newsics.com | ನ್ಯೂಸಿಕ್ಸ್
ಹೊಲದಲ್ಲಿ ಹ್ಯೂಮನಾಯ್ಡ್ ರೋಬೋಟ್ ಬೆಳೆ ಕಟಾವು ಮಾಡುತ್ತಿರುವಂತೆ ಕಾಣುವ ವೈರಲ್ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ಈ ದೃಶ್ಯ ನೋಡಿದ ಅನೇಕರು, AI ಈಗ ತಂತ್ರಜ್ಞಾನ ಕ್ಷೇತ್ರದ ಉದ್ಯೋಗಗಳಷ್ಟೇ ಅಲ್ಲ, ಕೃಷಿಯಂತಹ ಶಾರೀರಿಕ ಶ್ರಮದ ಕೆಲಸಗಳನ್ನೂ ವಹಿಸಿಕೊಳ್ಳಬಹುದೇ? ಎಂಬ ಪ್ರಶ್ನೆ ಕೇಳುತ್ತಿದ್ದಾರೆ.
ವೈರಲ್ ವಿಡಿಯೋ..!
ಈ ವಿಡಿಯೋವನ್ನು X (ಹಳೆಯ ಟ್ವಿಟರ್) ನಲ್ಲಿ FedExCode ಎಂಬ ಬಳಕೆದಾರರು ಹಂಚಿಕೊಂಡಿದ್ದಾರೆ. AI ಟೆಕ್ ಉದ್ಯೋಗಗಳನ್ನು ಕಸಿದುಕೊಳ್ಳುತ್ತಿದೆ ಎಂದು ಕೃಷಿಯತ್ತ ಮುಖ ಮಾಡುತ್ತಿದ್ದರೆ, ಈಗ AI ಅಲ್ಲಿಗೂ ಬಂದಿದೆ ಎಂಬ ಅರ್ಥದ ಶೀರ್ಷಿಕೆಯೊಂದಿಗೆ ಪೋಸ್ಟ್ ಮಾಡಲಾದ ಈ ವಿಡಿಯೋ 5 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ.
ವಿಡಿಯೋದಲ್ಲಿ ಏನಿದೆ?
ವಿಡಿಯೋದಲ್ಲಿ ಹ್ಯೂಮನಾಯ್ಡ್ ರೋಬೋಟ್ ಗದ್ದೆಯಲ್ಲಿ ಗುದ್ದಲಿಯಂತಹ ಉಪಕರಣ ಬಳಸಿ ಬೆಳೆ ಕಟಾವು ಮಾಡುತ್ತಿರುವ ದೃಶ್ಯ ಕಾಣಿಸುತ್ತದೆ. ಇದನ್ನು ನೋಡಿ ಕೆಲವರು AI ತಂತ್ರಜ್ಞಾನ ಎಷ್ಟು ವೇಗವಾಗಿ ಅಭಿವೃದ್ಧಿಯಾಗುತ್ತಿದೆ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಮತ್ತೊಂದೆಡೆ, ಇದು ಜನರೇಟಿವ್ AI ಮೂಲಕ ಸೃಷ್ಟಿಸಲಾದ ದೃಶ್ಯವಾಗಿರಬಹುದು ಎಂದು ಹಲವರು ಅನುಮಾನ ವ್ಯಕ್ತಪಡಿಸಿದ್ದಾರೆ.
ಕೆಲವರು, ಈ ಬೆಳೆಗಳು ಮತ್ತು ರೋಬೋಟ್ನ ಚಲನೆಗಳು ಸಹಜವಾಗಿಲ್ಲ. ಇದು ನೈಜ ದೃಶ್ಯವಾಗಿರುವ ಸಾಧ್ಯತೆ ಕಡಿಮೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಇನ್ನೂ ಕೆಲವರು, ಇದು ನಿಜವಲ್ಲದಿದ್ದರೂ ಭವಿಷ್ಯದ ರೊಬೊಟಿಕ್ಸ್ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎಂಬುದಕ್ಕೆ ಸಂಕೇತ ಎಂದು ಹೇಳಿದ್ದಾರೆ.

Krushi Bhagya For Farmers | ಕೃಷಿ ಭಾಗ್ಯ ಯೋಜನೆಗೆ ಅರ್ಜಿ ಆಹ್ವಾನ: ರೈತರಿಗೆ ₹90 ಸಾವಿರ ಸಹಾಯಧನ