Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ವಿದೇಶ > Heatwave ಬಿಸಿಗಾಳಿಗೆ ಯುರೋಪ್ ತತ್ತರ, ಕರಗುತ್ತಿವೆ ರಸ್ತೆಗಳು, ಕುದಿಯುತ್ತಿದೆ ನದಿ…1300ಕ್ಕೂ ಹೆಚ್ಚು ಮಂದಿ ಸಾವು, ಅಣುಸ್ಥಾವರ ಸ್ಥಗಿತ
ವಿದೇಶಪ್ರಮುಖವೈರಲ್

Heatwave ಬಿಸಿಗಾಳಿಗೆ ಯುರೋಪ್ ತತ್ತರ, ಕರಗುತ್ತಿವೆ ರಸ್ತೆಗಳು, ಕುದಿಯುತ್ತಿದೆ ನದಿ…1300ಕ್ಕೂ ಹೆಚ್ಚು ಮಂದಿ ಸಾವು, ಅಣುಸ್ಥಾವರ ಸ್ಥಗಿತ

Share
2 Min Read
SHARE

newsics.com | ನ್ಯೂಸಿಕ್ಸ್

ಪ್ಯಾರಿಸ್‌: ಯುರೋಪ್ ದೇಶಗಳು ಕಳೆದ ಎರಡು ವಾರಗಳಿಂದ ತೀವ್ರ ಬಿಸಿಗಾಳಿಯಿಂದ ತತ್ತರಿಸಿದ್ದು, ತಾಪಮಾನ 44 ಡಿಗ್ರಿ ಸೆಲ್ಸಿಯಸ್‌ಗೆ ಏರಿದೆ.

ಈ ಐತಿಹಾಸಿಕ ಉಷ್ಣಾಂಶದಿಂದಾಗಿ ಫ್ರಾನ್ಸ್ ಸೇರಿದಂತೆ ಹಲವೆಡೆ 1300ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ ಮತ್ತು ಅಣು ಸ್ಥಾವರವನ್ನು ಸ್ಥಗಿತಗೊಳಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಐರೋಪ್ಯ ದೇಶಗಳ ಪಾಲಿಗೆ ಈ ವರ್ಷದ ಬೇಸಿಗೆಯು ಘೋರವಾಗಿದ್ದು, ಸುಮಾರು 40ರಿಂದ 44 ಡಿಗ್ರಿವರೆಗಿನ ಬಿಸಿಲಿಗೆ ಜನ ಬಸವಳಿದು ಹೋಗಿದ್ದಾರೆ. ಜೂ.21ರ ನಂತರ ಫ್ರಾನ್ಸ್ ಒಂದರಲ್ಲೇ ಈವರೆಗೆ 1 ಸಾವಿರಕ್ಕೂ ಹೆಚ್ಚು ಮಂದಿ ಸೇರಿ, ಯುರೋಪ್‌ನಾದ್ಯಂತ 1300 ಜನ ಬಿಸಿಲಿನಿಂದಾಗಿ ಸಾವನ್ನಪ್ಪಿದ್ದಾರೆ. ಮೃತರಲ್ಲಿ ಬಹುತೇಕರು 65 ವರ್ಷ ಮೇಲ್ಪಟ್ಟವರು. ಇದು ವಾಡಿಕೆಯ ಸಾವಿಗಿಂತ ಬಹು ಅಧಿಕವಾಗಿದೆ.

ಅತ್ತ ಸ್ಕ್ಯಾಂಡಿನೇವಿಯಾ ಮತ್ತು ಆಲ್ಪ್ಸ್ ಪ್ರದೇಶದಲ್ಲಿ ತಾಪಮಾನ 40 ಡಿ.ಸೆ.ಗಿಂತಲೂ ಮೇಲೇರಿದೆ. ಸ್ವಿಸ್ ಹಿಮನದಿಗಳು ವೇಗವಾಗಿ ಕರಗಲು ಆರಂಭವಾಗಿದ್ದು, ಮುಂದಿನ ದಿನಗಳಲ್ಲಿ ಸಮುದ್ರ ಮಟ್ಟ ಹೆಚ್ಚಳ, ಹಠಾತ್‌ ಪ್ರವಾಹಗಳು ಸಂಭವಿಸುವ ಆತಂಕ ಮನೆಮಾಡಿದೆ. ಅತ್ತ 40 ಡಿಗ್ರಿಯಷ್ಟು ತಾಪ ಅನುಭವಿಸಿದ ಡೆನ್ಮಾರ್ಕ್‌ ಪಾಲಿಗೆ ಶನಿವಾರವು ಅತಿಹೆಚ್ಚು ಬಿಸಿ ದಿನವಾಗಿತ್ತು.

