newsics.com
ವಿದ್ಯಾರ್ಥಿಯೊಬ್ಬ ಪರೀಕ್ಷೆಯಲ್ಲಿ ಹೃದಯದ ಚಿತ್ರ ಬರೆದು ಹೃದಯದ ಭಾಗಗಳಿಗೆ ಐವರು ಹುಡುಗಿಯರ ಹೆಸರು ಬರೆದಿರುವ ವಿಡಿಯೋ ವೈರಲ್ ಆಗಿದೆ.
ಪರೀಕ್ಷೆಯಲ್ಲಿ ಕೇಳಲಾದ ಪ್ರಶ್ನೆಗೆ ವಿದ್ಯಾರ್ಥಿಯೊಬ್ಬ ಹೃದಯದ ಚಿತ್ರ ಬಿಡಿಸಿ, ಅದರ ಭಾಗಗಳನ್ನು ಹುಡುಗಿಯರ ಹೆಸರಿನಿಂದ ಹೆಸರಿಸಿದ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗಿದೆ.
ಹೃದಯದ ಚಿತ್ರ ಬಿಡಿಸಿ ಅದರ ಭಾಗಗಳನ್ನು ಹೆಸರಿಸಿ ಎಂದು ಪರೀಕ್ಷೆಯಲ್ಲಿ ಪ್ರಶ್ನೆ ಕೇಳಲಾಗಿತ್ತು. ಅದಕ್ಕೆ ವಿದ್ಯಾರ್ಥಿಯೊಬ್ಬ ಹೃದಯದ ಚಿತ್ರವನ್ನೇನೋ ಬಿಡಿಸಿದ್ದಾನೆ. ಆದರೆ ಹೃದಯದ ಭಾಗಗಳನ್ನು ಹೆಸರಿಸುವಾಗ 5 ಹುಡುಗಿಯರ ಹೆಸರನ್ನು ಬರೆದಿದ್ದಾನೆ. ಹರಿತಾ, ಪ್ರಿಯಾ, ರೂಪಾ, ನಮಿತಾ ಮತ್ತು ಪೂಜಾ ಎಂದು ಹೆಸರಿಸಿದ್ದಾನೆ.
ಅಷ್ಟೇ ಅಲ್ಲ, ಹೃದಯದ ಭಾಗಗಳ ಕಾರ್ಯಗಳನ್ನು ವಿವರಿಸುವಲ್ಲಿ ಆ ಹುಡುಗಿಯರ ಬಗ್ಗೆ ಬರೆದಿದ್ದಾನೆ.
ಈ ಚಿತ್ರ ಗಮನಿಸಿದ ಮೌಲ್ಯಮಾಪಕರು ವಿದ್ಯಾರ್ಥಿಯ ಪೋಷಕರಿಗೆ ಕರೆ ಮಾಡಿದ್ದಾರೆ ಎನ್ನಲಾಗಿದೆ. ಸದ್ಯ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
T20 World cup 2024 ದೆಹಲಿ ಏರ್‌ಪೋರ್ಟ್‌ನಲ್ಲಿ ಅಂತಿಮ ಪಂದ್ಯ ವೀಕ್ಷಿಸಿದ ಸಿದ್ದರಾಮಯ್ಯ, ವಿಡಿಯೋ ವೈರಲ್
Cow Dung Soup! ಈ ದೇಶದಲ್ಲಿ ಹಸುವಿನ ಸಗಣಿಯಿಂದ ತಯಾರಾಗುತ್ತೆ ವಿಶೇಷ್ ಸೂಪ್