Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > Attendant fired ಮೀಟಿಂಗ್‌ನಲ್ಲಿ ಅಧಿಕಾರಿಗಳು ತಿಂದುಳಿದ ಬಿಸ್ಕತ್‌ ಮನೆಗೆ ತಂದ ಜವಾನ ಕೆಲಸದಿಂದಲೇ ವಜಾ!
ದೇಶಪ್ರಮುಖವೈರಲ್

Attendant fired ಮೀಟಿಂಗ್‌ನಲ್ಲಿ ಅಧಿಕಾರಿಗಳು ತಿಂದುಳಿದ ಬಿಸ್ಕತ್‌ ಮನೆಗೆ ತಂದ ಜವಾನ ಕೆಲಸದಿಂದಲೇ ವಜಾ!

Share
3 Min Read
SHARE

newsics.com | ನ್ಯೂಸಿಕ್ಸ್

ಮನಮಿಡಿಯುವ ಹಾಗೂ ಆಡಳಿತ ವ್ಯವಸ್ಥೆಯ ಅಮಾನವೀಯತೆಯನ್ನು ಬಿಚ್ಚಿಡುವ ಘಟನೆಯೊಂದು ಜಾರ್ಖಂಡ್‌ನ ಬೊಕಾರೊದಲ್ಲಿ ನಡೆದಿದೆ. ಇದು ಕೇವಲ ಒಂದು ಕಚೇರಿಯ ಕಥೆಯಲ್ಲ, ಬದಲಾಗಿ ನಮ್ಮ ಸಮಾಜದಲ್ಲಿ ದಿನೇ ದಿನೇ ಕಣ್ಮರೆಯಾಗುತ್ತಿರುವ ಮಾನವೀಯತೆಗೆ ಹಿಡಿದ ಕನ್ನಡಿಯಂತಿದೆ.

ಜಾರ್ಖಂಡ್‌ ಬೊಕಾರೊದಲ್ಲಿ ಘಟನೆ ಇದಾಗಿದ್ದು, ಕಚೇರಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಜವಾನನೊಬ್ಬ ಅಧಿಕಾರಿಗಳು ಸಭೆಯಲ್ಲಿ ತಿಂದು ಬಿಟ್ಟಿದ್ದ ಬಿಸ್ಕೇಟ್‌ಗಳನ್ನು ತನ್ನ ಮಕ್ಕಳಿಗಾಗಿ ಮನೆಗೆ ತೆಗೆದುಕೊಂಡು ಹೋಗಿದ್ದನು. ಇದೇ ಆತ ಮಾಡಿದ ಬಹುದೊಡ್ಡ ತಪ್ಪು! ಈ ಸಣ್ಣ ಘಟನೆಯನ್ನು ಅಲ್ಲಿನ ಅಧಿಕಾರಿಗಳು ‘ಗಂಭೀರ ಭ್ರಷ್ಟಾಚಾರ’ ಎಂದು ಪರಿಗಣಿಸಿ, ಆ ಬಡ ಜವಾನನನ್ನು ಕೆಲಸದಿಂದಲೇ ವಜಾಗೊಳಿಸಿದ್ದಾರೆ.

ಪ್ರತಿದಿನ ಕಚೇರಿಯಲ್ಲಿ ಗುಡಿಸಿ, ಸಾರಿಸಿ, ಅಧಿಕಾರಿಗಳಿಗೆ ನೀರು ಕೊಟ್ಟು ಸೇವೆ ಮಾಡುವ ಜವಾನನಿಗೆ ತಿಂಗಳ ಕೊನೆಯಲ್ಲಿ ಸಿಗುವ ಸಂಬಳ ತುಂಬ ಕಡಿಮೆ. ಕೇವಲ ಕೆಲವು ಬಿಸ್ಕೇಟ್‌ಗಳಿಗಾಗಿ ಒಬ್ಬ ವ್ಯಕ್ತಿಯ ಉದ್ಯೋಗವನ್ನೇ ಹಾಗೂ ಆತನ ಕುಟುಂಬದ ಅನ್ನವನ್ನೇ ಕಸಿದುಕೊಂಡಿರುವುದು ಈ ವ್ಯವಸ್ಥೆಯ ಕಟು ವಾಸ್ತವವನ್ನು ಎತ್ತಿ ತೋರಿಸುತ್ತದೆ.

