Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > Double-Decker Corridor ಮೆಟ್ರೊ ಡಬಲ್ ಡೆಕ್ಕರ್‌ನಿಂದ ಬೆಂಗಳೂರಲ್ಲಿ ಟ್ರಾಫಿಕ್, ಮಾಲಿನ್ಯ ಮತ್ತಷ್ಟು ಹೆಚ್ಚಳ: ಐಐಎಸ್‌ಸಿ ಎಚ್ಚರಿಕೆ!
ಪ್ರಮುಖಕರ್ನಾಟಕ

Double-Decker Corridor ಮೆಟ್ರೊ ಡಬಲ್ ಡೆಕ್ಕರ್‌ನಿಂದ ಬೆಂಗಳೂರಲ್ಲಿ ಟ್ರಾಫಿಕ್, ಮಾಲಿನ್ಯ ಮತ್ತಷ್ಟು ಹೆಚ್ಚಳ: ಐಐಎಸ್‌ಸಿ ಎಚ್ಚರಿಕೆ!

Share
3 Min Read
SHARE

newsics.com| ನ್ಯೂಸಿಕ್ಸ್

ಬೆಂಗಳೂರು: ರಾಜಧಾನಿ ಬೆಂಗಳೂರಿನ ಟ್ರಾಫಿಕ್ ಸಮಸ್ಯೆಗೆ ಮುಕ್ತಿ ನೀಡುವ ನಿಟ್ಟಿನಲ್ಲಿ ಸಿದ್ಧವಾಗುತ್ತಿರುವ ‘ನಮ್ಮ ಮೆಟ್ರೊ’ 3ನೇ ಹಂತದ ಯೋಜನೆಗೆ ಆತಂಕಕಾರಿ ವರದಿಯೊಂದು ಹೊರಬಿದ್ದಿದೆ. ಮೆಟ್ರೊ ಹಳಿಗಳ ಜೊತೆಗೆ ಖಾಸಗಿ ವಾಹನಗಳ ಸಂಚಾರಕ್ಕಾಗಿ ‘ಡಬಲ್ ಡೆಕ್ಕರ್’ ಮೇಲ್ಸೇತುವೆಗಳನ್ನು ಕಟ್ಟುವುದು ನಗರದ ಪರಿಸರ ಮತ್ತು ಆರ್ಥಿಕತೆಗೆ ದೊಡ್ಡ ಹೊರೆಯಾಗಲಿದೆ ಎಂದು ಭಾರತೀಯ ವಿಜ್ಞಾನ ಸಂಸ್ಥೆಯ (IISc) ಸುಸ್ಥಿರ ಸಾರಿಗೆ ಪ್ರಯೋಗಾಲಯವು ಎಚ್ಚರಿಸಿದೆ.

ಕೇಂದ್ರ ಸರ್ಕಾರದ ನಗರ ವ್ಯವಹಾರಗಳ ಸಚಿವಾಲಯದ ಸೂಚನೆಯ ಮೇರೆಗೆ ಐಐಎಸ್‌ಸಿಯ ಪ್ರೊ. ಆಶಿಶ್ ವರ್ಮಾ ಅವರ ನೇತೃತ್ವದ ತಂಡವು ಈ ವಿಶೇಷ ತಾಂತ್ರಿಕ ಪರಿಶೀಲನೆ ನಡೆಸಿದೆ. ಡಬಲ್ ಡೆಕ್ಕರ್ ಕಾರಿಡಾರ್‌ಗಳಿಂದಾಗಿ 2041ರ ವೇಳೆಗೆ ಬೆಂಗಳೂರಿನ ಸಾರಿಗೆ ವ್ಯವಸ್ಥೆ ಮತ್ತು ಪ್ರಕೃತಿಯ ಮೇಲಾಗುವ ಹಾನಿಯ ಕುರಿತು ವರದಿಯಲ್ಲಿ ಕಣ್ಣಿಗೆ ಕಟ್ಟುವಂತಹ ಮಹತ್ವದ ಅಂಶಗಳನ್ನು ಉಲ್ಲೇಖಿಸಲಾಗಿದೆ.

