Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > ಆರೋಗ್ಯ > Health ಪುರುಷರಲ್ಲಿ ಹೆಚ್ಚುತ್ತಿದೆ ಬಿಪಿ, ಮಧುಮೇಹ! ಎನ್‌ಎಫ್‌ಎಚ್‌ಎಸ್‌ನ ಆತಂಕಕಾರಿ ವರದಿಯಲ್ಲೇನಿದೆ?
ಪ್ರಮುಖಆರೋಗ್ಯಲೈಫ್‌ಸ್ಟೈಲ್

Health ಪುರುಷರಲ್ಲಿ ಹೆಚ್ಚುತ್ತಿದೆ ಬಿಪಿ, ಮಧುಮೇಹ! ಎನ್‌ಎಫ್‌ಎಚ್‌ಎಸ್‌ನ ಆತಂಕಕಾರಿ ವರದಿಯಲ್ಲೇನಿದೆ?

Share
2 Min Read
SHARE
newsics.com| ನ್ಯೂಸಿಕ್ಸ್

ಬೆಂಗಳೂರು: ಸಿಲಿಕಾನ್ ಸಿಟಿಯ ಪುರುಷರ ಆರೋಗ್ಯದ ಸ್ಥಿತಿ ದಿನದಿಂದ ದಿನಕ್ಕೆ ಏರುಪೇರಾಗುತ್ತಿರುವುದು ಈಗ ಅಂಕಿ-ಅಂಶಗಳ ಸಮೇತ ಸಾಬೀತಾಗಿದೆ. ಇತ್ತೀಚಿನ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ (NFHS) ಅಂಕಿ-ಅಂಶಗಳು ಈ ಕಹಿ ಸತ್ಯವನ್ನು ಬಹಿರಂಗಪಡಿಸಿವೆ.

ಹೌದು, ರಾಜಧಾನಿಯ ಮಹಿಳೆಯರಿಗೆ ಹೋಲಿಸಿದರೆ ಪುರುಷರಲ್ಲೇ ರಕ್ತದೊತ್ತಡ ಹಾಗೂ ಮಧುಮೇಹದಂತಹ ದೀರ್ಘಕಾಲದ ಕಾಯಿಲೆಗಳು ಅತ್ಯಂತ ವೇಗವಾಗಿ ಹೆಚ್ಚಾಗುತ್ತಿವೆ. ಕಾರ್ಪೊರೇಟ್ ವಲಯದ ಕೆಲಸದ ಒತ್ತಡ, ಬಿಡುವಿಲ್ಲದ ದಿನಚರಿ, ನೆಮ್ಮದಿ ಕೆಡಿಸುವ ಟ್ರಾಫಿಕ್ ಹಾಗೂ ಸಾಂಸಾರಿಕ ಜವಾಬ್ದಾರಿಗಳ ನಡುವೆ ಸಿಲುಕಿರುವ ಪುರುಷರು ತಮ್ಮ ಸ್ವಂತ ಆರೋಗ್ಯದ ಕಡೆಗೆ ಗಮನ ಹರಿಸುತ್ತಿಲ್ಲ. ಇದೇ ಅವರ ಆರೋಗ್ಯ ಕ್ಷೀಣಿಸಲು ಪ್ರಮುಖ ಕಾರಣ ಎಂದು ವೈದ್ಯಕೀಯ ಲೋಕ ಕಳವಳ ವ್ಯಕ್ತಪಡಿಸಿದೆ. ಈ ಆತಂಕಕಾರಿ ಬೆಳವಣಿಗೆಯ ಕುರಿತು ಕೆ. ಸಿ. ಜನರಲ್ ಆಸ್ಪತ್ರೆಯ ಡೀನ್ ಹಾಗೂ ನಿರ್ದೇಶಕರಾದ ಡಾ. ಲಕ್ಷ್ಮಿಪತಿ ಮತ್ತು ಆರೋಗ್ಯ ಇಲಾಖೆ ಆಯುಕ್ತ ಗುರುದತ್ತ ಹೆಗಡೆ ಅವರು ಜಾಗೃತಿ ಮೂಡಿಸಿದ್ದು, ಕೆಲವೊಂದು ಮಹತ್ವದ ಮಾರ್ಗದರ್ಶನ ನೀಡಿದ್ದಾರೆ.

ಈ ರೀತಿಯ ಸದ್ದಿಲ್ಲದ ಕಾಯಿಲೆಗಳು (Silent Killers) ಭವಿಷ್ಯದಲ್ಲಿ ಹೃದಯಾಘಾತ ಹಾಗೂ ಕಿಡ್ನಿ ವೈಫಲ್ಯದಂತಹ ಗಂಭೀರ ಪರಿಸ್ಥಿತಿಗೆ ತಳ್ಳುವುದರಿಂದ, ಪುರುಷರು ತಕ್ಷಣವೇ ಎಚ್ಚೆತ್ತುಕೊಂಡು ತಮ್ಮ ಜೀವನಶೈಲಿಯನ್ನು ಬದಲಿಸಿಕೊಳ್ಳಬೇಕೆಂದು ಆರೋಗ್ಯ ಇಲಾಖೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.