ಕೋಟ್ಯಂತರ ರೂಪಾಯಿ ಲಂಚ ಪಡೆಯುವ, ದೊಡ್ಡ ಮಟ್ಟದ ಭ್ರಷ್ಟಾಚಾರ ಮಾಡುವವರು ಯಾವುದೇ ಭಯವಿಲ್ಲದೆ ರಾಜಾರೋಷವಾಗಿ ತಿರುಗಾಡುತ್ತಿರುವಾಗ, ಮಕ್ಕಳ ಹಸಿವು ನೀಗಿಸಲು ಉಳಿದ ಬಿಸ್ಕೇಟ್ ತೆಗೆದುಕೊಂಡು ಹೋದವನು ಇವರ ಕಣ್ಣಿಗೆ ದೊಡ್ಡ ಅಪರಾಧಿಯಾಗಿ ಕಂಡಿದ್ದಾನೆ.

ಹಸಿವು, ಘನತೆ ಮತ್ತು ಮಾನವೀಯತೆಯ ಕೊರತೆ

ಬದುಕು ಎಲ್ಲರಿಗೂ ಒಂದೇ ತರಹದ ಅವಕಾಶಗಳನ್ನು ನೀಡಿರುವುದಿಲ್ಲ. ಬಹುಶಃ ಈ ಪ್ರಪಂಚದ ಅತಿ ದೊಡ್ಡ ಸೌಭಾಗ್ಯ ಎಂದರೆ, ಬದುಕು ಮತ್ತು ಘನತೆಯ ನಡುವೆ ಆಯ್ಕೆ ಮಾಡುವ ಪರಿಸ್ಥಿತಿ ಬಾರದಿರುವುದು. ನಮ್ಮ ಜೊತೆ ಕೆಲಸ ಮಾಡುವವರನ್ನು, ಕೆಳಹಂತದ ಕಾರ್ಮಿಕರನ್ನು ಕೇವಲ ಅವರ ಹುದ್ದೆಯಿಂದ ಅಥವಾ ಅವರು ಮಾಡುವ ಕೆಲಸದಿಂದ ಅಳೆಯುವುದನ್ನು ಬಿಟ್ಟು, ಆತನೂ ಒಬ್ಬ ತಂದೆ, ಆತನಿಗೂ ಒಂದು ಕುಟುಂಬವಿದೆ ಎಂದು ನೋಡಲು ಆರಂಭಿಸಿದಾಗ ಮಾತ್ರ ಈ ಜಗತ್ತು ಸ್ವಲ್ಪ ಖುಷಿಯಿಂದ ಕೂಡಿರಲು ಸಾಧ್ಯ.

ಸಹಾನುಭೂತಿ ಅಥವಾ ಮಾನವೀಯತೆ ತೋರಿಸಲು ನಾವೇನು ಯಾರಿಗೂ ಹಣ ಕೊಡಬೇಕಾಗಿಲ್ಲ. ಅದು ಸಂಪೂರ್ಣ ಉಚಿತ. ಆದರೆ, ಅದೇ ಮಾನವೀಯತೆಯ ಕೊರತೆಯಿಂದಾಗಿ ಒಬ್ಬ ಬಡ ಜವಾನ ಇಂದು ಬೀದಿಗೆ ಬಿದ್ದಿದ್ದಾನೆ. ಇಂತಹ ಘಟನೆಗಳು ನಮ್ಮನ್ನು ನಾವು ಪ್ರಶ್ನಿಸಿಕೊಳ್ಳುವಂತೆ ಮಾಡುತ್ತವೆ.

ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಆಕ್ರೋಶ

ಈ ಘಟನೆಯು ಲಿಂಕ್ಡ್‌ಇನ್ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಜನಸಾಮಾನ್ಯರು ಅಧಿಕಾರಿಗಳ ಈ ಕಠಿಣ ಹಾಗೂ ಅಮಾನವೀಯ ನಿರ್ಧಾರವನ್ನು ತೀವ್ರವಾಗಿ ಖಂಡಿಸುತ್ತಿದ್ದಾರೆ.