ಮೆಟ್ರೊ ಮಾರ್ಗದೊಂದಿಗೆ ರಸ್ತೆಗಳನ್ನು ವಿಸ್ತರಿಸುವ ಡಬಲ್ ಡೆಕ್ಕರ್ ಮಾದರಿಯು ಸಾರ್ವಜನಿಕ ಸಾರಿಗೆಯ ಮೂಲ ಆಶಯಕ್ಕೆ ಪೆಟ್ಟು ಬೀಳಲಿದೆ ಎಂದು ವರದಿ ಸ್ಪಷ್ಟಪಡಿಸಿದೆ. ಕೇವಲ ಮೆಟ್ರೊ ಮಾರ್ಗವಷ್ಟೇ ಇದ್ದರೆ 2041ರ ವೇಳೆಗೆ ನಿತ್ಯ 8.09 ಲಕ್ಷ ಜನರು ಇದರಲ್ಲಿ ಪ್ರಯಾಣಿಸಲಿದ್ದಾರೆ. ಆದರೆ ಮೇಲ್ಸೇತುವೆ ನಿರ್ಮಿಸಿದರೆ ಈ ಸಂಖ್ಯೆ 7.98 ಲಕ್ಷಕ್ಕೆ ಕುಸಿಯಲಿದೆ. ಅಂದರೆ, ರಸ್ತೆ ಸೌಲಭ್ಯ ಸಿಗುತ್ತದೆ ಎಂಬ ಕಾರಣಕ್ಕೆ ಪ್ರತಿದಿನ 11 ಸಾವಿರಕ್ಕೂ ಹೆಚ್ಚು ಪ್ರಯಾಣಿಕರು ಮೆಟ್ರೊ ಬಿಟ್ಟು ಸ್ವಂತ ವಾಹನಗಳತ್ತ ಮುಖ ಮಾಡಲಿದ್ದಾರೆ. ಇದರಿಂದ ಬಿಎಂಟಿಸಿ ಬಸ್ ಬಳಕೆ ಶೇ 6.4 ರಷ್ಟು ಮತ್ತು ಮೆಟ್ರೊ ಬಳಕೆ ಶೇ 1.4 ರಷ್ಟು ಕುಸಿಯುವ ಅಂದಾಜಿದೆ.

ಇನ್ನು, ರಸ್ತೆಯ ಸಾಮರ್ಥ್ಯ ಹೆಚ್ಚಾದಂತೆ ಜನರು ಸಾರ್ವಜನಿಕ ಸಾರಿಗೆಯನ್ನು ಬಿಟ್ಟು ಸ್ವಂತ ಕಾರು ಮತ್ತು ಬೈಕ್‌ಗಳನ್ನು ರಸ್ತೆಗಿಳಿಸಲು ಆರಂಭಿಸುತ್ತಾರೆ. ಐಐಎಸ್‌ಸಿ ಅಂದಾಜಿನ ಪ್ರಕಾರ, ಈ ಮೇಲ್ಸೇತುವೆಗಳಿಂದಾಗಿ ನಗರದಲ್ಲಿ ಕಾರುಗಳ ಬಳಕೆ ಶೇ 3.8, ಬೈಕ್‌ಗಳ ಓಡಾಟ ಶೇ 1.28 ಮತ್ತು ಆಟೋ/ಟ್ಯಾಕ್ಸಿಗಳ ಸಂಚಾರ ಶೇ 2.8 ರಷ್ಟು ವೃದ್ಧಿಯಾಗಲಿದೆ. ಇದು ನಗರದ ಸಂಚಾರ ದಟ್ಟಣೆಯನ್ನು ಮತ್ತಷ್ಟು ಹದಗೆಡಿಸಲಿದೆ.

