newsics.com
ಜರ್ಮನ್ : ನಟಿ ಸುಚಿತ್ರ ಇತ್ತೀಚೆಗೆ ಜರ್ಮನಿ ರಾಜಧಾನಿ ಬರ್ಲಿನ್ನಲ್ಲಿ ಬೆತ್ತಲೆ ಪಾರ್ಟಿಗೆ ಹೋಗಿದ್ದರಂತೆ. ಆ ಪಾರ್ಟಿಯ ಅನುಭವವನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಬರ್ಲಿನ್ನ (ಜರ್ಮನಿ ರಾಜಧಾನಿ) ಬಾಡಿ ಪಾಸಿಟಿವಿಟಿ/ ನೇಕೆಡ್ ಪಾರ್ಟಿಯಲ್ಲಿ ಭಾಗವಹಿಸಿದೆ. ಅಲ್ಲಿಗೆ ಹೋದ ಬಳಿಕ ‘ಮೆದುಳೇ ಬಿದ್ದು ಹೋಗುವಷ್ಟು ಓಪನ್ ಮೈಂಡೆಡ್ ಆಗಬಾರದು’ ಎಂಬ ಮಾತು ನೆನಪಾಯ್ತು. ನಾನು ಯಾವತ್ತಿದ್ದರೂ ದೇಸಿ ಹುಡುಗಿಯೇ, ಈ ಕೂಡಲೇ ಸ್ನಾನ ಮಾಡಿ, ಗಾಯತ್ರಿ ಮಂತ್ರ ಪಠಣ ಮಾಡಬೇಕು’ ಎಂದು ನಟಿ ಬರೆದುಕೊಂಡಿದ್ದಾರೆ. ಅಲ್ಲಿಗೆ ಹೋಗಿ ಪಾಪ ಮಾಡಿದ ಅನುಭವ ನಟಿ ಸುಚಿತ್ರ ಕೃಷ್ಣಮೂರ್ತಿಗೆ ಆಯ್ತಂತೆ, ಅದಕ್ಕೆಂದೆ ಸ್ನಾನ ಮಾಡಿ ಶುದ್ಧವಾಗಿ ಗಾಯತ್ರಿ ಮಂತ್ರ ಪಠಿಸಬೇಕು ಎಂದು ಬರೆದುಕೊಂಡಿದ್ದಾರೆ.
ಎಲ್ಲದರ ಅನುಭವ ಇರಬೇಕು ಎಂದುಕೊಂಡು ಹೋಗಿದ್ದೆ. ಆದರೆ ಅಲ್ಲಿಗೆ ಹೋದ ಮೇಲೆ ಕೇವಲ 20 ನಿಮಿಷಕ್ಕೆ ಅಲ್ಲಿಂದ ವಾಪಸ್ ಓಡಿ ಬಂದೆ. ನನಗೆ ಅಲ್ಲಿ ಇರಲು ಸಾಧ್ಯವಾಗಲಿಲ್ಲ. ನನಗೆ ಇನ್ನೊಬ್ಬರ ಸ್ತನ, ನಿತಂಬಗಳನ್ನು ನೋಡಲು ಸಾಧ್ಯವಾಗಲಿಲ್ಲ’ ಎಂದಿದ್ದಾರೆ.
‘ಆದರೆ ಇಂಥಹ ಪಾರ್ಟಿಗಳೆಲ್ಲ ಇಲ್ಲಿ ತೀರ ಸಾಮಾನ್ಯ. ಫನ್ ಗಾಗಿ ಹಾಗೂ ಪಾಸಿಟಿವಿಟಿ ಹೆಚ್ಚಿಸಲು ಈ ರೀತಿಯ ಇವೆಂಟ್ಗಳನ್ನು ಆರ್ಗನೈಜ್ ಮಾಡುತ್ತಿರುತ್ತಾರೆ. ಅದು ಅಸಹ್ಯ ಎಂದೇನೂ ಅಲ್ಲ. ಆದರೆ ನಾವು ಭಾರತೀಯರು ಭಿನ್ನವಾಗಿ ಬೆಳೆದಿರುತ್ತೇವೆ ಎಂದಿದ್ದಾರೆ.