newsics.com/ನ್ಯೂಸಿಕ್ಸ್
ಧರ್ಮಸ್ಥಳ ಬುರುಡೆ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಅತಿ ದೊಡ್ಡ ತಿರುವು ಸಿಕ್ಕಿದೆ. ಧರ್ಮಸ್ಥಳದ ‘ಬುರುಡೆ ಗ್ಯಾಂಗ್’ ವಿರುದ್ಧವೇ ಚಿನ್ನಯ್ಯ ಕೋರ್ಟ್ ಮೆಟ್ಟಿಲೇರಿದ್ದಾನೆ. ಚಿನ್ನಯ್ಯ ಸಲ್ಲಿಸಿರುವ ಅರ್ಜಿಯಲ್ಲಿ ಸ್ಫೋಟಕ ಮಾಹಿತಿಗಳನ್ನು ಉಲ್ಲೇಖಿಸಲಾಗಿದೆ.
ಬುರುಡೆ ಪ್ರಕರಣ’ಕ್ಕೆ ಸಂಬಂಧಪಟ್ಟಂತೆ ಬುರುಡೆ ಗ್ಯಾಂಗ್‌ನ ಗಿರೀಶ್ ಮಟ್ಟಣ್ಣವರ್ ಹೇಳಿದಂತೆ ಕ್ಯಾಮೆರಾ ಮುಂದೆ ಹೇಳಬೇಕು ಎಂದು ನನಗೆ ಬೆದರಿಕೆ ಹಾಕಲಾಗಿತ್ತು ಎಂದು ‘ಮಾಸ್ಕ್ ಮ್ಯಾನ್’ ಚಿನ್ನಯ್ಯ ಹೈಕೋರ್ಟ್ ಗೆ ತಿಳಿಸಿದ್ದಾನೆ.
ಅಲ್ಲದೆ, ಧರ್ಮಾಧಿಕಾರಿ ಡಾ। ವೀರೇಂದ್ರ ಹೆಗ್ಗಡೆಅವರೇ ಅತ್ಯಾ೧ಚಾರ ಮಾಡಿ ಶವಗಳನ್ನು ಹೂಳಿದ್ದಾರೆ ಎಂದು ಹೇಳಿದರೆ ಶಿಕ್ಷೆ ವೀರೇಂದ್ರ ಹೆಗ್ಗಡೆ ಅವರಿಗೆ ಆಗುತ್ತದೆ ಎಂದು ಹೇಳಿ, ನ್ಯಾಯಾಲಯದ ಮುಂದೆ ಅದನ್ನು ಹೇಗೆ ವಿವರಿಸಬೇಕು ಎಂಬ ತರಬೇತಿಯನ್ನೂ ಕೊಟ್ಟಿದ್ದರು ಎಂದು ವಿವರಿಸಿದ್ದಾನೆ.
ಪ್ರಕರಣದ ಕುರಿತು ತನಿಖೆ ರಚಿಸಲು ರಾಜ್ಯ ಸರ್ಕಾರ ಎಸ್‌ಐಟಿ ರಚನೆ ಮಾಡಿದಾಗ ವೀರೇಂದ್ರ ಹೆಗ್ಗಡೆ ಅವರು ಜೈಲಿಗೆ ಹೋಗುವ ಸಮಯ ಬಂತು ಎಂದು ಬುರುಡೆ ಗ್ಯಾಂಗ್ ಸದಸ್ಯರು ಸಂಭ್ರಮ ಪಟ್ಟಿದ್ದರೂ ಎಂದೂ ವಿವರಿಸಿದ್ದಾನೆ.
ಬುರುಡೆ ಗ್ಯಾಂಗ್‌ನ ಮಹೇಶ್ ಶೆಟ್ಟಿ ತಿಮರೋಡಿ ಮನೆಯ ಒಂದು ಕೋಣೆಯಲ್ಲಿ ನನ್ನನ್ನು ಕೂಡಿ ಹಾಕಲಾಗಿತ್ತು., ‘ಕುಡ್ಲ ರಾಮ್ ಪೇಜ್’ ಚಾನೆಲ್‌ನ ಅಜಯ್ ಎಂಬ ಯೂಟ್ಯೂಬರ್ ಸುಮಾರು 30 ರಿಂದ 35 ವಿಡಿಯೋಗಳನ್ನು ರೆಕಾರ್ಡ್ ಮಾಡಿದರು. ಗಿರೀಶ್ ಮಟ್ಟಣ್ಣವರ್ ಹೇಳಿಕೊಟ್ಟಂತೆಯೇ ಹೇಳಿಕೆ ನೀಡುವಂತೆ ಬೆದರಿಸಲಾಯಿತು. ಜೀವ ಭಯದಿಂದ ಅವರ ಸೂಚನೆ ಪಾಲಿಸಿದೆ. ಸಮೀರ್ ಎಂ.ಡಿ. ಸಹ ನನ್ನ ವಿಡಿಯೋ ರೆಕಾರ್ಡ್ ಮಾಡಿದ. ಮಹೇಶ್ ಶೆಟ್ಟಿ ತಿಮರೋಡಿ ಮತ್ತು ಗಿರೀಶ್ ಮಟ್ಟಣ್ಣವರ್ ಅವರು ಮನೆ ನಿರ್ಮಾಣಕ್ಕೆ ಐದು ಲಕ್ಷ ರು. ಮೊತ್ತದ ಚೆಕ್ ನೀಡುವುದಾಗಿ ಭರವಸೆ ನೀಡಿದರು.
ಅದಕ್ಕೆ ಪ್ರತಿಯಾಗಿ, ‘ಡಿಟೆಕ್ಸ್ ಚಂದ್ರು’ ಎಂಬ ಯೂಟ್ಯೂಬ್ ಚಾನೆಲ್‌ನ ಮುಂದೆ ಅವರು ಹೇಳಿಕೊಟ್ಟ ಹೇಳಿಕೆ ನೀಡುವಂತೆ ಹೇಳಿದರು. ಅದರಂತೆ ವಿಡಿಯೋಗಳನ್ನು ರೆಕಾರ್ಡ್ ಮಾಡಲಾಯಿತು ಎಂದು ಅರ್ಜಿಯಲ್ಲಿ ಚಿನ್ನಯ್ಯ ತಿಳಿಸಿದ್ದಾನೆ.
ಧರ್ಮದ ಕಾರಣಕ್ಕೆ ಜಾಬ್ ರಿಜೆಕ್ಟ್: ಸೋಷಿಯಲ್ ಮೀಡಿಯಾದಲ್ಲಿ ಭಯಂಕರ ಚರ್ಚೆ!