ಸದೃಢ ಆರೋಗ್ಯಕ್ಕಾಗಿ ದಿನಚರಿಯಲ್ಲಿ ಮಾಡಿ ಈ ಬದಲಾವಣೆ

  1. ಆಕ್ಟಿವ್ ಆಗಿರಿ: ಗಂಟೆಗಟ್ಟಲೆ ಕುಳಿತು ಕೆಲಸ ಮಾಡುವವರು ಪ್ರತಿ 45 ನಿಮಿಷಕ್ಕೊಮ್ಮೆ ಸಣ್ಣ ವಿರಾಮ ಪಡೆದು, ಕಚೇರಿಯಲ್ಲೇ 5 ನಿಮಿಷ ನಡೆದಾಡಿ. ಸಾಧ್ಯವಾದಷ್ಟು ಲಿಫ್ಟ್ ಬದಲಿಗೆ ಮೆಟ್ಟಿಲುಗಳನ್ನು ಹತ್ತುವ ಅಭ್ಯಾಸ ಮಾಡಿಕೊಳ್ಳಿ. ಇದು ರಕ್ತ ಪರಿಚಲನೆಯನ್ನು ಉತ್ತಮವಾಗಿಸುತ್ತದೆ.
  2. ಪೌಷ್ಟಿಕ ಆಹಾರಕ್ಕೆ ಆದ್ಯತೆ: ಸಂಸ್ಕರಿಸಿದ ಮತ್ತು ಜಂಕ್ ಫುಡ್‌ಗಳಿಗೆ ಬ್ರೇಕ್ ಹಾಕಿ. ನಿತ್ಯದ ಊಟದಲ್ಲಿ ಹಸಿರು ಸೊಪ್ಪು, ನಾರಿನಂಶವಿರುವ ತರಕಾರಿಗಳು ಮತ್ತು ಬೇಳೆಕಾಳುಗಳನ್ನು ಹೆಚ್ಚಾಗಿ ಸೇವಿಸಿ.
  3. ಉಪ್ಪು-ಸಕ್ಕರೆ ನಿಯಂತ್ರಿಸಿ: ಕಾಫಿ-ಚಹಾದಲ್ಲಿ ಸಕ್ಕರೆ ಪ್ರಮಾಣ ಕಡಿಮೆ ಮಾಡಿ. ಅಡುಗೆಯಲ್ಲಿ ಉಪ್ಪಿನ ಬಳಕೆಯನ್ನು ಮಿತಗೊಳಿಸಿದರೆ ರಕ್ತದೊತ್ತಡವನ್ನು ಸುಲಭವಾಗಿ ಹತೋಟಿಗೆ ತರಬಹುದು.
  4. ಒತ್ತಡ ನಿರ್ವಹಣೆ: ಮಾನಸಿಕ ನೆಮ್ಮದಿಗಾಗಿ ದಿನಕ್ಕೆ ಕನಿಷ್ಠ 10 ನಿಮಿಷಗಳ ಕಾಲ ಪ್ರಾಣಾಯಾಮ ಅಥವಾ ಧ್ಯಾನ ಮಾಡಿ. ಇದು ಮೆದುಳು ಮತ್ತು ರಕ್ತನಾಳಗಳ ಒತ್ತಡವನ್ನು ಕಡಿಮೆ ಮಾಡುತ್ತದೆ.
  5. ಉತ್ತಮ ನಿದ್ರೆ ಮತ್ತು ತಪಾಸಣೆ: ಯಾವುದೇ ವ್ಯಸನಗಳಿದ್ದರೆ ತಕ್ಷಣ ಬಿಟ್ಟುಬಿಡಿ. ಹಾರ್ಮೋನ್‌ಗಳ ಸಮತೋಲನಕ್ಕೆ ನಿತ್ಯ 7 ರಿಂದ 8 ಗಂಟೆಗಳ ಕಾಲ ನೆಮ್ಮದಿಯ ನಿದ್ರೆ ಅಗತ್ಯ.

30 ವರ್ಷ ದಾಟಿದ ಪ್ರತಿಯೊಬ್ಬ ಪುರುಷನೂ ವರ್ಷಕ್ಕೊಮ್ಮೆಯಾದರೂ ಕಡ್ಡಾಯವಾಗಿ ‘ಮಾಸ್ಟರ್ ಹೆಲ್ತ್ ಚೆಕಪ್’ ಮಾಡಿಸಿಕೊಳ್ಳಬೇಕು. ಆರಂಭಿಕ ಹಂತದಲ್ಲೇ ಬಿಪಿ ಅಥವಾ ಶುಗರ್ ಪತ್ತೆಯಾದರೆ ಸುಲಭವಾಗಿ ನಿಯಂತ್ರಿಸಬಹುದು.