ಖಾಸಗಿ ವಾಹನಗಳ ದಟ್ಟಣೆ ಹೆಚ್ಚಾಗುವುದರಿಂದ ಬೆಂಗಳೂರಿನ ಗಾಳಿಯ ಗುಣಮಟ್ಟ ತೀವ್ರವಾಗಿ ಹಾಳಾಗಲಿದೆ.

  • ಕಾರ್ಬನ್ ಡೈಆಕ್ಸೈಡ್: ನಿತ್ಯ 17,012 ಕೆ.ಜಿ ಹೆಚ್ಚುವರಿ ಹೊರಸೂಸುವಿಕೆ
  • ಕಾರ್ಬನ್ ಮಾನಾಕ್ಸೈಡ್: ನಿತ್ಯ 85.9 ಕೆ.ಜಿ ಹೆಚ್ಚುವರಿ ಪ್ರಮಾಣ
  • ಸಾರಜನಕದ ಆಕ್ಸೈಡ್: ನಿತ್ಯ 12.6 ಕೆ.ಜಿ ಹೆಚ್ಚುವರಿ ಪ್ರಮಾಣ
  • ಹೈಡ್ರೋಕಾರ್ಬನ್: ನಿತ್ಯ 19.5 ಕೆ.ಜಿ ಹೆಚ್ಚುವರಿ ಪ್ರಮಾಣ
  • ಪಿಎಂ 2.5 ಧೂಳಿನ ಕಣಗಳು: ನಿತ್ಯ 1.1 ಕೆ.ಜಿ ಹೆಚ್ಚುವರಿ ಪ್ರಮಾಣ

ಆರೋಗ್ಯಕ್ಕೆ ಅತ್ಯಂತ ಹಾನಿಕಾರಕವಾಗಿರುವ ಈ ಸೂಕ್ಷ್ಮ ಧೂಳಿನ ಕಣಗಳು ಜನರಲ್ಲಿ ಉಸಿರಾಟದ ಕಾಯಿಲೆಗಳನ್ನು ಹೆಚ್ಚಿಸಲಿವೆ. ಇದರೊಂದಿಗೆ ನಗರದಲ್ಲಿ ಪ್ರತಿದಿನ 7,000 ಲೀಟರ್ ಹೆಚ್ಚುವರಿ ಇಂಧನ ವ್ಯಯವಾಗಲಿದ್ದು, ಸಾರ್ವಜನಿಕರ ಬರೋಬ್ಬರಿ 6.45 ಲಕ್ಷ ರೂಪಾಯಿ ಹಣ ನಿತ್ಯ ಇಂಧನಕ್ಕಾಗಿ ಪೋಲಾಗಲಿದೆ.

