Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ಪ್ಯಾರಿಸ್ ಒಲಿಂಪಿಕ್ಸ್‌ಗೆ ಭಾರತದ ಕೆ9 ಭದ್ರತೆ! ಏನಿದು ಕೆ9?
ದೇಶಪ್ರಮುಖವಿದೇಶ

ಪ್ಯಾರಿಸ್ ಒಲಿಂಪಿಕ್ಸ್‌ಗೆ ಭಾರತದ ಕೆ9 ಭದ್ರತೆ! ಏನಿದು ಕೆ9?

Share
3 Min Read
SHARE

newsics.com

ನವದೆಹಲಿ: ಜುಲೈ 26 ರಿಂದ ಆರಂಭವಾಗುವ 2024ರ ಪ್ಯಾರಿಸ್ ಒಲಿಂಪಿಕ್ಸ್‌ಗೆ ಇದೇ ಮೊದಲ ಬಾರಿ ಭಾರತದ ಭಯೋತ್ಪಾದಕ ನಿಗ್ರಹ ಕಾರ್ಯಾಚರಣೆಗೆ ಸಂಬಂಧಿಸಿದಂತೆ ವಿಶೇಷ ತರಬೇತಿ ಪಡೆದಿರುವ ಕೆ9 (Canine) ಶ್ವಾನದಳ ಭದ್ರತೆ ಒದಗಿಸಲಿದೆ.

ಬೆಂಗಳೂರಿನ ಸಿಆರ್‌ಪಿಎಫ್‌ನಲ್ಲಿ ತರಬೇತಿ ಪಡೆದಿರುವ ಶ್ವಾನಗಳೂ ಸೇರಿ ದೇಶದ ಬಹು ಭದ್ರತಾ ಪಡೆಗಳಲ್ಲಿನ 10 ಶ್ವಾನಗಳು ಈ ತಂಡದಲ್ಲಿವೆ.

ಈಗಾಗಲೇ ಪ್ಯಾರಿಸ್‌ಗೆ ಕೆ9 ಭದ್ರತಾ ದಳ ತೆರಳಿದ್ದು, ಆಗಸ್ಟ್ 12 ರವರೆಗೆ ನಡೆಯಲಿರುವ ಕ್ರೀಡಾಕೂಟಕ್ಕೆ ಭದ್ರತೆ ಒದಗಿಸುವ ಮೂಲಕ ತೀಕ್ಷ್ಣಮತಿಯ ಭಾರತದ ಶ್ವಾನದಳದ ಸಾಮರ್ಥ್ಯ ಜಗತ್ತಿಗೇ ಪರಿಚಯವಾಗಲಿದೆ.

ಭಾರತದಲ್ಲಿ ವಿವಿಧ ಅಪರಾಧ ನಿಗ್ರಹ ಕಾರ್ಯಾಚರಣೆಗಳಲ್ಲಿ ಭಾಗಿಯಾಗಿ ಚುರುಕುತನ ತೋರಿದ ಶ್ವಾನದಳದ ಸಾಮರ್ಥ್ಯವನ್ನು ದೇಶದಲ್ಲಿರುವ ಫ್ರಾನ್ಸ್ ರಾಯಭಾರ ಕಚೇರಿ ಗಮನಿಸಿತ್ತು.

ಭಾರತಕ್ಕೆ ಫ್ರಾನ್ಸ್ ಮನವಿ:

ಈ ಹಿನ್ನೆಲೆಯಲ್ಲಿ, 2024 ರ ಒಲಿಂಪಿಕ್ಸ್ ಮತ್ತು ಪ್ಯಾರಾಲಿಂಪಿಕ್ ಕ್ರೀಡಾಕೂಟಗಳಲ್ಲಿ ಭದ್ರತಾ ಕ್ರಮಗಳನ್ನು ಹೆಚ್ಚಿಸುವ ದೃಷ್ಟಿಯಿಂದ ಭಾರತದಲ್ಲಿನ ಫ್ರಾನ್ಸ್ ರಾಯಭಾರ ಕಚೇರಿಯು ಕೆ9 (ಶ್ವಾನಗಳು ಹಾಗೂ ಅವುಗಳಿಗೆ ತರಬೇತಿ ನೀಡಿರುವ ಪೊಲೀಸ್ ಅಧಿಕಾರಿಗಳು) ಶ್ವಾನದಳ ಒದಗಿಸಲು ಭಾರತಕ್ಕೆ ಮನವಿ ಮಾಡಿತ್ತು.

ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಭಾರತ ಸರ್ಕಾರ, ಕೆ9 ದಳವನ್ನು ಫ್ರಾನ್ಸ್‌ಗೆ ಕಳುಹಿಸಲು ಒಪ್ಪಿಗೆ ನೀಡಿತು. ಈ ಹಿನ್ನೆಲೆಯಲ್ಲಿ ಇದೇ ಜುಲೈ 11 ರಿಂದ ಆಗಸ್ಟ್ 12 ರವರೆಗೆ ಪ್ಯಾರಿಸ್‌ನಲ್ಲಿ ನಡೆಯಲಿರುವ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಭದ್ರತೆ ಒದಗಿಸಲು ಕೆ9 ದಳದ ಶ್ವಾನಗಳು ಕಾರ್ಯಾಚರಣೆಗಿಳಿದಿವೆ.

10 ಶ್ವಾನ, 17 ಸಿಬ್ಬಂದಿ:

ಫ್ರಾನ್ಸ್ ರಾಯಭಾರ ಕಚೇರಿ ಮನವಿ ಹಿನ್ನೆಲೆಯಲ್ಲಿ ಬಹು ಭದ್ರತಾ ಪಡೆಗಳ ತಂಡಗಳಲ್ಲಿನ ಶ್ವಾನಗಳು ಪ್ಯಾರಿಸ್ ಒಲಿಂಪಿಕ್ಸ್‌ಗೆ ಭದ್ರತೆ ಒದಗಿಸಲಿವೆ. ಈ ತಂಡದಲ್ಲಿ ಕೇಂದ್ರೀಯ ಮೀಸಲು ಪೊಲೀಸ್ ಪಡೆ(ಸಿಆರ್‌ಪಿಎಫ್), ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಗಳು(ಸಿಎಪಿಎಫ್), ಇಂಡೋ ಟಿಬೆಟ್ ಗಡಿ ಪೊಲೀಸ್(ಐಟಿಬಿಪಿ), ಸಶಸ್ತ್ರ ಸೀಮಾ ಬಲ(ಎಸ್‌ಎಸ್‌ಬಿ), ಅಸ್ಸಾಂ ರೈಲ್ಸ್ ಮತ್ತು ರಾಷ್ಟ್ರೀಯ ಭದ್ರತಾ ದಳದ (ಎನ್‌ಎಸ್‌ಜಿ) 10 ಕೆ9 ಶ್ವಾನಗಳು ಹಾಗೂ ಶ್ವಾನದಳ ನಿರ್ವಹಣೆ ಮಾಡುವ 17 ಸಿಬ್ಬಂದಿ ನಿಯೋಜನೆಗೊಂಡಿದ್ದಾರೆ.

ಬೆಂಗಳೂರಿನ ಸಿಆರ್‌ಪಿಎಫ್ ತರಬೇತಿ ಶಾಲೆಯಲ್ಲಿ ಕ್ರೀಡಾಕೂಟಕ್ಕೆ ಭದ್ರತೆ ಒದಗಿಸಲು ತರಬೇತಿ ಮತ್ತು ಪರೀಕ್ಷೆಗಳನ್ನು ನಡೆಸಿದ ನಂತರ ಕೆ9 ತಂಡವನ್ನು ಆಯ್ಕೆ ಮಾಡಲಾಗಿದೆ. ಫ್ರಾನ್ಸ್‌ನ ವಿವಿಧೆಡೆ ನಡೆಯಲಿರುವ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭದ್ರತೆ ಒದಗಿಸಲು
ಈಗಾಗಲೇ (ಜು. 10) ಕೆ9 ತಂಡಗಳು ತೆರಳಿವೆ.

