newsics.com
ನವದೆಹಲಿ :ಒಂದು ಜೊತೆ ಹವಾಯಿ ಚಪ್ಪಲಿ ದರ 1 ಲಕ್ಷ ರೂಪಾಯಿ ಆಗಿದೆ. ಇದನ್ನು ಓದಿ ನೀವು ಶಾಕ್ ಆಗಿದ್ದರೇ ಇದೇ ನಿಜ.
ಕುವೈತ್ ಇನ್ಸೈಡ್ ಎನ್ನುವ ಇನ್ಸ್ಟಾದಲ್ಲಿ ಈ ಬಗೆಗಿನ ವಿಡಿಯೋ ಒಂದು ಪೋಸ್ಟ್ ಮಾಡಲಾಗಿದೆ. ಸೌದಿ ಅರೇಬಿಯಾದಲ್ಲಿ ವ್ಯಕ್ತಿ ಒಬ್ಬರು ಚಪ್ಪಲಿ ಖರೀದಿ ಮಾಡಲೆಂದು ಸ್ಟೋರ್ವೊಂದರ ಒಳಗೆ ಹೋಗಿದ್ದಾರೆ. ಈ ವೇಳೇ ಆ ಸ್ಟೋರ್ನಲ್ಲಿ ಭಾರತದಲ್ಲಿ ಡೈಲಿ ಬಳಕೆ ಮಾಡೋ ಮಾಮೂಲಿ ಚಪ್ಪಲಿಗಳನ್ನು ಎಸಿ ರೂಮ್ನಲ್ಲಿ ಗ್ಲಾಸ್ ಒಳಗೆ ಒಳ್ಳೆ ಬಂಗಾರ ಇಡುವಾಗೆ ಇಡಲಾಗಿದೆ.
ಚಪ್ಪಲಿಗಳನ್ನ ಗ್ಲಾಸ್ ಒಳಗಿಂದ ತೆಗೆದು ಸಿಬ್ಬಂದಿ ಬೆಂಡ್ ಮಾಡಿ, ಮೇಲೆ, ಕೆಳಗೆ ತೋರಿಸುತ್ತಾರೆ. ಆದರೆ ಇವುಗಳ ಬೆಲೆ 4,590 ಸೌದಿ ರಿಯಾಲ್ ಆಗಿದೆ. ಅಂದರೆ ಭಾರತದ ಕರೆನ್ಸಿಗೆ ಹೋಲಿಕೆ ಮಾಡಿದ್ರೆ ಇದರ ದರ ಬರೋಬ್ಬರಿ 1,02,240 ರೂಪಾಯಿ ಆಗಿದೆ ಎಂದು ತಿಳಿದು ಬಂದಿದೆ.
ಒಂದು ಜೊತೆ ಚಪ್ಪಲಿ ಬೆಲೆ 1 ಲಕ್ಷ ರೂಪಾಯಿ ದಾಟಿರುವುದು ಎಲ್ಲರಿಗೂ ಆಶ್ಚರ್ಯಕರ ಸಂಗತಿಯೇ ಎನ್ನಬಹುದು. ಇನ್ನು ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ವೈರಲ್ ಆಗಿದ್ದು ವಿವಿಧ ಕಾಮೆಂಟ್ಸ್ ಮಾಡುತ್ತಿದ್ದಾರೆ.
https://www.instagram.com/reel/C9ZzJ_1NYNX/?utm_source=ig_web_copy_link