newsics.com
ಜೊತೆ ಜೊತೆಯಲಿ’ ಧಾರಾವಾಹಿ ಮೂಲಕ ಕನ್ನಡ ಕಿರುತೆರೆಗೆ ಎಂಟ್ರಿಯಾಗಿ ಪಡ್ಡೆ ಹೈಕಳ ಮನಗೆದ್ದ ನಟಿ ಮೇಘಾ ಶೆಟ್ಟಿ. ಕಿರುತೆರೆಯಲ್ಲಿ ಫೇಮಸ್ ಆಗಿದ್ದ ನಟಿ ಇದೀಗ ಸಿನಿಮಾಗಳತ್ತ ತಮ್ಮ ಚಿತ್ತ ಹರಿಸಿದ್ದಾರೆ. ಇದು ಅವರ ಅಭಿಮಾನಿಗಳಿಗೆ ಮತ್ತಷ್ಟು ಖುಷಿ ಕೊಟ್ಟಿದೆ. ಈ ಮುದ್ದು ಮುದ್ದಾದ ಚೆಲುವೆಯ ನಗು ನೋಡಲು ಅವರ ಅಭಿಮಾನಿಗಳಿಗೆ ಬಲು ಇಷ್ಟ. ಇನ್ನೂ ಸಿನಿಮಾ ಅಷ್ಟೇ ಅಲ್ಲ ಸೋಶಿಯಲ್ ಮೀಡಿಯಾಗಳಲ್ಲೂ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದಾರೆ.
ಮಾಡರ್ನ್ ಲುಕ್ ಇರಲಿ ನಟಿ ಮಾತ್ರ ಅದ್ಭುತವಾಗಿಯೆ ಕಾಣಿಸುತ್ತಾರೆ. ಕಪ್ಪು ಡ್ರೆಸಲ್ಲಿ ದಂತದ ಗೊಂಬೆಯಂತಿರುವ ಮೇಘಾ ಶೆಟ್ಟಿ ಅಂದ ಎದ್ದು ಕಾಣುತ್ತಿದ್ದು,ಕಪ್ಪು ಬಣ್ಣದ, ಸ್ಲೀವ್ ಲೆಸ್, ಥೈ ಹೈ ಸ್ಲಿಟ್ ಶಾರ್ಟ್ ಡ್ರೆಸ್ ಧರಿಸಿದ್ದಾರೆ.
ಮೇಘಾ ಶೆಟ್ಟಿ ಫೋಟೋ ನೋಡಿ ಅಭಿಮಾನಿಗಳು ಫಿದಾ ಆಗಿದ್ದು, ಹಲವು ಮಂದಿ ಕಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಜೊತೆ ಜೊತೆಯಲಿ ಧಾರಾವಾಹಿ ಬಳಿಕ ಸಿನಿಮಾಗಳಲ್ಲೇ ಹೆಚ್ಚಾಗಿ ಆಫರ್ ಬರುತ್ತಿದೆ. ಹೀಗಾಗಿ ಮತ್ತೆ ಕಿರುತೆರೆಗೆ ಬರುವ ಸಾಹಸ ಮಾಡಿಲ್ಲ. ಈಗಾಗಲೇ ಗೋಲ್ಡನ್ ಸ್ಟಾರ್ ಗಣೇಶ್ ಜೊತೆ ‘ತ್ರಿಬಲ್ ರೈಡಿಂಗ್’ , ಡಾರ್ಲಿಂಗ್ ಕೃಷ್ಣ ಜೊತೆ ‘ದಿಲ್ ಪಸಂದ್’ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ಬಂದ ‘ಕೈವ’ ಸಿನಿಮಾ ಮೂಲಕ ಪ್ರೇಕ್ಷಕರನ್ನು ರಂಜಿಸಿದ್ದಾರೆ.