ಬೊಕ್ಕಸಕ್ಕೆ ₹2,863 ಕೋಟಿ ಹೆಚ್ಚುವರಿ ಹೊರೆ! ಆದಾಯ ದರದಲ್ಲೂ ಕುಸಿತ

ಕೇವಲ ಸಾರಿಗೆಗೆ ಮಾತ್ರವಲ್ಲದೆ ರಾಜ್ಯದ ಬೊಕ್ಕಸಕ್ಕೂ ಈ ಯೋಜನೆ ಭಾರಿ ನಷ್ಟ ತರಲಿದೆ. ಕೇವಲ ಮೆಟ್ರೊ ನಿರ್ಮಿಸುವುದಕ್ಕಿಂತ ಡಬಲ್ ಡೆಕ್ಕರ್ ಕೈಗೆತ್ತಿಕೊಂಡರೆ ಬರೋಬ್ಬರಿ 2,863 ಕೋಟಿ ರೂಪಾಯಿ ಹೆಚ್ಚುವರಿ ಬಂಡವಾಳ ಬೇಕಾಗುತ್ತದೆ. ಬೃಹತ್ ಪಿಲ್ಲರ್‌ಗಳು ಮತ್ತು ಬಹುಹಂತದ ನಿಲ್ದಾಣಗಳ ನಿರ್ಮಾಣ ಇದಕ್ಕೆ ಕಾರಣ. ಕೇಂದ್ರ ಸರ್ಕಾರ 2024ರಲ್ಲಿ ಈ ಯೋಜನೆಗೆ ಒಪ್ಪಿಗೆ ನೀಡಿದಾಗ ಡಬಲ್ ಡೆಕ್ಕರ್ ಇರಲಿಲ್ಲ, ಆಗ ಯೋಜನೆಯ ಆರ್ಥಿಕ ಆಂತರಿಕ ಲಾಭದ ದರವು (EIRR) ಶೇ 9.07 ರಷ್ಟಿತ್ತು. ಆದರೆ ಈಗ ಇದನ್ನು ಸೇರಿಸಿದ ಕಾರಣ ಈ ಆದಾಯದ ದರವು ಶೇ 5.43 ಕ್ಕೆ ಕುಸಿದಿದೆ. ಯಾವುದೇ ಯೋಜನೆ ಯಶಸ್ವಿಯಾಗಲು ಈ ದರ ಕುಸಿಯಬಾರದು, ಹೀಗಾಗಿ ಆರ್ಥಿಕವಾಗಿಯೂ ಇದು ನಷ್ಟದಾಯಕ ಎಂದು ವರದಿ ಹೇಳಿದೆ.

ಎಲ್ಲೆಲ್ಲಿ ನಿರ್ಮಾಣಕ್ಕೆ ಪ್ರಸ್ತಾವನೆ ಇತ್ತು?

ಮೆಟ್ರೊ 3ನೇ ಹಂತದ ಅಡಿಯಲ್ಲಿ ಜೆ.ಪಿ.ನಗರ 4ನೇ ಹಂತದಿಂದ ಹೆಬ್ಬಾಳದವರೆಗೆ ಹಾಗೂ ಹೊಸಹಳ್ಳಿಯಿಂದ ಕಡಬಗೆರೆಯವರೆಗೆ ಹೊಸ ಮಾರ್ಗಗಳು ಬರಲಿವೆ. ಇದರಲ್ಲಿ ರಾಗಿಗುಡ್ಡದಿಂದ ಸಿಲ್ಕ್ ಬೋರ್ಡ್ (ಈಗಾಗಲೇ ಸಿದ್ಧವಾಗಿದೆ), ಸರ್ಜಾಪುರದಿಂದ ಇಬ್ಬಲೂರು ಮತ್ತು ಅಗರದಿಂದ ಕೋರಮಂಗಲ ಭಾಗದಲ್ಲಿ ಡಬಲ್ ಡೆಕ್ಕರ್ ಸೇರಿಸಲು ಉದ್ದೇಶಿಸಲಾಗಿತ್ತು.

ಖಾಸಗಿ ವಾಹನಗಳಿಗೆ ಉತ್ತೇಜನ ನೀಡುವ ಇಂತಹ ಮೇಲ್ಸೇತುವೆ ಯೋಜನೆಗಳು ದೀರ್ಘಾವಧಿಯಲ್ಲಿ ಬೆಂಗಳೂರಿಗೆ ಮಾರಕವಾಗಲಿವೆ ಎಂದು ಐಐಎಸ್‌ಸಿ ತಿಳಿಸಿದೆ. ಹೀಗಾಗಿ ಸರ್ಕಾರ ತಕ್ಷಣವೇ ಈ ಯೋಜನೆಯನ್ನು ಮರುಪರಿಶೀಲಿಸುವುದು ಒಳಿತು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

 

VB G RAM G ವಿಬಿ ಜಿ ರಾಮ್ ಜಿ ಇಂದಿನಿಂದ ಜಾರಿ, ಕೂಲಿ ದಿನ,‌ ದರ ಎಲ್ಲವೂ ಹೆಚ್ಚಳ!

