Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > Highcourt Order ಶಾಲಾ ಬಸ್‌ನಲ್ಲಿ ಮಗು ಪೋಷಕರ ಕೈಸೇರುವವರೆಗೂ ಶಾಲೆಯದ್ದೇ ಜವಾಬ್ದಾರಿ: ಹೈಕೋರ್ಟ್ ಆದೇಶ
ಕರ್ನಾಟಕಪ್ರಮುಖ

Highcourt Order ಶಾಲಾ ಬಸ್‌ನಲ್ಲಿ ಮಗು ಪೋಷಕರ ಕೈಸೇರುವವರೆಗೂ ಶಾಲೆಯದ್ದೇ ಜವಾಬ್ದಾರಿ: ಹೈಕೋರ್ಟ್ ಆದೇಶ

Share
3 Min Read
SHARE

newsics.com | ನ್ಯೂಸಿಕ್ಸ್

ಬೆಂಗಳೂರು: ಶಾಲಾ ಮಕ್ಕಳ ಸುರಕ್ಷತೆ ಹಿನ್ನೆಲೆಯಲ್ಲಿ ಕರ್ನಾಟಕ ಹೈಕೋರ್ಟ್ ಅತಿ ಮಹತ್ವದ ತೀರ್ಪೊಂದನ್ನು ನೀಡಿದೆ.

ಶಾಲಾ ಬಸ್ ಕೇವಲ ಶಾಲಾ ಆವರಣದಲ್ಲಿದ್ದಾಗ ಮಾತ್ರವಲ್ಲ, ಮಗು ಬಸ್ ಹತ್ತಿದಾಗಿನಿಂದ ಹಿಡಿದು ಸಂಜೆ ಸುರಕ್ಷಿತವಾಗಿ ಪೋಷಕರ ಕೈ ಸೇರುವವರೆಗೂ ಮಗುವಿನ ಸಂಪೂರ್ಣ ರಕ್ಷಣೆಯ ಜವಾಬ್ದಾರಿ ಶಾಲಾ ಆಡಳಿತ ಮಂಡಳಿಯದ್ದೇ ಆಗಿರುತ್ತದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಶಾಲಾ ಬಸ್‌ನಲ್ಲಿ ನಡೆದ ಅಪಘಾತವೊಂದರಲ್ಲಿ ನಾಲ್ಕನೇ ತರಗತಿಯ ವಿದ್ಯಾರ್ಥಿ ಕಣ್ಣು ಕಳೆದುಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ, ಖಾಸಗಿ ಶಾಲೆಯೊಂದರ ಆಡಳಿತ ಮಂಡಳಿ ತನ್ನ ವಿರುದ್ಧದ ಕ್ರಿಮಿನಲ್ ಮೊಕದ್ದಮೆಯನ್ನು ರದ್ದುಗೊಳಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.

ಶಾಲಾ ಮಂಡಳಿ ಅರ್ಜಿ ವಜಾ

ಮಂಡ್ಯ ಜಿಲ್ಲೆಯ ಮದ್ದೂರಿನ ‘ದಿವ್ಯಜ್ಯೋತಿ ಶಾಲಾ ಆಡಳಿತ ಮಂಡಳಿ’ ವಿರುದ್ಧ ದಾಖಲಾಗಿದ್ದ ಎಫ್‌ಐಆರ್ (FIR) ರದ್ದು ಕೋರಿ ಹೈಕೋರ್ಟ್ ಮೆಟ್ಟಿಲೇರಿತ್ತು. ಈ ಕ್ರಿಮಿನಲ್ ಅರ್ಜಿಯ ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠವು ಶಾಲೆಯ ಮನವಿಯನ್ನು ಪುರಸ್ಕರಿಸಲು ನಿರಾಕರಿಸಿತು.

ಬೆಳೆಯುವ ವಯಸ್ಸಿನ ಪುಟ್ಟ ಮಗುವೊಂದು ತನ್ನ ಇಡೀ ಜೀವನವನ್ನು ದೃಷ್ಟಿಹೀನತೆಯ ಶಾಪದೊಂದಿಗೆ ಕಳೆಯುವಂತಾಗಿರುವ ಈ ಗಂಭೀರ ಪರಿಸ್ಥಿತಿಯಲ್ಲಿ, ತನಿಖೆಯ ಆರಂಭಿಕ ಹಂತದಲ್ಲೇ ಪ್ರಕರಣವನ್ನು ರದ್ದುಗೊಳಿಸಲು ಸಾಧ್ಯವಿಲ್ಲ ಎಂದು ನ್ಯಾಯಪೀಠವು ಆದೇಶಿಸಿದೆ.