ವೈರಲ್‌ ಆಗಿರುವ ಪೋಸ್ಟ್‌ವೊಂದಕ್ಕೆ ಪ್ರತಿಕ್ರಿಯಿಸಿರುವ ಬಳಕೆದಾರರೊಬ್ಬರು, “ಇಂದಿನ ಸಮಾಜದಲ್ಲಿ ಕೆಲವರು ತಿಂದ ಮೇಲೆ ಉಳಿದ ಆಹಾರವನ್ನು ಕೇವಲ ಕಸ ಎಂದು ಭಾವಿಸಿದರೆ, ಇನ್ನು ಕೆಲವರು ಅದೇ ಕಸದಲ್ಲಿ ತಮ್ಮ ಮುಂದಿನ ಊಟವನ್ನು ಹುಡುಕುತ್ತಿರುತ್ತಾರೆ. ಬಾಲ್ಯದಿಂದಲೇ ಅನ್ನವನ್ನು ಗೌರವಿಸಲು ಮತ್ತು ಸಾಧ್ಯವಾದರೆ ಹಂಚಿ ತಿನ್ನಲು ನಮ್ಮ ಪೋಷಕರು ಕಲಿಸಿದ್ದಾರೆ ಎಂದು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

ಮತ್ತೊಬ್ಬ ಬಳಕೆದಾರರು ಇಂದಿನ ಸರ್ಕಾರದ ಹಾಗೂ ಸಮಾಜದ ವ್ಯವಸ್ಥೆಯ ಬಗ್ಗೆ ನೇರವಾಗಿ ಕಿಡಿಕಾರುತ್ತಾ, “ಅಧಿಕಾರಿಗಳು ಬಿಟ್ಟಿದ್ದ ಉಳಿದ ಆಹಾರವನ್ನು ಮನೆಗೆ ಕೊಂಡೊಯ್ಯುವುದು ಗಂಭೀರ ಭ್ರಷ್ಟಾಚಾರವಾಗುತ್ತದೆ. ಆದರೆ, ಸರ್ಕಾರಿ ಕಚೇರಿಗಳಲ್ಲಿ ಅಧಿಕಾರಿಗಳು ಕೋಟ್ಯಂತರ ರೂಪಾಯಿ ಜನರ ಹಣವನ್ನು ಲಂಚದ ರೂಪದಲ್ಲಿ ಕದಿಯುವುದು ಮಾತ್ರ ಎಲ್ಲರಿಗೂ ಸ್ವೀಕಾರಾರ್ಹವಾಗಿದೆ. ಇದು ಎಂಥಾ ನ್ಯಾಯ?” ಎಂದು ವ್ಯವಸ್ಥೆಯನ್ನು ಅಣಕಿಸಿದ್ದಾರೆ.

“ತಂದೆಯ ಪ್ರೀತಿ ಅನಂತವಾದದ್ದು ಮತ್ತು ಅದಕ್ಕೆ ಯಾವುದೇ ಕೊನೆಯಿಲ್ಲ” ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ.

ಬಡವನ ಹೊಟ್ಟೆಯ ಹಸಿವು ಮತ್ತು ಆತನ ಮಕ್ಕಳ ಮೇಲಿನ ಕಾಳಜಿ, ಅಧಿಕಾರಶಾಹಿ ವ್ಯವಸ್ಥೆಯ ಕಣ್ಣಿಗೆ ಭ್ರಷ್ಟಾಚಾರವಾಗಿ ಕಂಡಿರುವುದು ನಿಜಕ್ಕೂ ದುರಂತ.

Commercial Cylinder ಈ ವರ್ಷದಲ್ಲಿ ಇದೆ ಮೊದಲು! ಸಿಲಿಂಡರ್ ದರ ಭಾರೀ ಇಳಿಕೆ!

 

 

Horoscope ದಿನದ ರಾಶಿಫಲ: ಇಂದು ನಿಮ್ಮ ರಾಶಿಯ ಭವಿಷ್ಯ ಹೇಗಿದೆ? ಇಲ್ಲಿದೆ ಇಂದಿನ ಪಂಚಾಂಗ ಮತ್ತು ಫಲ ಬಲ!

Heatwave ಬಿಸಿಗಾಳಿಗೆ ಯುರೋಪ್ ತತ್ತರ, ಕರಗುತ್ತಿವೆ ರಸ್ತೆಗಳು, ಕುದಿಯುತ್ತಿದೆ ನದಿ…1300ಕ್ಕೂ ಹೆಚ್ಚಿ ಮಂದಿ ಸಾವು, ಅಣುಸ್ಥಾವರ ಸ್ಥಗಿತ

 

