newsics.com
ಒಳ ಉಡುಪು ಎನ್ನುವುದು ನಾವು ಧರಿಸುವಂತಹ ವಸ್ತ್ರಗಳಲ್ಲಿ ಪ್ರಮುಖವಾದದ್ದು. ಆರೋಗ್ಯದ ದೃಷ್ಟಿಯಿಂದಲೂ ಇದು ತುಂಬಾ ಮುಖ್ಯ. ಯಾಕೆಂದರೆ ಕಳಪೆ ಗುಣಮಟ್ಟದ ಬಟ್ಟೆಯಿಂದಾಗಿ ತುರಿಕೆ, ಬೊಕ್ಕೆ ಇತ್ಯಾದಿ ಸಮಸ್ಯೆಗಳು ಕಂಡುಬರುವುದು.ಪುರುಷರು ತಾವು ಧರಿಸುವ ಒಳ ಉಡುಪಿನ ಬಗ್ಗೆ ಹೆಚ್ಚು ಜಾಗರೂಕರಾಗಿರಬೇಕು. ಒಂದು ಬಾರಿ ಬಳಸಿದ ಒಳ ಉಡುಪನ್ನು ಮತ್ತೊಂದು ಬಾರಿ ಬಳಸುವ ಮುಂಚೆ ಶುಚಿ ಮಾಡಿ ಬಳಸಬೇಕು. ಕೆಲವೊಂದು ಆರೋಗ್ಯ ತಜ್ಞರ ಸಲಹೆ ಪ್ರಕಾರ ಒಂದು ಒಳ ಉಡುಪನ್ನು 10 ಗಂಟೆಗಳಿಗಿಂತ ಹೆಚ್ಚು ಬಳಸುವ ಹಾಗಿಲ್ಲ.
ಸಾಮಾನ್ಯವಾಗಿ ಒಳ ಉಡುಪುಗಳಲ್ಲಿ ಒಂದು ಗುಣವಿರುತ್ತದೆ. ಅದುವೇ ತೇವಾಂಶವನ್ನು ಹಿಡಿದಿಟ್ಟುಕೊಳ್ಳುವಂತಹ ಗುಣ. ಆದ್ದರಿಂದಲೇ ಒಳ ಉಡುಪಿನ ತಯಾರಿಯಲ್ಲಿ ಬಳಕೆಯಾಗುವ ಬಟ್ಟೆಯ ಬಗೆಯೇ ಬೇರೆ ರೀತಿ ಇರುತ್ತದೆ. ಹೆಚ್ಚು ಗಾಳಿಯಾಡುವ ಪ್ರಕಾರದಲ್ಲಿ ಬಟ್ಟೆಯನ್ನು ನೇಯ್ಗೆ ಮಾಡಿರುತ್ತಾರೆ. ಸಾಧಾರಣವಾಗಿ ಜನನಾಂಗಗಳ ಬಳಿಯಲ್ಲಿ ಬೆವರು ಹಾಗೂ ನೀರಿನ ತೇವಾಂಶ ಇದ್ದೇ ಇರುತ್ತದೆ. ಈ ಅಂಶಗಳನ್ನು ತಕ್ಷಣಕ್ಕೆ ಹೀರಿಕೊಳ್ಳುವ ಅವಶ್ಯಕತೆ ಇರುವುದರಿಂದ ಒಳ ಉಡುಪಿನ ಧರಿಸುವಿಕೆ ಕಡ್ಡಾಯ
ಹೆಚ್ಚಾಗಿ ಬಳಸಲ್ಪಡುವಂತಹ ಹಾಗೂ ಪ್ರತಿಯೊಬ್ಬರು ತಮ್ಮ ಒಳ ಉಡುಪಿನ ಖಜಾನೆಯಲ್ಲಿ ಒಂದು ಜೋಡಿ ಬ್ರೀಫ್ ಇಟ್ಟುಕೊಂಡಿರುವರು. ಇದು ಇಂದಿಗೂ ದೊಡ್ಡ ಸ್ಟೈಲ್ ಆಗಿರುವುದು. ಕ್ರೀಡಾ ಚಟುವಟಿಕೆಗಳಲ್ಲಿ ಭಾಗಿಯಾಗುವವರು ಇದನ್ನು ಬಳಕೆ ಮಾಡುವರು.
.
ತುಂಬಾ ಬಿಗಿಯಾದ ಒಳ ಉಡುಪು ಧರಿಸುವುದರಿಂದ ಶ್ರೋಣಿಯ ಪ್ರದೇಶಕ್ಕೆ ರಕ್ತದ ಹರಿವಿನ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಇದು ಅಸ್ವಸ್ಥತೆಯನ್ನು ಉಂಟು ಮಾಡಬಹುದು ಮತ್ತು ವೃಷಣ ತಿರುಚುವಿಕೆಯ ಅಪಾಯವನ್ನು ಹೆಚ್ಚಿಸಬಹುದು. ಬಿಗಿಯಾದ ಒಳ ಉಡುಪುಗಳು ತಾಪಮಾನವನ್ನು ಹೆಚ್ಚಿಸುತ್ತವೆ ಮತ್ತು ಕೆಲವು ಪ್ರದೇಶಗಳಲ್ಲಿ ತೇವಾಂಶವನ್ನು ಉಂಟು ಮಾಡುತ್ತವೆ ಎಂದು ಅನೇಕ ಅಧ್ಯಯನಗಳು ತಿಳಿಸಿವೆ. ಇದು ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳ ಸೋಂಕಿಗೂ ಕಾರಣವಾಗಬಹುದು.
