Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > Footpath Driving Fine ಫುಟ್‌ಪಾತ್‌ನಲ್ಲಿ ಗಾಡಿ ಓಡಿಸಿದರೆ ಬೀಳಲಿದೆ ₹5,000 ದಂಡ! ಸಾರಿಗೆ ಸಚಿವರಿಗೆ ಸಚಿವ ಕೃಷ್ಣ ಬೈರೇಗೌಡ ಪತ್ರ
ಪ್ರಮುಖಕರ್ನಾಟಕ

Footpath Driving Fine ಫುಟ್‌ಪಾತ್‌ನಲ್ಲಿ ಗಾಡಿ ಓಡಿಸಿದರೆ ಬೀಳಲಿದೆ ₹5,000 ದಂಡ! ಸಾರಿಗೆ ಸಚಿವರಿಗೆ ಸಚಿವ ಕೃಷ್ಣ ಬೈರೇಗೌಡ ಪತ್ರ

Share
1 Min Read
SHARE

newsics.com | ನ್ಯೂಸಿಕ್ಸ್

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಪಾದಚಾರಿ ಮಾರ್ಗಗಳಲ್ಲಿ ವಾಹನ ಚಲಾಯಿಸುವ ಸವಾರರಿಗೆ ಬ್ರೇಕ್ ಹಾಕಲು ಸಚಿವ ಕೃಷ್ಣ ಬೈರೇಗೌಡ ಅವರು ಕಠಿಣ ಹೆಜ್ಜೆ ಇಟ್ಟಿದ್ದಾರೆ. ಫುಟ್‌ಪಾತ್ ಸವಾರಿ ಮಾಡುವವರಿಗೆ ಪ್ರಸ್ತುತ ವಿಧಿಸಲಾಗುತ್ತಿರುವ 500 ರೂಪಾಯಿ ದಂಡವನ್ನು ಬರೋಬ್ಬರಿ 5,000 ರೂಪಾಯಿಗೆ ಹೆಚ್ಚಿಸುವಂತೆ ಸಾರಿಗೆ ಸಚಿವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.

 

ನಗರದ ಸಂಚಾರ ಪೊಲೀಸ್ ಉನ್ನತಾಧಿಕಾರಿಗಳ ಜೊತೆ ಸಭೆ ನಡೆಸಿದ ಅವರು, ಸುಪ್ರೀಂ ಕೋರ್ಟ್ ಮಾರ್ಗದರ್ಶನದಂತೆ ತೆರವುಗೊಳಿಸಲಾದ ಪಾದಚಾರಿ ಮಾರ್ಗಗಳಲ್ಲಿ ವಾಹನ ಸವಾರರು ಭಯವಿಲ್ಲದೆ ಗಾಡಿ ಓಡಿಸುತ್ತಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು. ಪ್ರಸ್ತುತ ನೀಡಲಾಗುತ್ತಿರುವ ಸಣ್ಣ ಪ್ರಮಾಣದ ದಂಡದಿಂದ ಅಪರಾಧ ತಡೆಯಲು ಸಾಧ್ಯವಿಲ್ಲ. ಹೀಗಾಗಿ ದಂಡದ ಮೊತ್ತವನ್ನು 5,000 ರೂ.ಗೆ ಏರಿಸಿದರೆ ಮಾತ್ರ ವಾಹನ ಚಾಲಕರಲ್ಲಿ ಭಯ ಮೂಡಲು ಸಾಧ್ಯ ಎಂದು ಅವರು ಪ್ರತಿಪಾದಿಸಿದರು.