ಮಕ್ಕಳ ಸುರಕ್ಷತೆ ಶಾಸನಬದ್ಧ ಜವಾಬ್ದಾರಿ

ವಿಚಾರಣೆ ವೇಳೆ ಕಠಿಣ ನಿಲುವು ತಳೆದ ನ್ಯಾಯಾಧೀಶರು, “ಶಾಲಾ ಬಸ್‌ಗಳಲ್ಲಿ ಮಕ್ಕಳ ಸುರಕ್ಷತೆ ಎನ್ನುವುದು ಕೇವಲ ದಾಕ್ಷಿಣ್ಯ ಅಥವಾ ಅನುಕೂಲದ ವಿಷಯವಲ್ಲ. ಇದು ‘ಕರ್ನಾಟಕ ಶಿಕ್ಷಣ ಸಂಸ್ಥೆಗಳ ನಿಯಮಾವಳಿಗಳು 2018’ ರ ಅಡಿ ಪ್ರತಿ ಶಾಲೆಯೂ ಕಡ್ಡಾಯವಾಗಿ ಪಾಲಿಸಲೇಬೇಕಾದ ಶಾಸನಬದ್ಧ ಜವಾಬ್ದಾರಿಯಾಗಿದೆ ಎಂದು ನೆನಪಿಸಿದರು.

ಮಗು ಬಸ್ ಹತ್ತಿದ ಮೇಲೆ ಕೊನೆಯ ಸ್ಟಾಪ್ ಬರುವವರೆಗೂ ಶಾಲಾ ಮಂಡಳಿ ತನಗೂ ಇದಕ್ಕೂ ಸಂಬಂಧವಿಲ್ಲ ಎಂದು ಹೇಳಿ ತನ್ನ ಹೊಣೆಗಾರಿಕೆಯಿಂದ ನುಣುಚಿಕೊಳ್ಳಲು ಸಾಧ್ಯವೇ ಇಲ್ಲ ಎಂದು ನ್ಯಾಯಾಲಯ ತರಾಟೆಗೆ ತೆಗೆದುಕೊಂಡಿತು.

ಘಟನೆ ನಡೆದ ಸಂದರ್ಭದಲ್ಲಿ ಶಾಲಾ ಬಸ್‌ನ ಒಳಗಿನ ನಿಯಮ ಉಲ್ಲಂಘನೆಗಳ ಬಗ್ಗೆ ನ್ಯಾಯಾಲಯ ಹಲವು ಪ್ರಶ್ನೆಗಳನ್ನು ಎತ್ತಿದೆ. “ಘಟನೆ ನಡೆದಾಗ ಬಸ್‌ನಲ್ಲಿ ನಿಜಕ್ಕೂ ಅಟೆಂಡರ್ ಇದ್ದರೇ? ಬಸ್‌ನಲ್ಲಿದ್ದ ಸಿಸಿಟಿವಿ ಕ್ಯಾಮೆರಾ ಕೇವಲ ‘ಅಲಂಕಾರಿಕ ವಸ್ತು’ ಆಗಿತ್ತೇ ಅಥವಾ ಚಾಲನೆಯಲ್ಲಿತ್ತೇ? ಪಟಾಕಿಯಂತಹ ನಿಷೇಧಿತ ಅಥವಾ ಅಪಾಯಕಾರಿ ವಸ್ತುಗಳನ್ನು ಸಣ್ಣ ಮಕ್ಕಳು ಬಸ್‌ನ ಒಳಗೆ ತರಲು ಹೇಗೆ ಸಾಧ್ಯವಾಯಿತು?” ಎಂದು ಪ್ರಶ್ನಿಸಿದ ನ್ಯಾಯಪೀಠ, ಈ ಎಲ್ಲಾ ಗಂಭೀರ ಪ್ರಶ್ನೆಗಳಿಗೆ ಪೂರ್ಣ ಪ್ರಮಾಣದ ಪೊಲೀಸ್ ತನಿಖೆಯಿಂದಲೇ ಉತ್ತರ ಸಿಗಬೇಕಾಗಿದೆ. ಆಡಳಿತ ಮಂಡಳಿಯ ನಿರ್ಲಕ್ಷ್ಯದ ವಿಸ್ತಾರ ಎಷ್ಟಿದೆ ಎಂಬುದು ತನಿಖೆಯ ನಂತರವಷ್ಟೇ ಸಾಬೀತಾಗಬೇಕು ಎಂದಿತು.

