newsics.com
ದುಬೈ : ರಾಜಕುಮಾರಿ ಶೈಖಾ ಮಹ್ರಾ ಮೊಹಮ್ಮದ್ ರಶೆದ್ ಅಲ್ ಮಕ್ತೂಮ್ ಅವರು ತಮ್ಮ ಪತಿ ಶೇಖ್ ಮನ ಬಿನ್ ಮೊಹಮ್ಮದ್ ಬಿನ್ ರಶೀದ್ ಬಿನ್ ಮನಾ ಅಲ್ ಮಕ್ತೌಮ್‌ಗೆ ಇನ್‌ಸ್ಟಾಗ್ರಾಮ್‌ನಲ್ಲಿ ‘ವಿವಾಹ ವಿಚ್ಛೇದನ’ ನೀಡಿದ್ದಾರೆ.
ದುಬೈ ರಾಜಕುಮಾರಿ ಶೈಖಾ ಮಹ್ರಾ ಮೊಹಮ್ಮದ್ ರಶೆದ್ ಅಲ್ ಮಕ್ತೂಮ್ಅ ವರು ತಮ್ಮ ಪತಿ ಶೇಖ್ ಮನ ಬಿನ್ ಮೊಹಮ್ಮದ್ ಬಿನ್ ರಶೀದ್ ಬಿನ್ ಮನಾ ಅಲ್ ಮಕ್ತೌಮ್‌ಗೆ ಇನ್‌ಸ್ಟಾಗ್ರಾಮ್‌ನಲ್ಲಿ ‘ವಿವಾಹ ವಿಚ್ಛೇದನ’ ನೀಡಿದ್ದಾರೆ. ಜುಲೈ 16 ರಂದು ರಾಜಕುಮಾರಿ ತಾನು ವಿಚ್ಛೇದನ ನೀಡುತ್ತಿರುವುದಾಗಿ ಇನ್‌ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಹಾಕಿದ್ದಾರೆ.
ಜುಲೈ 16 ರಂದು ರಾಜಕುಮಾರಿ ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ, ತನ್ನ ಪತಿ ನನಗೆ ದ್ರೋಹವೆಸಗಿದ ಕಾರಣ ವಿಚ್ಛೇದನ ನೀಡುತ್ತಿರುವುದಾಗಿ ಹೇಳಿದ್ದಾರೆ. “ಪ್ರೀತಿಯ ಗಂಡ, ನೀವು ಇತರ ಸಂಗಾತಿಯೊಂದಿಗೆ ನಿರತರಾಗಿರುವ ಹೊತ್ತಲ್ಲೇ ನಾನು ಈ ಮೂಲಕ ನಮ್ಮ ವಿಚ್ಛೇದನವನ್ನು ಘೋಷಿಸುತ್ತೇನೆ. ನಾನು ನಿಮಗೆ ವಿಚ್ಛೇದನ ನೀಡುತ್ತಿದ್ದೇನೆ. ಕಾಳಜಿ ವಹಿಸಿ. ನಿಮ್ಮ ಮಾಜಿ ಪತ್ನಿ,” ಎಂದು ರಾಜಕುಮಾರಿ ಪೋಸ್ಟ್ ಮಾಡಿದ್ದಾರೆ.