newsics.com
ಮದುವೆಯಾಗಲು ಹೆಣ್ಣು ಹುಡುಕುತ್ತಿರುವವರಿಗೆ ಇಲ್ಲೊಂದು ಪ್ರೊಫೈಲ್ ಇದೆ. ಆದರೆ ಈಕೆಯನ್ನು ಮದುವೆಯಾಗಲು 18 ಗುಣ ಇರಲೇಬೇಕು. ಈ ಪಟ್ಟಿ ನೋಡಿದ ಹಲವರು ಸುಸ್ತಾಗಿದ್ದಾರೆ.
ರೆಡ್ಡಿಟ್ ಬಳಕೆದಾರನೊಬ್ಬ ಈ ಯುವತಿಯ ಪ್ರೊಫೈಲ್ ನೋಡಿದ್ದಾನೆ. ಮದುವೆಯಾಗಲು ಇಚ್ಚಿಸುವ ಹುಡುಗನಲ್ಲಿ ನನ್ನ ಕೆಲ ಪುಟ್ಟ ಪುಟ್ಟ ಆಸೆ, ಗುಣ ಇರಬೇಕು ಎನ್ನುವ ಬೇಡಿಕೆಗಳಿವೆ ಎಂದು ಹೇಳಿಕೊಂಡಿದ್ದಾಳೆ. ಈಕೆ ಬಯಸುತ್ತಿರುವ ಗುಣ ಏನು ಎಂದು ಮೆಸೇಜ್ ಮಾಡಿದ್ದಾನೆ.
ಆಗ ಆಕೆ ದೊಡ್ಡ ಪಟ್ಟಿಯನ್ನೇ ಕಳುಹಿಸಿದ್ದಾಳೆ. ಈ ಪಟ್ಟಿಯಲ್ಲಿ 18 ಬೇಡಿಕೆಗಳಿವೆ. ಈ ಪಟ್ಟಿಯ 2ನೇ ಗುಣದ ಬೇಡಿಕೆಯಿಂದಲೇ ಈತನ ಈ ಸಂಬಂಧ ಕ್ಲೋಸ್ ಎಂದು ಅರಿವಾಗಿದೆ.
ನನ್ನನ್ನು ಅತ್ಯಂತ ಹೆಚ್ಚು ಅಂದರೆ ಡೀಪ್ ಆಗಿ ಪ್ರೀತಿಸಬೇಕು. ಪ್ರೀತಿ ವಿಚಾರದಲ್ಲಿ ಗಂಡನಿಗೆ ನಾನೇ ಮೊದಲಿರಬೇಕು. ನಾನೇ ಮೊದಲ ಆದ್ಯತೆಯಾಗಿರಬೇಕು. ಸಂಬಳ 300ಕೆ ಪ್ಲಸ್ ಅಂದರೆ ವಾರ್ಷಿಕ ವೇತನ 2.5 ಕೋಟಿ ರೂಪಾಯಿ ಇರಬೇಕು. ತನ್ನನ್ನು ಹೆಚ್ಚು ಕಂಫರ್ಟ್ ಝೋನ್ನಲ್ಲಿ ಇಡಬೇಕು, ಪ್ರೀತಿಯಿಂದ ನೋಡಿಕೊಳ್ಳಬೇಕು, ಆಗಾಗ ಗಿಫ್ಟ್ ಕೊಡಬೇಕು ಇವೆಲ್ಲವೂ 3ನೇ ಗುಣ. ಐಷಾರಾಮಿತನ ಇರಬೇಕು, ಜೀವನವನ್ನು ಅತ್ಯಂತ ಸುಂದರವಾಗಿ, ಕೊರತೆಗಳಿಲ್ಲದೆ ಕಳೆಯಬೇಕು.
ಭಾವುಕತೆ, ಇಂಟೆಲಿಜೆಂಟ್, ನೋಡಲು ಹ್ಯಾಂಡ್ಸಮ್ ಆಗಿರಬೇಕು, ಫಿಟ್ ಆಗಿರಬೇಕು. ಸಂಬಂಧ, ಕುಟುಂಬ ಎಲ್ಲರರ ಜತೆ ಸಂಪರ್ಕದಲ್ಲಿರಬೇಕು, ನನ್ನ ಲೈಫ್ಸ್ಟೈಲ್, ನನ್ನ ಗುರಿ, ನನ್ನ ಆಸೆ ಆಕಾಂಕ್ಷೆಗಳನ್ನು ಈಡೇರಿಸುವಂತಿರಬೇಕು. ನನಗೆ ಬೆಂಬಲ ಕೊಡಬೇಕು, ಪ್ರವಾಸ, ಟ್ರಿಪ್ ಹೋಗುವಂತೆ ಇರಬೇಕು. ಆತ ಪ್ರಯಾಣ ಮಾಡುವವನಾಗಿರಬೇಕು, ಹೊರಗಡೆ ರೆಸ್ಟೋರೆಂಟ್ನಲ್ಲಿ ಆಹಾರ ಸವಿಯುವ ಅಭ್ಯಾಸ ಇರಬೇಕು.
ಗರ್ಭಿಣಿಯಾಗದಂತೆ ನೋಡಿಕೊಳ್ಳಬೇಕು!
ಲೈಂಗಿಕತೆಯಲ್ಲಿ ಶಿಸ್ತು ಇರಬೇಕು, ಗರ್ಭಿಣಿಯಾಗದಂತೆ ನೋಡಿಕೊಳ್ಳಬೇಕು, ಅಡುಗೆ ಸಿಬ್ಬಂದಿ, ಕೆಲಸಕ್ಕೆ ಸಿಬ್ಬಂದಿ ಸೇರಿದಂತೆ ಎಲ್ಲದ್ದಕ್ಕೂ ಸಿಬ್ಬಂದಿ ನೇಮಿಸಿ ನನ್ನ ಕೆಲಸ ಸುಲಭ ಮಾಡಬೇಕು ಹೀಗೆ ಉದ್ದದ ಪಟ್ಟಿಯನ್ನೇ ಈಕೆ ನೀಡಿದ್ದಾಳೆ.
ಪಟ್ಟಿ ನೋಡಿ ಸುಸ್ತಾದ ರೆಡ್ಡಿಟ್ ಬಳಕೆದಾರ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾನೆ. ಈ ಪೋಸ್ಟ್ಗೆ ಭಾರಿ ಪ್ರತಿಕ್ರಿಯೆ ವ್ಯಕ್ತವಾಗಿದೆ.
Modeling: ಅಂತರಾಷ್ಟ್ರೀಯ ಫ್ಯಾಶನ್ ಶೋನಲ್ಲಿ 17ರ ಚೆಲುವೆ ರನ್ನರ್ ಅಪ್
Megha Shetty ಕಪ್ಪುಡ್ರೆಸ್ ನಲ್ಲಿ ನಟಿ ಮೇಘಾ ಶೆಟ್ಟಿ ಮೈಮಾಟ ಪ್ರದರ್ಶನ
Underwear Clean ಪುರುಷರೇ, ನಿಮ್ಮ ಅಂಡರ್ವೇರ್ನ ವಿಚಾರದಲ್ಲಿ ಕೇರ್ಲೆಸ್ ಮಾಡಬೇಡಿ