newsics.com
ವಿಯೆಟ್ನಾಂ: ನಾವು ನಾನಾ ರೀತಿ ಸೂಪ್ ಬಗ್ಗೆ ಕೇಳಿದ್ದೇವೆ ಹಾಗೂ ಕುಡಿದಿದ್ದೇವೆ. ವೆಜ್ ಸೂಪ್, ನಾನ್ವೆಜ್ ಸೂಪ್, ಕಾಲು ಸೂಪ್ ಹೀಗೆ ವಿವಿಧ ಪ್ರಕಾರದ ಸೂಪ್‌ಗಳ ರುಚಿ ನೋಡಿದ್ದೇವೆ. ಆದರೆ ಎಂದಾದರೂ ಹಸುವಿನ ಸಗಣಿಯಿಂದ ಸೂಪ್ ಮಾಡಿದ್ದನ್ನು ನೋಡಿದ್ದೀರಾ? ಇಲ್ಲಿದೆ ನೋಡಿ ಕೌ ಡಂಗ್ ಸೂಪ್.
ವಿಯಟ್ನಾಂನಲ್ಲಿ ಕೌ ಡಂಗ್ ಸೂಪ್ ಎಂದು ತಯಾರಿಸುತ್ತಾರೆ. ಮಾರುಕಟ್ಟೆಯಿಂದ ತಾಜಾ ಹಸುವಿನ ಸಗಣಿ ತಂದು ಅದರಿಂದ ಸೂಪ್ ತಯಾರಿಸಿ ಕುಡಿಯುತ್ತಾರೆ ಇಲ್ಲಿನ ಜನರು. ಹಸುವಿನ ಸಗಣಿ ಹಾಗೂ ಕರುಳನ್ನು ಹುಲ್ಲಿನ ಜತೆ ಸೇರಿಸಿ ಬೇಯಿಸುತ್ತಾರೆ. ಉಪ್ಪು, ಮಸಾಲೆ ಹಾಕಿ ಸೂಪ್ ಕುದಿಸುತ್ತಿದ್ದಂತೆ ಸುವಾಸನೆಯ ಮಿಶ್ರಣವಾಗಿ ರೂಪಾಂತರಗೊಳ್ಳುತ್ತದೆಯಂತೆ. ಆರೊಮ್ಯಾಟಿಕ್ ಎಲೆಗಳ ಸುವಾಸನೆ ಹಾಗೂ ಹುಲ್ಲಿನ ಅಸ್ಪಷ್ಟ ರುಚಿಯೊಂದಿಗೆ ಮಾಂಸಭರಿತ ಸೂಪ್ ಕುಡಿಯುತ್ತಾರಂತೆ ವಿಯೆಟ್ನಾಂ ಮಂದಿ.
ದರ್ಶನ್ ಭೇಟಿಗೆ ಮುಂದಾದ ನಟ, ನಟಿಯರು: ಬದಲಾಯ್ತಾ ಸ್ಯಾಂಡಲ್‌ವುಡ್ ಮಂದಿಯ ಧೋರಣೆ?
ತುಳು ಆಸಕ್ತರಿಗೆ ಸಿಹಿ ಸುದ್ದಿ! ಗೂಗಲ್ ಟ್ರಾನ್ಸ್‌ಲೇಟ್‌ಗೆ ತುಳು ಸೇರ್ಪಡೆ
26 ವರ್ಷದ ಯುವಕ ತಯಾರಿಸಿದ ಮೆಸೇಜಿಂಗ್ ಆ್ಯಪ್ ಬರೋಬ್ಬರಿ 416 ಕೋಟಿ ರೂ.ಗೆ ಸೇಲ್