newsics.com
ಮಂಗಳೂರು: ಮಂಗಳೂರಿನ ಈ ಚೆಲುವೆ ಹತ್ತೇ ದಿನದ ತರಬೇತಿ ಪಡೆದು ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲಿ ಫಸ್ಟ್ ರನ್ನರ್ ಅಪ್ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.
ಮೊದಲ ರನ್ನರ್ ಅಪ್: ಮಂಗಳೂರಿನ ಜೆಪ್ಪು ಕುಡ್ಪಾಡಿಯ ಜೆನಿಕಾ ಸಾನಿಯಾ ಡಿಸೋಜ ಎಪ್ರಿಲ್ 4 ರಂದು ಬಹರೈನ್ನಲ್ಲಿ ನಡೆದ ಕುಡ್ಲೋತ್ಸವ ಕಾರ್ಯಕ್ರಮದಲ್ಲಿ ನಡೆದ ಅಂತಾರಾಷ್ಟ್ರೀಯ ಫ್ಯಾಶನ್ ಶೋ ಸ್ಪರ್ಧೆಯಲ್ಲಿ ಮೊದಲ ರನ್ನರ್ ಅಪ್ ಆಗಿದ್ದಾರೆ. ಬಹರೈನ್ನಲ್ಲಿ ನಡೆಯುವ ಕುಡ್ಲೋತ್ಸವ ಫ್ಯಾಶನ್ ಶೋ ವಿಶ್ವದ ಬೇರೆ ಬೇರೆ ಕಡೆ ನೆಲೆಸಿರುವ ಕರಾವಳಿ ಮೂಲದ ಯುವತಿಯರು ಭಾಗವಹಿಸುವ ಫ್ಯಾಶನ್ ಶೋ ಸ್ಪರ್ಧೆ. ಈ ಸ್ಪರ್ಧೆಯಲ್ಲಿ ವಿವಿಧ ದೇಶಗಳಿಂದ ಮಂಗಳೂರು ಮೂಲದ ಯುವತಿಯರು ಪಾಲ್ಗೊಂಡಿದ್ದರು. ಈ ಸ್ಪರ್ಧೆಯಲ್ಲಿ ಜೆನಿಕಾ ಸಾನಿಯಾ ಡಿಸೋಜ ಮೊದಲ ಪ್ರಯತ್ನದಲ್ಲಿ ಯಶಸ್ಸು ಕಂಡಿದ್ದಾರೆ.
ಮಂಗಳೂರಿನ ಜೆಪ್ಪು ಕುಡ್ಪಾಡಿ ನಿವಾಸಿ ಜೆನಿಕಾ ಸಾನಿಯಾ ಡಿಸೋಜ ಎಂಬಾಕೆಯೇ ಈ ಸಾಧನೆ ಮಾಡಿದವಳು. ಏಪ್ರಿಲ್ 4ರಂದು ಬಹರೈನ್ನಲ್ಲಿ ನಡೆದ ಕುಡ್ಲೋತ್ಸವ ಕಾರ್ಯಕ್ರಮದಲ್ಲಿ ನಡೆದ ಅಂತರಾಷ್ಟ್ರೀಯ ಫ್ಯಾಶನ್ ಶೋನಲ್ಲಿ ಈಕೆ ಮೊದಲ ರನ್ನರ್ ಅಪ್ ಕಿರೀಟ ಮುಡಿಗೇರಿಸಿಕೊಂಡಿದ್ದಾಳೆ. ಹದಿನೇಳರ ಹರೆಯದ ಜೆನಿಕಾ ಈಗಷ್ಟೇ ದ್ವಿತೀಯ ಪಿಯುಸಿ ಮುಗಿಸಿದ್ದಾಳೆ. ಪರೀಕ್ಷೆಗೆ ಹತ್ತಿರದ ದಿನದಲ್ಲೇ ಫ್ಯಾಶನ್ ಶೋ ಇದ್ದು, ಪ್ರ್ಯಾಕ್ಟೀಸ್‌ಗೆ ಸಮಯವಿಲ್ಲದಿದ್ದರೂ, ಅದನ್ನೆಲ್ಲಾ ದಾಟಿ ಈಕೆ ಪ್ರಥಮ ಪ್ರಯತ್ನದಲ್ಲೇ ಯಶಸ್ಸು ಸಾಧಿಸಿದ್ದಾಳೆ.
Actor Prem ನಟ ಪ್ರೇಮ್ ವಿರುದ್ಧ ಕಾನೂನು ಕ್ರಮಕ್ಕೆ ಆ ನಟ ಮುಂದಾದ್ರ?