newsics.com
ಸ್ಪಾರ್ಕ್ ಚಿತ್ರತಂಡ ನೆನಪಿರಲಿ ಪ್ರೇಮ್ ಹುಟ್ಟುಹಬ್ಬಕ್ಕೆ ಪೋಸ್ಟರ್ ಬಿಡುಗಡೆ ಮಾಡಿತ್ತು. ಈ ಪೋಸ್ಟರಲ್ಲಿ ನೆನಪಿರಲಿ ಪ್ರೇಮ್ ಒಂದು ಪತ್ರಿಕೆಯನ್ನು ಸಿಗರೇಟಲ್ಲಿ ಸುಡುವ ಚಿತ್ರವಿತ್ತು. ಈ ಪತ್ರಿಕೆಯಲ್ಲಿ ರಮೇಶ್ ಇಂದಿರಾ ಫೋಟೋ ಇತ್ತು. ಆದರೆ ಚಿತ್ರತಂಡ ರಮೇಶ್ ಇಂದಿರಾ ಅವರ ಅನುಮತಿಯನ್ನೇ ತೆಗೆದುಕೊಂಡಿಲ್ಲ. ಯಾರಿಗೂ ಹೇಳದೆ ಕೇಳದೆ ಫೋಟೋ ಬಳಸಿದ್ದರಿಂದ ಇದೀಗ ಚಿತ್ರತಂಡ ಸಂಕಷ್ಟಕ್ಕೆ ಸಿಲುಕಿದೆ.
ಹೌದು,ಅನುಮತಿಯಿಲ್ಲದೇ ತನ್ನ ಫೋಟೋವನ್ನು ಪೋಸ್ಟರ್‌ನಲ್ಲಿ ಬಳಸಿಕೊಂಡದ್ದಕ್ಕೆ ‘ಸ್ಪಾರ್ಕ್’ ಚಿತ್ರತಂಡ ಮತ್ತು ನೆನಪಿರಲಿ ಪ್ರೇಮ್ ವಿರುದ್ಧ ನಟ ರಮೇಶ್ ಇಂದಿರಾ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ. ಚಿತ್ರತಂಡ ತನ್ನ ಅನುಮತಿಯಿಲ್ಲದೇ ಭೀಮ ಚಿತ್ರದಲ್ಲಿನ ತನ್ನ ಫೋಟೋವನ್ನು ದುರ್ಬಳಕೆ ಮಾಡಿಕೊಂಡಿದೆ ಎಂದು ರಮೇಶ್ ಇಂದಿರಾ ಆರೋಪಿಸಿದ್ದಾರೆ.
ಇನ್ನು ಶ್ರುತಿ ನಾಯ್ಡು ಅವರು ಕೋಪಗೊಳ್ಳುವ ವಿಚಾರ ಕೂಡ ಈ ಪೋಸ್ಟರ್‌ನಲ್ಲಿದೆ. ಶ್ರುತಿ ನಾಯ್ಡು ಅವರ ಪತಿ ರಮೇಶ್ ಇಂದಿರಾ ಅವರು ಕೂಡ ಸಿನಿಮಾಗಳಲ್ಲಿ ಮಿಂಚುತ್ತಿರುವುದು ಗೊತ್ತೇ ಇದೆ. ಪ್ರೇಮ್ ಅವರ ಈ ಸಿನಿಮಾ ಪೋಸ್ಟರ್‌ನಲ್ಲೂ ರಮೇಶ್ ಇಂದಿರಾ ಅವರ ಫೋಟೋ ಬಳಸಿರುವುದು ವಿವಾದಕ್ಕೆ ಕಾರಣವಾಗಿದೆ. ಈ ಪೋಸ್ಟರ್‌ನಲ್ಲಿ ರಮೇಶ್ ಇಂದಿರಾ ಇರುವ ಪೇಪರ್‌ಗೆ ಬೆಂಕಿ ಹಚ್ಚಲಾಗಿದ್ದು, ಅದರಿಂದ ಪ್ರೇಮ್ ಅವರು ಸಿಗರೇಟ್ ಹೊತ್ತಿಸಿಕೊಂಡಿರುವಂತೆ ಪೋಸ್ ಕೊಟ್ಟಿದ್ದಾರೆ. ಇದನ್ನು ಕಂಡು ಇಂದಿರಾ ರಮೇಶ್ ಪತ್ನಿ ಶ್ರುತಿ ಅವರು ಕೆಂಡಾಮಂಡಲರಾಗಿದ್ದಾರೆ. ಇದೀಗ ಈ ವಿವಾದ ಸ್ಯಾಂಡಲ್‌ವುಡ್‌ನಲ್ಲಿ ಸಖತ್ ಸದ್ದು ಮಾಡುತ್ತಿದೆ.
https://www.instagram.com/p/DIlSQFZzK8Y/?igsh=MXV3am1samZhMjR3OA==
ಶೀಘ್ರದಲ್ಲೇ ಸ್ಯಾಂಡಲ್‌ವುಡ್ ನಟಿ ಅರ್ಚನಾ ಜೊತೆ IPL ಸ್ಟಾರ್ ಕ್ರಿಕೆಟರ್ ಮದುವೆ