ಯಾವ ಜಾತಿಯ ಶ್ವಾನ?:

ಕೆ9 ಶ್ವಾನದಳದ ಬೆಲ್ಜಿಯನ್ ಶೆರ್ಡ್ ಮಾಲಿನೋಯಿಸ್ ತಳಿಯ 5 ವರ್ಷದ ವಾಸ್ಟ್ ಮತ್ತು 3 ವರ್ಷದ ಡೆನ್ಬೈ ಶ್ವಾನಗಳನ್ನು ಆಯ್ಕೆ ಮಾಡಲಾಗಿದೆ. ಜತೆಗೆ ತಂಡವು 6 ಬೆಲ್ಜಿಯನ್ ಮಾಲಿನೋಯಿಸ್, 3 ಜರ್ಮನ್ ಶೆರ್ಡ್ಸ್ ಮತ್ತು 1 ಲ್ಯಾಬ್ರಡಾರ್ ರಿಟ್ರೈವರ್ ತಳಿಗಳ 10 ನಾಯಿಗಳನ್ನು ಒಳಗೊಂಡಿದೆ.

ಒಟ್ಟಾರೆ ಈ ತಂಡದಲ್ಲಿ 10 ಶ್ವಾನಗಳಿದ್ದು, ಕ್ರೀಡಾಕೂಟದಲ್ಲಿ ಪ್ರತಿಯೊಬ್ಬರ ಸುರಕ್ಷತೆ ಖಾತ್ರಿಪಡಿಸುವಲ್ಲಿ ಹೆಚ್ಚು ತರಬೇತಿ ಪಡೆದ ನಾಯಿಗಳು ನಿರ್ಣಾಯಕ ಪಾತ್ರ ವಹಿಸುತ್ತವೆ. ಕೆ9 ತಂಡ ಸ್ಫೋಟಕಗಳು, ಮದ್ದುಗುಂಡುಗಳು ಮತ್ತು ಮಾದಕ ದ್ರವ್ಯಗಳನ್ನು ಪತ್ತೆ ಹಚ್ಚುವ ಸಾಮರ್ಥ್ಯ ಹೊಂದಿದೆ.

ಜಿ20 ಭದ್ರತೆ ಮಾನದಂಡ:

ಕೆ9 ಶ್ವಾನಗಳು ಭಾರತದಲ್ಲಿ ಕಳೆದ ವರ್ಷ ನಡೆದ ಜಿ-20 ಶೃಂಗಸಭೆ ಸಮಯದಲ್ಲಿ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸುವುದರೊಂದಿಗೆ ವ್ಯಾಪಕ ಮನ್ನಣೆ ಗಳಿಸಿದ್ದವು. ಆದರೆ, ಭಾರತೀಯ ಕೆ9 ದಳವು ವಿದೇಶದಲ್ಲಿ ಇಂತಹ ಕರ್ತವ್ಯಗಳನ್ನು ನಿರ್ವಹಿಸುತ್ತಿರುವುದು ಇದೇ ಮೊದಲು. ಎಲ್ಲ ಶ್ವಾನಗಳನ್ನು ಅವುಗಳ ವಿಶಿಷ್ಟ ಸಾಮರ್ಥ್ಯದ ಆಧಾರದ ಮೇಲೆ ಆಯ್ಕೆ ಮಾಡಲಾಗಿದೆ.

ಭಾರತೀಯ ಸೇನೆಗೂ ಸೇರ್ಪಡೆ ಚಿಂತನೆ:

ಬೆಲ್ಜಿಯನ್ ಮಾಲಿನೋಯಿಸ್ ತಳಿಯನ್ನು ನಕ್ಸಲ್ ವಿರೋಧಿ ಕಾರ್ಯಾಚರಣೆಗಳಲ್ಲಿ ಸಿಆರ್‌ಪಿಎಫ್ ವ್ಯಾಪಕವಾಗಿ ಬಳಸುತ್ತದೆ. ಈ ತಳಿ ಚುರುಕುತನ, ತೀಕ್ಷ್ಣಮತಿ ಮತ್ತು ಆಕ್ರಮಣಶೀಲತೆಗೆ ಹೆಸರಾಗಿದೆ.

ಈ ಹಿನ್ನೆಲೆಯಲ್ಲಿ ಬೆಲ್ಜಿಯನ್ ಮಾಲಿನೊಯಿಸ್ ತಳಿ ಪ್ರಪಂಚದಾದ್ಯಂತ ವಿಶೇಷ ಪಡೆಗಳ ಮೆಚ್ಚುಗೆ ಗಳಿಸಿದೆ. ಹೀಗಾಗಿ ಸೇನೆಯಲ್ಲಿ ಅವುಗಳನ್ನು ಸೇರ್ಪಡೆಗೊಳಿಸಲು ಭಾರತೀಯ ಸೇನೆ ಚಿಂತನೆ ನಡೆಸುತ್ತಿದೆ.

