newsics.com
ದಾದ್ರಿ(ಹರ್ಯಾಣ): ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಕತ್ರಿನಾಗೆ ಅಭಿಮಾನಿಗಳಾಗಿದ್ದಾರೆ. ಅಭಿಮಾನಿಗಳಿಗಾಗಿ ಕತ್ರಿನಾ ಅವರು ಫೋಟೋಗಳು ಮತ್ತು ವೀಡಿಯೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡುತ್ತಾ ಇರುತ್ತಾರೆ. ಇತ್ತೀಚೆಗೆ ಕತ್ರಿನಾ ತಮ್ಮ 41ನೇ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಿಕೊಂಡರು.
ಈ ಮಧ್ಯೆ, ಹರ್ಯಾಣಾದ ಹಳ್ಳಿಯೊಂದರಲ್ಲಿ ದಂಪತಿಯೊಬ್ಬರು ಕಳೆದ 11 ವರ್ಷಗಳಿಂದ ಕತ್ರಿನಾ ಅವರನ್ನು ಪೂಜಿಸುತ್ತಿದ್ದಾರೆ. ನಟಿಯ ಹುಟ್ಟುಹಬ್ಬವನ್ನೂ ಅದ್ದೂರಿಯಾಗಿ ಆಚರಿಸಿದ್ದಾರೆ.
ಹರಿಯಾಣದ ಚಾರ್ಖಿ ದಾದ್ರಿ ಜಿಲ್ಲೆಯ ಈ ದಂಪತಿ ಪ್ರತಿದಿನ ಕತ್ರಿನಾರನ್ನು ಪೂಜಿಸುತ್ತಾರೆ. ಧನಿ ಫೋಗಟ್ ಗ್ರಾಮದ ನಿವಾಸಿಗಲಾದ ಕರಂಬಿರ್ ಅಲಿಯಾಸ್ ಬಂಟು ಮತ್ತು ಅವರ ಪತ್ನಿ ಸಂತೋಷಿ ಕತ್ರಿನಾ ಕೈಫ್ ಅವರನ್ನು ದೇವತೆಯೆಂದೇ ಭಾವಿಸಿದ್ದಾರೆ.
ಕಳೆದ 11 ವರ್ಷಗಳಿಂದ ಈ ಜೋಡಿ ಕತ್ರಿನಾ ಹುಟ್ಟುಹಬ್ಬವನ್ನು ಕೇಕ್ ಕತ್ತರಿಸಿ, ಲಾಡು ಹಂಚುವ ಮೂಲಕ ಸಡಗರದಿಂದ ಆಚರಿಸಿಕೊಂಡು ಬರುತ್ತಿದ್ದಾರೆ. ಕತ್ರಿನಾ ಕೈಫ್ ಅವರನ್ನು ಭೇಟಿಯಾಗುವ ಕನಸು ಕಾಣುತ್ತಿದ್ದಾರೆ.
‘ನಾನು 13-14 ವರ್ಷ ವಯಸ್ಸಿನಿಂದಲೂ ಕತ್ರಿನಾ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದೇನೆ. ಮದುವೆಗೂ ಮುನ್ನ ಕತ್ರಿನಾ ಹುಟ್ಟುಹಬ್ಬವನ್ನು ಒಬ್ಬನೇ ಆಚರಿಸುತ್ತಿದ್ದೆ. ಈಗ ನನ್ನ ಹೆಂಡತಿ ಮತ್ತು ನಾನು ಒಟ್ಟಿಗೆ ಹುಟ್ಟುಹಬ್ಬವನ್ನು ಆಚರಿಸುತ್ತೇವೆ. ಕತ್ರಿನಾ ನಮ್ಮ ಮನೆಗೆ ಬರಬೇಕೆಂದು ನಾನು ಬಯಸುತ್ತೇನೆ. ಕತ್ರಿನಾ ಖಂಡಿತವಾಗಿಯೂ ನಮ್ಮನ್ನು ಭೇಟಿಯಾಗಲು ಬರುತ್ತಾರೆಂಬ ಖಾತ್ರಿಯಿದೆ’ ಎಂದಿದ್ದಾರೆ ಬಂಟು.
ಅಂದಹಾಗೆ, ನಟಿ ಕತ್ರಿನಾ ಕೈಫ್ 224 ಕೋಟಿ ರೂಪಾಯಿ ಒಡತಿ. ಬಾಲಿವುಡ್‌ನ ದುಬಾರಿ ನಟಿಯರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಕತ್ರಿನಾ ಕೈಫ್ ಈಗ ಒಂದು ಚಿತ್ರಕ್ಕೆ ಸುಮಾರು 15 ರಿಂದ 20 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ.
ಪ್ಯಾನ್ ಇಂಡಿಯಾ ಅಂದ್ರೆ ದಾಡಿ ಬಾಡಿ ಬೆಳೆಯತ್ತೆ ಅಷ್ಟೇ; ಯಶ್, ರಿಷಬ್‌ಗೆ ಹಂಸಲೇಖ ಪರೋಕ್ಷ ಟಾಂಗ್
ರೈತರಿಗೆ ಗುಡ್ ನ್ಯೂಸ್! ಬಜೆಟ್‌ನಲ್ಲಿ ಕಿಸಾನ್ ಸಮ್ಮಾನ್‌ಗೆ 80 ಸಾವಿರ ಕೋಟಿ ರೂ.?