ಘಟನೆಯ ಹಿನ್ನೆಲೆ

ಈ ದುರದೃಷ್ಟಕರ ಘಟನೆ ನಡೆದಿದ್ದು 2025ರ ಆಗಸ್ಟ್ 1ರಂದು. ಮದ್ದೂರಿನ ದಿವ್ಯಜ್ಯೋತಿ ಶಾಲೆಯ ಬಸ್‌ನಲ್ಲಿ ಶಾಲಾ ಅವಧಿಯ ಮುಕ್ತಾಯದ ನಂತರ ಮಕ್ಕಳು ಮನೆಗೆ ಮರಳುತ್ತಿದ್ದರು. ಈ ವೇಳೆ ಬಸ್‌ನಲ್ಲಿದ್ದ ಇತರ ವಿದ್ಯಾರ್ಥಿಗಳು ತಂದಿದ್ದ ಬಣ್ಣದ ಕಾಗದ ಹಾಗೂ ಪಟಾಕಿ ಮಾದರಿಯ ಸಿಡಿಮದ್ದೊಂದು ದಿಢೀರನೆ ಸಿಡಿದಿದೆ. ಈ ಸ್ಫೋಟದ ತೀವ್ರತೆಗೆ 4ನೇ ತರಗತಿಯ ಅಮಾಯಕ ಬಾಲಕನ ಕಣ್ಣಿಗೆ ಗಂಭೀರ ಗಾಯವಾಗಿತ್ತು. ಆಸ್ಪತ್ರೆಯಲ್ಲಿ ಸುದೀರ್ಘ ಚಿಕಿತ್ಸೆ ನೀಡಿದ ಹೊರಾಗಿಯೂ ಬಾಲಕನ ಒಂದು ಕಣ್ಣಿನ ದೃಷ್ಟಿ ಮರಳಲಿಲ್ಲ. ವೈದ್ಯರು ಆ ಮಗುವಿಗೆ ಶೇಕಡಾ 40ರಷ್ಟು ಅಂಗವೈಕಲ್ಯ ಉಂಟಾಗಿದೆ ಎಂದು ದೃಢೀಕರಿಸಿದ್ದರು.

ಮಗುವಿನ ಪೋಷಕರು ಶಾಲೆಯ ಬೇಜವಾಬ್ದಾರಿತನವೇ ಈ ಘಟನೆಗೆ ಕಾರಣ ಎಂದು ಆರೋಪಿಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದನ್ನು ಪ್ರಶ್ನಿಸಿದ್ದ ಶಾಲಾ ಆಡಳಿತ ಮಂಡಳಿಯ ಪರ ವಕೀಲರು, “ಇದು ಶಾಲಾ ಅವಧಿ ಮುಗಿದ ನಂತರ ಬಸ್‌ನಲ್ಲಿ ಮತ್ತೊಂದು ಮಗು ಮಾಡಿದ ಆಕಸ್ಮಿಕ ಕೃತ್ಯವಾಗಿದೆ. ಇದಕ್ಕೆ ಶಾಲಾ ಆಡಳಿತ ಮಂಡಳಿಯನ್ನು ನೇರ ಹೊಣೆಗಾರರನ್ನಾಗಿ ಮಾಡಲು ಕಾನೂನಿನಲ್ಲಿ ಅವಕಾಶವಿಲ್ಲ. ಶಾಲಾ ನಿಯಮಾವಳಿಗಳ ಪ್ರಕಾರ ಬಸ್‌ನಲ್ಲಿ ಸಿಸಿಟಿವಿ ಕ್ಯಾಮೆರಾ ಮತ್ತು ಅಟೆಂಡರ್ ಇಬ್ಬರನ್ನೂ ನಿಯೋಜಿಸಲಾಗಿತ್ತು. ಹೀಗಾಗಿ ಶಾಲೆಯ ಮೇಲಿನ ಎಫ್‌ಐಆರ್ ರದ್ದುಪಡಿಸಬೇಕು” ಎಂದು ವಾದಿಸಿದ್ದರು. ಆದರೆ, ಹೈಕೋರ್ಟ್ ಈ ವಾದವನ್ನು ಸಂಪೂರ್ಣವಾಗಿ ತಿರಸ್ಕರಿಸಿ, ತನಿಖೆ ಮುಂದುವರಿಸಲು ಹಸಿರು ನಿಶಾನೆ ನೀಡಿದೆ.

Robbery attempt ಮೈಸೂರು‌- ಬೆಂಗಳೂರು ಹೆದ್ದಾರಿಯಲ್ಲಿ ದರೋಡೆಗೆ ಯತ್ನ, ಗುಂಡು ಹಾರಿಸಿದ ಮುಸುಕುಧಾರಿಗಳು: ಕೂದಲೆಳೆ ಅಂತರದಲ್ಲಿ ಟ್ರಕ್ ಚಾಲಕ‌ ಪಾರು

Youtuber Dhanya ನಾನೇನೂ ಜೈಲಿಗೆ ಹೋಗಿಲ್ಲ, ತಂದೆ- ತಾಯಿಗೆ‌ ಕಾಟ ಕೊಡಬೇಡಿ ಎಂದ ಕಾಸರಗೋಡು ಯೂಟ್ಯೂಬರ್ ಧನ್ಯ!