ಜಲಫಿರಂಗಿ ಬಳಕೆ:
ಸಾಮಾನ್ಯವಾಗಿ ಗುಂಪುಗೂಡಿರುವ ಜನರನ್ನು ಚದುರಿಸಲು ಬಳಸಲಾಗುವ ಜಲಫಿರಂಗಿಗಳನ್ನು (ವಾಟರ್‌ ಕೆನಾನ್) ಜರ್ಮನಿ ಪೊಲೀಸರು ಬೇಸಿಗೆಯ ವಿರುದ್ಧ ಸೆಣೆಸಲು ಬಳಕೆ ಮಾಡುವ ಸ್ಥಿತಿ ಬಂದೊದಗಿದೆ. ಬಿಸಿಲಿನಿಂತ ತತ್ತರಿಸಿರುವ ಬರ್ಲಿನ್‌ ನಗರಕ್ಕೆ ತಂಪೆರೆಯಲು ಜಲಫಿರಂಗಿಗಳ ಮೂಲಕ ನೀರನ್ನು ಚಿಮ್ಮಿಸಲಾಗುತ್ತಿದೆ.

ಪ್ಯಾರಿಸ್‌ನಲ್ಲಿ ಫ್ಯಾನ್‌ಗಳ ಬೇಡಿಕೆಯಲ್ಲಿ ಭಾರೀ ಏರಿಕೆಯಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಆಸ್ಪತ್ರೆಗಳಿಗೆ ಬರುತ್ತಿರುವ ತುರ್ತು ಕರೆಗಳ ಪ್ರಮಾಣದಲ್ಲಿ ಶೇ.80ರಷ್ಟು ಏರಿಕೆಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಇಟಲಿಯ 18 ನಗರಗಳಿಗೆ ರೆಡ್‌ ಅಲರ್ಟ್‌ ಘೋಷಿಸಲಾಗಿದೆ.

ಅಣು ಸ್ಥಾವರ ಸ್ಥಗಿತ:
ಅಣು ವಿದ್ಯುತ್‌ ಸ್ಥಾವರಗಳ ರಿಯಾಕ್ಟರ್‌ಗಳನ್ನು ತಣ್ಣಗಾಗಿಸಲು ನೀರನ್ನು ಬಳಸಲಾಗುತ್ತದೆ. ಆದರೆ ಇದೀಗ ಸ್ವಿಜರ್ಲೆಂಡ್‌ನ ಆರೆ ನದಿಯ ನೀರೇ ಬಿಸಿಯಾಗಿರುವ ಕಾರಣ, ಯುರೋಪಿನ ಅತ್ಯಂತ ಹಳೆಯ ಅಣು ವಿದ್ಯುತ್‌ ಸ್ಥಾವರದಲ್ಲಿ ಶುಕ್ರವಾರದಿಂದ ಕೆಲಸವನ್ನೇ ನಿಲ್ಲಿಸಲಾಗಿದೆ.

ಮೊದಲಬಾರಿಗೆ ಜರ್ಮನಿ, ಇಟಲಿ, ಸ್ಪೇನ್​​ ಜೆಕ್​ ಗಣರಾಜ್ಯದಲ್ಲಿ ತಾಪಮಾನ 41 °C ದಾಟಿದೆ. ಸಾಮಾನ್ಯಕ್ಕಿಂತ ಹೆಚ್ಚು ತಾಪಮಾನವನ್ನು ಇಲ್ಲಿನ ಜನರು ಸದ್ಯ ಎದುರಿಸುತ್ತಿದ್ದಾರೆ. ತೀವ್ರ ಶಾಖಕ್ಕೆ ರಸ್ತೆ ಹಾಳಾಗುತ್ತಿರುವ ವಿಡಿಯೋಗಳು, ಪ್ರಾಣಿಗಳಿಗೆ, ತಿನ್ನುವ ಆಹಾರಕ್ಕೆ ಆಗುತ್ತಿರುವ ಸಮಸ್ಯೆ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ ವಿಡಿಯೋಗಳು ಹರಿದಾಡುತ್ತಿದೆ.

Ksrtc ರಾಜ್ಯದಲ್ಲಿ ಮತ್ತೆ ಸಾರಿಗೆ ಬಸ್ ಟಿಕೆಟ್ ದರ ಏರಿಕೆ??