ಕೇರಳದಲ್ಲಿ ಕಾಡಾನೆ ಸಂಖ್ಯೆ ಶೇ.7ರಷ್ಟು ಇಳಿಕೆ! ಈಗ ದೇವರ ನಾಡಲ್ಲಿವೆ 1793 ಕಾಡಾನೆಗಳು

ಒಂದು ಜೊತೆ ಹವಾಯಿ ಚಪ್ಪಲಿ ಬೆಲೆ 1 ಲಕ್ಷ ರೂಪಾಯಿ

ತಮ್ಮದೇ ಖಾಸಗಿ ವಿಡಿಯೋ ಲೀಕ್ ಮಾಡಿದರೇ ನಟಿ ಊರ್ವಶಿ

ಬೆತ್ತಲೆ ಪಾರ್ಟಿಯ ಭಯಾನಕ ಅನುಭವ ಹಂಚಿಕೊಂಡ ನಟಿ

ಇನ್‌ಸ್ಟಾಗ್ರಾಮ್‌ನಲ್ಲಿಯೇ ಪತಿಗೆ ತಲಾಖ್ ನೀಡಿದ ದುಬೈ ರಾಜಕುಮಾರಿ

TAGGED:India's K9 security Paris Olympics What is K9? canine newsics France
Share This Article
Facebook Twitter Copy Link Print
Previous Article ಕೇರಳದಲ್ಲಿ ಕಾಡಾನೆ ಸಂಖ್ಯೆ ಶೇ.7ರಷ್ಟು ಇಳಿಕೆ! ಈಗ ದೇವರ ನಾಡಲ್ಲಿವೆ 1793 ಕಾಡಾನೆಗಳು
Next Article ಶುಭೋದಯ… ಕ್ರೋಧಿ ಸಂವತ್ಸರ, ದಕ್ಷಿಣಾಯನ, ಗ್ರೀಷ್ಮ ಋತು, ಆಷಾಢ ಮಾಸ, ಶುಕ್ಲ ಪಕ್ಷ, ದ್ವಾದಶಿ, ಗುರುವಾರ 18-07-2024

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಪ್ರಮುಖದೇಶ

NEET Protest ಪಿಎಂ ನಿವಾಸದ ಎದುರು ಬೃಹತ್ ಧರಣಿ; ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ಪ್ರಮುಖ ನಾಯಕರ ಬಂಧನ

1 Min Read
ಪ್ರಮುಖದೇಶಮನರಂಜನೆ

Nandamuri Balakrishna ಶೂಟಿಂಗ್ ಸೆಟ್‌ನಲ್ಲಿ ಅವಘಡ: ‘ನಟಸಿಂಹ’ ಬಾಲಕೃಷ್ಣ ಮೊಣಕಾಲಿಗೆ ಗಾಯ, ಆಸ್ಪತ್ರೆಗೆ ದಾಖಲು

1 Min Read
ಕರ್ನಾಟಕದೇಶಪ್ರಮುಖ

Cabinet expansion ನಾಳೆಯೇ ಸಚಿವ ಸಂಪುಟ ವಿಸ್ತರಣೆಯಾಗತ್ತಾ? ಲಕ್ಷ್ಮೀ ಹೆಬ್ಬಾಳ್ಕರ್‌ಗೋಸ್ಕರ ಮತ್ತೆ ಚರ್ಚೆಗಿಳಿದ ಹೈಕಮಾಂಡ್! ಪ್ರಮಾಣವಚನ ಮುಂದೂಡಿಕೆ ಸಾಧ್ಯತೆ

1 Min Read
ಪ್ರಮುಖCrimeವಿದೇಶ

Middle East War ಕುವೈತ್, ಬಹ್ರೇನ್ ಮಿಲಿಟರಿ ನೆಲೆಗಳ ಮೇಲೆ ಭೀಕರ ದಾಳಿ ನಡೆಸಿದ ಇರಾನ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?