ಫಾರ್ಮಲ್ ಧರಿಸುತ್ತಿದ್ದರೆ ಆಗ ನೀವು ಬ್ರೀಫ್ಸ್ ಧರಿಸಬೇಡಿ. ಇದು ತೊಡೆಯ ಭಾಗವನ್ನು ಹಾಗೆ ಬಿಟ್ಟುಬಿಡುವುದು. ಬಿಗಿಯಾದ ಪ್ಯಾಂಟ್ ಮತ್ತು ಜೀನ್ಸ್ ಧರಿಸುತ್ತಿದ್ದರೆ ಆಗ ನೀವು ಇದನ್ನು ಧರಿಸಲು ಅಡ್ಡಿಯಿಲ್ಲ
ಬ್ರೀಫ್ಸ್ ಕೂಡ ಮೂರು ವಿಧದಲ್ಲಿ ಬರುವುದು. ನಿಮಗೆ ಹೊಂದಿಕೆ ಆಗುವಂತಹದನ್ನು ನೀವು ಬಳಕೆ ಮಾಡಬಹುದು.
ಬಾಕ್ಸರುಗಳು ಎಂದಿಗೂ ಇಡೀ ದಿನ ಬಳಕೆಯಾಗಬಾರದು ಎಂದು ಹೇಳುತ್ತಾರೆ. ಕೇವಲ ದಿನದಲ್ಲಿ ಗರಿಷ್ಠ 10 ಗಂಟೆ ಸಮಯ ಮಾತ್ರ ಇವುಗಳನ್ನು ಧರಿಸಿದರೆ ಆರೋಗ್ಯದ ದೃಷ್ಟಿಯಲ್ಲಿ ಒಳ್ಳೆಯದು.
ಎಲ್ಲಾ ಬಾಕ್ಸರ್ ಗಳು ತುಂಬಾ ಸಡಿಲವಾಗಿದ್ದವು. ಆದರೆ ಇಂದಿನ ದಿನಗಳಲ್ಲಿ ಇದು ತುಂಬಾ ಫಿಟ್ ಆಗಿ ಬರುವುದು. ಇದು ತುಂಬಾ ಒಳ್ಳೆಯ ಒಳ ಉಡುಪು ಆಗಿದೆ. ಇದನ್ನು ರಾತ್ರಿ ವೇಳೆ ಧರಿಸಬಹುದು.
ಬೇರೆ ದೇಶಗಳಿಗೆ ಹೋಲಿಸಿದರೆ ನಮ್ಮ ಭಾರತದಲ್ಲಿ ಒಳ ಉಡುಪಿನ ಫ್ಯಾಬ್ರಿಕ್ ವಿಧಗಳು ಕಡಿಮೆ ಇವೆ. ಹಾಗಾಗಿ ಜನರಿಗೂ ಸಹ ಆಯ್ಕೆಗಳು ಕಡಿಮೆಯಾಗುತ್ತವೆ. ಆದರೂ ಇತರ ಬಟ್ಟೆಗಳಿಗೆ ಹೋಲಿಸಿದರೆ ಸ್ವಲ್ಪ ಹೆಚ್ಚು ಎಲಾಸ್ಟಿಕ್ ಅಂಶ ಎಂದರೆ 8 ರಿಂದ 10 ಪಟ್ಟು ಎಲಾಸ್ಟಿಕ್ ಅಂಶ ಇರುವ ಒಳ ಉಡುಪನ್ನು ಖರೀದಿಸಿದರೆ ಒಳ್ಳೆಯದು. ಯಾವುದೇ ಕಾರಣಕ್ಕೂ ಸ್ಥಿತಿಸ್ಥಾಪಕತ್ವ ಇಲ್ಲದ ಒಳ ಉಡುಪನ್ನು ಖರೀದಿ ಮಾಡಬಾರದು
ಬಿಗಿಯಾದ ಒಳ ಉಡುಪುಗಳು ಮೂತ್ರನಾಳದ ಸೋಂಕಿನ ಅಪಾಯವನ್ನು ಹೆಚ್ಚಿಸುತ್ತವೆ ಎಂದು ಅನೇಕ ತಜ್ಞರು ಹೇಳುತ್ತಾರೆ. ನಡೆಯುವಾಗ ಬಿಗಿಯಾದ ಒಳ ಉಡುಪು ಚರ್ಮಕ್ಕೆ ಉಜ್ಜಬಹುದು, ಇದು ಬೇಸಿಗೆಯಲ್ಲಿ ಚರ್ಮದ ಕಿರಿಕಿರಿಯನ್ನು ಉಂಟು ಮಾಡಬಹುದು.