Life saver nurses ಕಾರಿನಲ್ಲೇ ಹೃದಯಾಘಾತ: ಚಲಿಸುತ್ತಿದ್ದ ಬಸ್‌ನಿಂದ ಜಿಗಿದು ಜೀವ ಉಳಿಸಿದ ಇಬ್ಬರು ನರ್ಸ್‌ಗಳಿಗೆ ಭಾರೀ ಶ್ಲಾಘನೆ!

 

TAGGED:#highcourt #order #mandya #school #student #newsics #news
Share This Article
Facebook Twitter Copy Link Print
Previous Article Robbery attempt ಮೈಸೂರು‌- ಬೆಂಗಳೂರು ಹೆದ್ದಾರಿಯಲ್ಲಿ ದರೋಡೆಗೆ ಯತ್ನ, ಗುಂಡು ಹಾರಿಸಿದ ಮುಸುಕುಧಾರಿಗಳು: ಕೂದಲೆಳೆ ಅಂತರದಲ್ಲಿ ಟ್ರಕ್ ಚಾಲಕ‌ ಪಾರು

Popular Posts

Highcourt Order ಶಾಲಾ ಬಸ್‌ನಲ್ಲಿ ಮಗು ಪೋಷಕರ ಕೈಸೇರುವವರೆಗೂ ಶಾಲೆಯದ್ದೇ ಜವಾಬ್ದಾರಿ: ಹೈಕೋರ್ಟ್ ಆದೇಶ

3 Min Read

Robbery attempt ಮೈಸೂರು‌- ಬೆಂಗಳೂರು ಹೆದ್ದಾರಿಯಲ್ಲಿ ದರೋಡೆಗೆ ಯತ್ನ, ಗುಂಡು ಹಾರಿಸಿದ ಮುಸುಕುಧಾರಿಗಳು: ಕೂದಲೆಳೆ ಅಂತರದಲ್ಲಿ ಟ್ರಕ್ ಚಾಲಕ‌ ಪಾರು

1 Min Read

Youtuber Dhanya ನಾನೇನೂ ಜೈಲಿಗೆ ಹೋಗಿಲ್ಲ, ತಂದೆ- ತಾಯಿಗೆ‌ ಕಾಟ ಕೊಡಬೇಡಿ ಎಂದ ಕಾಸರಗೋಡು ಯೂಟ್ಯೂಬರ್ ಧನ್ಯ!

1 Min Read

Life saver nurses ಕಾರಿನಲ್ಲೇ ಹೃದಯಾಘಾತ: ಚಲಿಸುತ್ತಿದ್ದ ಬಸ್‌ನಿಂದ ಜಿಗಿದು ಜೀವ ಉಳಿಸಿದ ಇಬ್ಬರು ನರ್ಸ್‌ಗಳಿಗೆ ಭಾರೀ ಶ್ಲಾಘನೆ!

1 Min Read

You Might Also Like

ಕರ್ನಾಟಕಪ್ರಮುಖ

Bellary ವಿದ್ಯಾರ್ಥಿನಿಗೆ ಲೈಂಗಿಕ ದೌರ್ಜನ್ಯ: ಕಾಮುಕ ಉಪನ್ಯಾಸಕನ ಬಂಧನ

1 Min Read
ದೇಶಪ್ರಮುಖವಿದೇಶವೈರಲ್

Stress job ಕಾರ್ಪೊರೇಟ್ ಕಂಪನಿ‌ ಸ್ಟ್ರೆಸ್ ತಾಳಲಾರದೆ ದೊಡ್ಡ ಸ್ಯಾಲರಿಯ ಜಾಬ್ ಬಿಟ್ಟು ವೇಟ್ರಸ್ ಆದ ಯುವತಿ! ವಿಡಿಯೋ ನೋಡಿ

3 Min Read
ಕರ್ನಾಟಕಪ್ರಮುಖ

Karnataka government| ಪ್ರಜಾಸೇವಾ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿ ಹಿರಿಯ ಐಎಎಸ್ ಅಧಿಕಾರಿ ಹರ್ಷಗುಪ್ತ ನೇಮಕ

1 Min Read
ಕರ್ನಾಟಕದೇಶಪ್ರಮುಖ

Youtuber| ಕುಡಿದು ಕಾರ್ ಚಲಾಯಿಸಿದ ಖ್ಯಾತ ಯೂಟ್ಯೂಬರ್ – ಪ್ರಕರಣ ದಾಖಲು

2 Min Read

Social Networks

Facebook-f Instagram Twitter
Welcome Back!

Sign in to your account

Lost your password?