 

Health Tips ಬೆಳಗ್ಗೆ ಎದ್ದ ತಕ್ಷಣ ಮೊಬೈಲ್ ನೋಡ್ಬೇಡಿ, ದಿನವಿಡೀ ಆಕ್ಟಿವ್ ಆಗಿರಲು ಇಲ್ಲಿದೆ ಸಿಂಪಲ್ ಸೂತ್ರ

TAGGED:#bp #sugar #men #bangalore #life style #food
Share This Article
Facebook Twitter Copy Link Print
Previous Article Rain Alert ಕರ್ನಾಟಕದಲ್ಲಿ ಮುಂಗಾರು ಅಬ್ಬರ, ಕರಾವಳಿ, ಮಲೆನಾಡು ಸೇರಿ ಪ್ರಮುಖ ಜಿಲ್ಲೆಗಳಿಗೆ ‘ಆರೆಂಜ್ ಅಲರ್ಟ್’ ಘೋಷಣೆ!
Next Article Large crowd ತಿರುಪತಿಯಲ್ಲಿ ಮಿತಿಮೀರಿದ ಭಕ್ತರು: ಇಂದಿನಿಂದ ಸರ್ವ ದರ್ಶನ ಟಿಕೆಟ್ ವಿತರಣೆ ರದ್ದು, ಟಿಟಿಡಿ ಹೇಳಿದ್ದೇನು?

Popular Posts

Whatsapp Username ವಾಟ್ಸ್ಯಾಪ್‌ನ ಹೊಸ ‘ಯೂಸರ್‌ನೇಮ್’ ಫೀಚರ್‌ಗೆ ಕೇಂದ್ರ ಸರ್ಕಾರ ಬ್ರೇಕ್

2 Min Read

Banglore ಬೇಬಿ ಕೇರ್ ಸೆಂಟರ್​ನಲ್ಲಿ ಮಕ್ಕಳಿಗೆ ದೈಹಿಕ ಹಿಂಸೆ – FIR ದಾಖಲು

1 Min Read

Yash toxic ‘ಲೇಡೀಸ್ ಅಂಡ್ ಲೇಡೀಸ್’ ಟೀಸರ್‌ನಲ್ಲಿ ಅಬ್ಬರಿಸಿದ ಪಂಚಕನ್ಯೆಯರು! ಸ್ಟೋರಿ ಲೈನ್‌ ಏನ್ ಹೇಳ್ತಿದೆ?

2 Min Read

Surgery ಗಿಳಿಯ ಹೊಟ್ಟೆಯಲ್ಲೇ ಸಿಲುಕಿದ ಎಕ್ಸ್‌ಟ್ರಾ ಲಾರ್ಜ್‌ ಮೊಟ್ಟೆ; ₹1.5 ಲಕ್ಷದ ಶಸ್ತ್ರಚಿಕಿತ್ಸೆಗಾಗಿ ಕೊಲ್ಕತ್ತಾದಿಂದ ದೆಹಲಿಗೆ ರವಾನೆ!

1 Min Read

You Might Also Like

ಕರ್ನಾಟಕದೇಶಪ್ರಮುಖ

Cabinet Expansion: ಯಂಗ್ ಶಾಸಕರ ಪಟ್ಟಿಯೊಂದಿಗೆ ನಾಳೆ ಸಿಎಂ ದೆಹಲಿಗೆ – ಜುಲೈ 8ಕ್ಕೆ ಆಗಲಿದೆಯಾ ಸಚಿವ ಸಂಪುಟ ವಿಸ್ತರಣೆ?

3 Min Read
Crimeದೇಶಪ್ರಮುಖ

Mumbai ಇಬ್ಬರು ನಟಿಯರು, ಒಂದು ರಾತ್ರಿ, ಎರಡು ಲಕ್ಷ ; ಹೈಟೆಕ್ ಹೋಟೆಲ್‌ ದಂಧೆ, ಮೇಕಪ್ ಆರ್ಟಿಸ್ಟ್ ಬಾಯ್ಬಿಟ್ಟ ಸತ್ಯವೇನು?

3 Min Read
Crimeಕರ್ನಾಟಕಪ್ರಮುಖ

Dharavad ಹೆಂಡತಿ ದಪ್ಪ ಇದ್ದಾಳೆಂದು ಕತ್ತು ಹಿಸುಕಿ ಕೊಂದ ಪಾಪಿ ಪತಿ.!

1 Min Read
ಕರ್ನಾಟಕದೇಶಪ್ರಮುಖ

Mysore ಆಷಾಢ ಶುಕ್ರವಾರಕ್ಕೆ ಚಾಮುಂಡಿ ಬೆಟ್ಟಕ್ಕೆ ಹೋಗುವ ಭಕ್ತಾದಿಗಳು ತಿಳಿಯಬೇಕಾದ ಮಾಹಿತಿ ಇಲ್ಲಿದೆ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?