TAGGED:#Bengaluru #Metro #double decker corridor #IISc
Share This Article
Facebook Twitter Copy Link Print
Previous Article VB G RAM G ವಿಬಿ ಜಿ ರಾಮ್ ಜಿ ಇಂದಿನಿಂದ ಜಾರಿ, ಕೂಲಿ ದಿನ,‌ ದರ ಎಲ್ಲವೂ ಹೆಚ್ಚಳ!
Next Article Google Job 9 ಕೋಟಿ ರೂಪಾಯಿ ಸಂಬಳ ತ್ಯಜಿಸಿ ಸ್ವಂತ ಉದ್ಯಮ ಆರಂಭಿಸಿದ ಗೂಗಲ್ ಉದ್ಯೋಗಿ

Popular Posts

Highcourt Order ಶಾಲಾ ಬಸ್‌ನಲ್ಲಿ ಮಗು ಪೋಷಕರ ಕೈಸೇರುವವರೆಗೂ ಶಾಲೆಯದ್ದೇ ಜವಾಬ್ದಾರಿ: ಹೈಕೋರ್ಟ್ ಆದೇಶ

3 Min Read

Robbery attempt ಮೈಸೂರು‌- ಬೆಂಗಳೂರು ಹೆದ್ದಾರಿಯಲ್ಲಿ ದರೋಡೆಗೆ ಯತ್ನ, ಗುಂಡು ಹಾರಿಸಿದ ಮುಸುಕುಧಾರಿಗಳು: ಕೂದಲೆಳೆ ಅಂತರದಲ್ಲಿ ಟ್ರಕ್ ಚಾಲಕ‌ ಪಾರು

1 Min Read

Youtuber Dhanya ನಾನೇನೂ ಜೈಲಿಗೆ ಹೋಗಿಲ್ಲ, ತಂದೆ- ತಾಯಿಗೆ‌ ಕಾಟ ಕೊಡಬೇಡಿ ಎಂದ ಕಾಸರಗೋಡು ಯೂಟ್ಯೂಬರ್ ಧನ್ಯ!

1 Min Read

Life saver nurses ಕಾರಿನಲ್ಲೇ ಹೃದಯಾಘಾತ: ಚಲಿಸುತ್ತಿದ್ದ ಬಸ್‌ನಿಂದ ಜಿಗಿದು ಜೀವ ಉಳಿಸಿದ ಇಬ್ಬರು ನರ್ಸ್‌ಗಳಿಗೆ ಭಾರೀ ಶ್ಲಾಘನೆ!

1 Min Read

You Might Also Like

ಕರ್ನಾಟಕಪ್ರಮುಖ

Bellary ವಿದ್ಯಾರ್ಥಿನಿಗೆ ಲೈಂಗಿಕ ದೌರ್ಜನ್ಯ: ಕಾಮುಕ ಉಪನ್ಯಾಸಕನ ಬಂಧನ

1 Min Read
ದೇಶಪ್ರಮುಖವಿದೇಶವೈರಲ್

Stress job ಕಾರ್ಪೊರೇಟ್ ಕಂಪನಿ‌ ಸ್ಟ್ರೆಸ್ ತಾಳಲಾರದೆ ದೊಡ್ಡ ಸ್ಯಾಲರಿಯ ಜಾಬ್ ಬಿಟ್ಟು ವೇಟ್ರಸ್ ಆದ ಯುವತಿ! ವಿಡಿಯೋ ನೋಡಿ

3 Min Read
ಕರ್ನಾಟಕಪ್ರಮುಖ

Karnataka government| ಪ್ರಜಾಸೇವಾ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿ ಹಿರಿಯ ಐಎಎಸ್ ಅಧಿಕಾರಿ ಹರ್ಷಗುಪ್ತ ನೇಮಕ

1 Min Read
ಕರ್ನಾಟಕದೇಶಪ್ರಮುಖ

Youtuber| ಕುಡಿದು ಕಾರ್ ಚಲಾಯಿಸಿದ ಖ್ಯಾತ ಯೂಟ್ಯೂಬರ್ – ಪ್ರಕರಣ ದಾಖಲು

2 Min Read

Social Networks

Facebook-f Instagram Twitter
Welcome Back!

Sign in to your account

Lost your password?