TAGGED:An attendant who brought home leftover biscuits eaten by officials at a meeting was fired from his job!
Share This Article
Facebook Twitter Copy Link Print
Previous Article Dry Eye ಸ್ಕ್ರೀನ್ ಟೈಮ್ ಮಾತ್ರವಲ್ಲ; ಕಣ್ಣು ಒಣಗುವ ‘ಡ್ರೈ ಐ’ ಸಮಸ್ಯೆಗೆ ಇವುಗಳೂ ಕಾರಣ! ಇಲ್ಲಿದೆ ವೈದ್ಯರ ಪ್ರಮುಖ ಸಲಹೆಗಳು
Next Article Vastu Tips ತುಳಸಿ ಗಿಡದಲ್ಲಿ ಅತಿಯಾಗಿ ಮೊಗ್ಗು ಬೆಳೆದರೆ ಏನರ್ಥ? ವಾಸ್ತು ದೋಷ ನಿವಾರಣೆಗೆ ಇಲ್ಲಿದೆ ದಿವ್ಯ ಪರಿಹಾರಗಳು!

Popular Posts

Whatsapp Username ವಾಟ್ಸ್ಯಾಪ್‌ನ ಹೊಸ ‘ಯೂಸರ್‌ನೇಮ್’ ಫೀಚರ್‌ಗೆ ಕೇಂದ್ರ ಸರ್ಕಾರ ಬ್ರೇಕ್

2 Min Read

Banglore ಬೇಬಿ ಕೇರ್ ಸೆಂಟರ್​ನಲ್ಲಿ ಮಕ್ಕಳಿಗೆ ದೈಹಿಕ ಹಿಂಸೆ – FIR ದಾಖಲು

1 Min Read

Yash toxic ‘ಲೇಡೀಸ್ ಅಂಡ್ ಲೇಡೀಸ್’ ಟೀಸರ್‌ನಲ್ಲಿ ಅಬ್ಬರಿಸಿದ ಪಂಚಕನ್ಯೆಯರು! ಸ್ಟೋರಿ ಲೈನ್‌ ಏನ್ ಹೇಳ್ತಿದೆ?

2 Min Read

Surgery ಗಿಳಿಯ ಹೊಟ್ಟೆಯಲ್ಲೇ ಸಿಲುಕಿದ ಎಕ್ಸ್‌ಟ್ರಾ ಲಾರ್ಜ್‌ ಮೊಟ್ಟೆ; ₹1.5 ಲಕ್ಷದ ಶಸ್ತ್ರಚಿಕಿತ್ಸೆಗಾಗಿ ಕೊಲ್ಕತ್ತಾದಿಂದ ದೆಹಲಿಗೆ ರವಾನೆ!

1 Min Read

You Might Also Like

filmದೇಶ

Shocking story ಅಯ್ಯೋ, ಜೀವನಪೂರ್ತಿ ರುಚಿ ಇಲ್ಲದ ಆಹಾರ ಸೇವನೆ ಮಾಡಬೇಕಾ ನಟಿ ಸಮಂತಾ? ಆಘಾತಕಾರಿ ವಿಚಾರ ಬಾಯ್ಬಿಟ್ಟ ‌ʻಮಾ ಇಂಟಿ ಬಂಗಾರಂʼ ಡೈರೆಕ್ಟರ್!

2 Min Read
ಕರ್ನಾಟಕದೇಶಪ್ರಮುಖ

Cabinet Expansion: ಯಂಗ್ ಶಾಸಕರ ಪಟ್ಟಿಯೊಂದಿಗೆ ನಾಳೆ ಸಿಎಂ ದೆಹಲಿಗೆ – ಜುಲೈ 8ಕ್ಕೆ ಆಗಲಿದೆಯಾ ಸಚಿವ ಸಂಪುಟ ವಿಸ್ತರಣೆ?

3 Min Read
Crimeದೇಶಪ್ರಮುಖ

Mumbai ಇಬ್ಬರು ನಟಿಯರು, ಒಂದು ರಾತ್ರಿ, ಎರಡು ಲಕ್ಷ ; ಹೈಟೆಕ್ ಹೋಟೆಲ್‌ ದಂಧೆ, ಮೇಕಪ್ ಆರ್ಟಿಸ್ಟ್ ಬಾಯ್ಬಿಟ್ಟ ಸತ್ಯವೇನು?

3 Min Read
filmದೇಶವೈರಲ್

Bollywood ಪತಿ ಮತ್ತು ತಂದೆಯೊಂದಿಗೆ ಡಿನ್ನರ್‌ಗೆ ಬಂದ ಸೋನಾಕ್ಷಿ ಸಿನ್ಹಾ: ಫೋಟೋಗ್ರಾಫರ್‌ಗಳ ಅತಿರೇಕದ ವರ್ತನೆಗೆ ಬೇಸತ್ತ ನಟಿ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?