Ketan agarwal ಕೇತನ್​ ಸಾವಿಗೆ ಅಪಹಾಸ್ಯ:​ ವೈದ್ಯೆಯ ಲೈಸೆನ್ಸ್ 5 ವರ್ಷ ಸಸ್ಪೆಂಡ್! ವಿಡಿಯೋ ನೋಡಿ

Chikkaballapura ಹೋಂಸ್ಟೇನಲ್ಲಿ ಯುವತಿ ಸಾವು ಪ್ರಕರಣ – ಮೃತ ಸುರಭಿಯ ಗ್ರಾಟಿಟ್ಯೂಡ್ ಜರ್ನಲ್ ಬಹಿರಂಗ

Hardik pandya ಮುಂಬೈ ಬಿಟ್ಟು ಬೆಂಗಳೂರಿಗೆ ಶಿಫ್ಟ್ ಆದ ಹಾರ್ದಿಕ್ ಪಾಂಡ್ಯ

TAGGED:#meltingroads #deathtole #europecountries #news #newsicsEurope reels under heatwave
Share This Article
Facebook Twitter Copy Link Print
Previous Article Health Tips ಬೆಳಗ್ಗೆ ಎದ್ದ ತಕ್ಷಣ ಮೊಬೈಲ್ ನೋಡ್ಬೇಡಿ, ದಿನವಿಡೀ ಆಕ್ಟಿವ್ ಆಗಿರಲು ಇಲ್ಲಿದೆ ಸಿಂಪಲ್ ಸೂತ್ರ
Next Article Horoscope ದಿನದ ರಾಶಿಫಲ: ಇಂದು ನಿಮ್ಮ ರಾಶಿಯ ಭವಿಷ್ಯ ಹೇಗಿದೆ? ಇಲ್ಲಿದೆ ಇಂದಿನ ಪಂಚಾಂಗ ಮತ್ತು ಫಲ ಬಲ!

Popular Posts

Whatsapp Username ವಾಟ್ಸ್ಯಾಪ್‌ನ ಹೊಸ ‘ಯೂಸರ್‌ನೇಮ್’ ಫೀಚರ್‌ಗೆ ಕೇಂದ್ರ ಸರ್ಕಾರ ಬ್ರೇಕ್

2 Min Read

Banglore ಬೇಬಿ ಕೇರ್ ಸೆಂಟರ್​ನಲ್ಲಿ ಮಕ್ಕಳಿಗೆ ದೈಹಿಕ ಹಿಂಸೆ – FIR ದಾಖಲು

1 Min Read

Yash toxic ‘ಲೇಡೀಸ್ ಅಂಡ್ ಲೇಡೀಸ್’ ಟೀಸರ್‌ನಲ್ಲಿ ಅಬ್ಬರಿಸಿದ ಪಂಚಕನ್ಯೆಯರು! ಸ್ಟೋರಿ ಲೈನ್‌ ಏನ್ ಹೇಳ್ತಿದೆ?

2 Min Read

Surgery ಗಿಳಿಯ ಹೊಟ್ಟೆಯಲ್ಲೇ ಸಿಲುಕಿದ ಎಕ್ಸ್‌ಟ್ರಾ ಲಾರ್ಜ್‌ ಮೊಟ್ಟೆ; ₹1.5 ಲಕ್ಷದ ಶಸ್ತ್ರಚಿಕಿತ್ಸೆಗಾಗಿ ಕೊಲ್ಕತ್ತಾದಿಂದ ದೆಹಲಿಗೆ ರವಾನೆ!

1 Min Read

You Might Also Like

ಕರ್ನಾಟಕದೇಶಪ್ರಮುಖ

Cabinet Expansion: ಯಂಗ್ ಶಾಸಕರ ಪಟ್ಟಿಯೊಂದಿಗೆ ನಾಳೆ ಸಿಎಂ ದೆಹಲಿಗೆ – ಜುಲೈ 8ಕ್ಕೆ ಆಗಲಿದೆಯಾ ಸಚಿವ ಸಂಪುಟ ವಿಸ್ತರಣೆ?

3 Min Read
Crimeದೇಶಪ್ರಮುಖ

Mumbai ಇಬ್ಬರು ನಟಿಯರು, ಒಂದು ರಾತ್ರಿ, ಎರಡು ಲಕ್ಷ ; ಹೈಟೆಕ್ ಹೋಟೆಲ್‌ ದಂಧೆ, ಮೇಕಪ್ ಆರ್ಟಿಸ್ಟ್ ಬಾಯ್ಬಿಟ್ಟ ಸತ್ಯವೇನು?

3 Min Read
filmದೇಶವೈರಲ್

Bollywood ಪತಿ ಮತ್ತು ತಂದೆಯೊಂದಿಗೆ ಡಿನ್ನರ್‌ಗೆ ಬಂದ ಸೋನಾಕ್ಷಿ ಸಿನ್ಹಾ: ಫೋಟೋಗ್ರಾಫರ್‌ಗಳ ಅತಿರೇಕದ ವರ್ತನೆಗೆ ಬೇಸತ್ತ ನಟಿ

1 Min Read
Crimeಕರ್ನಾಟಕಪ್ರಮುಖ

Dharavad ಹೆಂಡತಿ ದಪ್ಪ ಇದ್ದಾಳೆಂದು ಕತ್ತು ಹಿಸುಕಿ ಕೊಂದ ಪಾಪಿ ಪತಿ.!

1 Min Read

Social Networks

Facebook-f Instagram Twitter
Welcome Back!

Sign in to your account

Lost your password?