂದು ದಿನವೂ ಕೆಲಸದಿಂದ ವಂಚಿತನಾಗಬಾರದು ಎನ್ನುವುದೇ ಸರ್ಕಾರದ ಆದ್ಯತೆಯಾಗಿದೆ. ಸಮೃದ್ಧ ಹಳ್ಳಿಗಳ ಮೂಲಕ ವಿಕಸಿತ ಭಾರತ ನಿರ್ಮಾಣಕ್ಕೆ ಈ ಕಾಯ್ದೆ ಐತಿಹಾಸಿಕ ಹೆಜ್ಜೆಯಾಗಿದೆ ಎಂದು ತಿಳಿಸಿದ್ದಾರೆ.

Large crowd ತಿರುಪತಿಯಲ್ಲಿ ಮಿತಿಮೀರಿದ ಭಕ್ತರು: ಇಂದಿನಿಂದ ಸರ್ವ ದರ್ಶನ ಟಿಕೆಟ್ ವಿತರಣೆ ರದ್ದು, ಟಿಟಿಡಿ ಹೇಳಿದ್ದೇನು?

Health ಪುರುಷರಲ್ಲಿ ಹೆಚ್ಚುತ್ತಿದೆ ಬಿಪಿ, ಮಧುಮೇಹ! ಎನ್‌ಎಫ್‌ಎಚ್‌ಎಸ್‌ನ ಆತಂಕಕಾರಿ ವರದಿಯಲ್ಲೇನಿದೆ?

Attendant fired ಮೀಟಿಂಗ್‌ನಲ್ಲಿ ಅಧಿಕಾರಿಗಳು ತಿಂದುಳಿದ ಬಿಸ್ಕತ್‌ ಮನೆಗೆ ತಂದ ಜವಾನ ಕೆಲಸದಿಂದಲೇ ವಜಾ!

Rain Alert ಕರ್ನಾಟಕದಲ್ಲಿ ಮುಂಗಾರು ಅಬ್ಬರ, ಕರಾವಳಿ, ಮಲೆನಾಡು ಸೇರಿ ಪ್ರಮುಖ ಜಿಲ್ಲೆಗಳಿಗೆ ‘ಆರೆಂಜ್ ಅಲರ್ಟ್’ ಘೋಷಣೆ!

TAGGED:VB Ji Ram Ji will be implemented from todaywages and rates will increase!
Share This Article
Facebook Twitter Copy Link Print
Previous Article Ketan-Siya Case ಪುಣೆ ಉದ್ಯಮಿ ಕೇತನ್ ಕೊ*ಲೆ ಕೇಸ್: ಸಿಯಾಳ ಮೇಲೆ ಅನುಮಾನವಿತ್ತು, ತಂದೆ ಮುಂದೆ ಕಣ್ಣೀರಿಟ್ಟಿದ್ದ ಮೃತ ಯುವಕ!
Next Article Double-Decker Corridor ಮೆಟ್ರೊ ಡಬಲ್ ಡೆಕ್ಕರ್‌ನಿಂದ ಬೆಂಗಳೂರಲ್ಲಿ ಟ್ರಾಫಿಕ್, ಮಾಲಿನ್ಯ ಮತ್ತಷ್ಟು ಹೆಚ್ಚಳ: ಐಐಎಸ್‌ಸಿ ಎಚ್ಚರಿಕೆ!

Popular Posts

Highcourt Order ಶಾಲಾ ಬಸ್‌ನಲ್ಲಿ ಮಗು ಪೋಷಕರ ಕೈಸೇರುವವರೆಗೂ ಶಾಲೆಯದ್ದೇ ಜವಾಬ್ದಾರಿ: ಹೈಕೋರ್ಟ್ ಆದೇಶ

3 Min Read

Robbery attempt ಮೈಸೂರು‌- ಬೆಂಗಳೂರು ಹೆದ್ದಾರಿಯಲ್ಲಿ ದರೋಡೆಗೆ ಯತ್ನ, ಗುಂಡು ಹಾರಿಸಿದ ಮುಸುಕುಧಾರಿಗಳು: ಕೂದಲೆಳೆ ಅಂತರದಲ್ಲಿ ಟ್ರಕ್ ಚಾಲಕ‌ ಪಾರು

1 Min Read

Youtuber Dhanya ನಾನೇನೂ ಜೈಲಿಗೆ ಹೋಗಿಲ್ಲ, ತಂದೆ- ತಾಯಿಗೆ‌ ಕಾಟ ಕೊಡಬೇಡಿ ಎಂದ ಕಾಸರಗೋಡು ಯೂಟ್ಯೂಬರ್ ಧನ್ಯ!

1 Min Read

Life saver nurses ಕಾರಿನಲ್ಲೇ ಹೃದಯಾಘಾತ: ಚಲಿಸುತ್ತಿದ್ದ ಬಸ್‌ನಿಂದ ಜಿಗಿದು ಜೀವ ಉಳಿಸಿದ ಇಬ್ಬರು ನರ್ಸ್‌ಗಳಿಗೆ ಭಾರೀ ಶ್ಲಾಘನೆ!

1 Min Read

You Might Also Like

ಕರ್ನಾಟಕಪ್ರಮುಖ

Bellary ವಿದ್ಯಾರ್ಥಿನಿಗೆ ಲೈಂಗಿಕ ದೌರ್ಜನ್ಯ: ಕಾಮುಕ ಉಪನ್ಯಾಸಕನ ಬಂಧನ

1 Min Read
ದೇಶಪ್ರಮುಖವಿದೇಶವೈರಲ್

Stress job ಕಾರ್ಪೊರೇಟ್ ಕಂಪನಿ‌ ಸ್ಟ್ರೆಸ್ ತಾಳಲಾರದೆ ದೊಡ್ಡ ಸ್ಯಾಲರಿಯ ಜಾಬ್ ಬಿಟ್ಟು ವೇಟ್ರಸ್ ಆದ ಯುವತಿ! ವಿಡಿಯೋ ನೋಡಿ

3 Min Read
ಕರ್ನಾಟಕಪ್ರಮುಖ

Karnataka government| ಪ್ರಜಾಸೇವಾ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿ ಹಿರಿಯ ಐಎಎಸ್ ಅಧಿಕಾರಿ ಹರ್ಷಗುಪ್ತ ನೇಮಕ

1 Min Read
ಕರ್ನಾಟಕದೇಶಪ್ರಮುಖ

Youtuber| ಕುಡಿದು ಕಾರ್ ಚಲಾಯಿಸಿದ ಖ್ಯಾತ ಯೂಟ್ಯೂಬರ್ – ಪ್ರಕರಣ ದಾಖಲು

2 Min Read

Social Networks

Facebook-f Instagram Twitter
Welcome Back!

Sign in to your account

Lost your password?