ಇದೇ ವೇಳೆ ನಗರದ ಮುಖ್ಯ ರಸ್ತೆಗಳಲ್ಲಿ (ಆರ್ಟಿಲಿಯರ್ ಹಾಗೂ ಸಬ್ ಆರ್ಟಿಲಿಯರ್) ಸಂಚಾರ ಸುಗಮಗೊಳಿಸಲು ‘ಒನ್-ಸೈಡ್ ಪಾರ್ಕಿಂಗ್’ ಅಥವಾ ‘ಪರ್ಯಾಯ ಪಾರ್ಕಿಂಗ್’ (Alternate Parking) ವ್ಯವಸ್ಥೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ದಿನಕ್ಕೊಂದು ಬದಿ ಪಾರ್ಕಿಂಗ್ ನಿಯಮ ಪಾಲಿಸಿದರೆ ರಸ್ತೆಯಲ್ಲಿ 7 ರಿಂದ 8 ಅಡಿ ಜಾಗ ಉಳಿದು ವಾಹನ ದಟ್ಟಣೆ ಕಡಿಮೆಯಾಗಲಿದೆ. ಇದಕ್ಕೆ ಹೊಸ ಅಧಿಸೂಚನೆ ಅಗತ್ಯವಿಲ್ಲ, ಪೊಲೀಸ್ ಸಿಬ್ಬಂದಿ ಕಟ್ಟುನಿಟ್ಟಿನ ಕ್ರಮ ಕೈಗೊಂಡು ಜನರಲ್ಲಿ ಅರಿವು ಮೂಡಿಸಬೇಕು ಎಂದರು.

ಇನ್ನು ಸಿಗ್ನಲ್ ಹಾಗೂ ಜಂಕ್ಷನ್‌ಗಳ ಬಳಿ ವಾಹನ ನಿಲ್ಲಿಸುವುದರಿಂದ ಟ್ರಾಫಿಕ್ ಸಮಸ್ಯೆ ಹೆಚ್ಚುತ್ತಿದ್ದು, ಬಿಎಂಟಿಸಿ ಬಸ್‌ಗಳು ಸೇರಿದಂತೆ ಯಾವುದೇ ವಾಹನಗಳು ಅನಗತ್ಯವಾಗಿ ಸಿಗ್ನಲ್ ಬಳಿ ನಿಲ್ಲದಂತೆ ತಡೆಯಲು ನಿರ್ದೇಶಿಸಲಾಯಿತು. ಸಿಗ್ನಲ್‌ಗಳಿಂದ 750 ಮೀಟರ್ ಹಾಗೂ ಜಂಕ್ಷನ್‌ಗಳಿಂದ 500 ಮೀಟರ್ ವ್ಯಾಪ್ತಿಯಲ್ಲಿ ಬಸ್ ನಿಲ್ದಾಣಗಳಿದ್ದರೆ ಅವುಗಳನ್ನು ತಕ್ಷಣವೇ ಸ್ಥಳಾಂತರಿಸಲು ಸೂಚನೆ ನೀಡಲಾಯಿತು. ಸಭೆಯಲ್ಲಿ ಸಂಚಾರಿ ವಿಭಾಗದ ಜಂಟಿ ಆಯುಕ್ತ ಕಾರ್ತಿಕ್ ರೆಡ್ಡಿ ಸೇರಿದಂತೆ ಹಲವು ಪ್ರಮುಖ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

 

Soujanya Case ಸೌಜನ್ಯ ಹತ್ಯೆ ಪ್ರಕರಣ; ಸಿಬಿಐ ತನಿಖೆಗೆ ಸುಪ್ರೀಂ ಅಸಮಾಧಾನ, ಮರುತನಿಖೆಯ ಆದೇಶ ಕಾಯ್ದಿರಿಸಿದ ಪೀಠ

TAGGED:#Footpath #Bengaluru #Krishna byregowda #news #newsics
Share This Article
Facebook Twitter Copy Link Print
Previous Article Soujanya Case ಸೌಜನ್ಯ ಹತ್ಯೆ ಪ್ರಕರಣ; ಸಿಬಿಐ ತನಿಖೆಗೆ ಸುಪ್ರೀಂ ಅಸಮಾಧಾನ, ಮರುತನಿಖೆಯ ಆದೇಶ ಕಾಯ್ದಿರಿಸಿದ ಪೀಠ
Next Article Scholl van tragedy ಶಾಲಾ ವಾಹನದ ಮೇಲೆ ಮರ ಬಿದ್ದು ಬಾಲಕಿ ಸಾವು, ಮಗು ಸ್ಥಿತಿ‌ ಗಂಭೀರ

Popular Posts

Toll Price Hike ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಸವಾರರಿಗೆ ಶಾಕ್; ವರ್ಷದಲ್ಲೇ 2ನೇ ಬಾರಿ ಸದ್ದಿಲ್ಲದೇ ಟೋಲ್ ದರ ಹೆಚ್ಚಿಸಿದ ಹೆದ್ದಾರಿ ಪ್ರಾಧಿಕಾರ

1 Min Read

Scholl van tragedy ಶಾಲಾ ವಾಹನದ ಮೇಲೆ ಮರ ಬಿದ್ದು ಬಾಲಕಿ ಸಾವು, ಮಗು ಸ್ಥಿತಿ‌ ಗಂಭೀರ

1 Min Read

Footpath Driving Fine ಫುಟ್‌ಪಾತ್‌ನಲ್ಲಿ ಗಾಡಿ ಓಡಿಸಿದರೆ ಬೀಳಲಿದೆ ₹5,000 ದಂಡ! ಸಾರಿಗೆ ಸಚಿವರಿಗೆ ಸಚಿವ ಕೃಷ್ಣ ಬೈರೇಗೌಡ ಪತ್ರ

1 Min Read

Soujanya Case ಸೌಜನ್ಯ ಹತ್ಯೆ ಪ್ರಕರಣ; ಸಿಬಿಐ ತನಿಖೆಗೆ ಸುಪ್ರೀಂ ಅಸಮಾಧಾನ, ಮರುತನಿಖೆಯ ಆದೇಶ ಕಾಯ್ದಿರಿಸಿದ ಪೀಠ

1 Min Read

You Might Also Like

ಪ್ರಮುಖದೇಶ

Smriti Mandhana ಎಲ್‌ಎಸ್‌ಜಿ ಜರ್ಸಿಯಲ್ಲಿ ಆರ್‌ಸಿಬಿ ನಾಯಕಿ? ಸ್ಮೃತಿ ಮಂದಾನಾ ಹೊಸ ಫೋಟೋ ವೈರಲ್‌

1 Min Read
ಪ್ರಮುಖಲೈಫ್‌ಸ್ಟೈಲ್

Credit Card Limit ನಿಮಗೆ ಗೊತ್ತಾಗದಂತೆ ಕ್ರೆಡಿಟ್‌ ಕಾರ್ಡ್‌ ಲಿಮಿಟ್‌ ಕಟ್‌ ಆಯ್ತಾ? ಬ್ಯಾಂಕುಗಳ ಈ ನಿರ್ಧಾರಕ್ಕೆ ಅಸಲಿ ಕಾರಣ ಇಲ್ಲಿದೆ

2 Min Read
ಪ್ರಮುಖದೇಶಮನರಂಜನೆ

Spider-Man: Brand New Day ಅಡ್ವಾನ್ಸ್ ಬುಕ್ಕಿಂಗ್‌ನಲ್ಲಿ ಹೊಸ ದಾಖಲೆ ಬರೆದ ‘ಸ್ಪೈಡರ್‌ಮ್ಯಾನ್: ಬ್ರ್ಯಾಂಡ್ ನ್ಯೂ ಡೇ’

1 Min Read
ಪ್ರಮುಖಮನರಂಜನೆವಿದೇಶ

Kaylee Hottle no more ಗಾಡ್ಜಿಲ್ಲಾ ಚಿತ್ರದ 18 ವರ್ಷದ ನಟಿ ಕಾರು ಅಪಘಾತದಲ್ಲಿ ಸಾವು

1 Min Read

Social Networks

Facebook-f Instagram Twitter
Welcome Back!

Sign in to your account

Lost your password?