newsics.com/ನ್ಯೂಸಿಕ್ಸ್
ಬೆಂಗಳೂರು: ಕಾನೂನು ವಿದ್ಯಾರ್ಥಿಯೊಬ್ಬರು ಮಾಡಿರುವ ಲಿಂಕ್ಡ್‌ಇನ್ ಪೋಸ್ಟ್ ಈಗ ಕಾರ್ಪೊರೇಟ್ ವಲಯದಲ್ಲಿ ಹೊಸದೊಂದು ದೊಡ್ಡ ವಿವಾದಕ್ಕೆ ಕಿಡಿ ಹೊತ್ತಿಸಿದೆ
ಬೆಂಗಳೂರಿನ ಕಾನೂನು ಸಂಸ್ಥೆಯೊಂದರಲ್ಲಿ ಇಂಟರ್ನ್‌ಶಿಪ್ ಮಾಡುತ್ತಿರುವ ಮೊಹಮ್ಮದ್ ಅಮೀನ್ ಎಂಬ ವಿದ್ಯಾರ್ಥಿ ಈ ಆಘಾತಕಾರಿ ವಿಷಯವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಕಂಗಾಲಾಗಿಸಿದ ರೆಕ್ರೂಟರ್ ಮೆಸೇಜ್ ಮೊಹಮ್ಮದ್ ಅಮೀನ್ ಅವರ ಪ್ರಕಾರ, ಈ ಘಟನೆ ನಡೆದಿರುವುದು ಅವರ ಆಪ್ತ ಸ್ನೇಹಿತನೊಬ್ಬನಿಗೆ. ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಿದ್ದ ಆ ಅಭ್ಯರ್ಥಿಯನ್ನು ಇಂಟರ್ವ್ಯೂ ಹಂತಕ್ಕೂ ಕರೆಯದೆ ನೇರವಾಗಿ ರಿಜೆಕ್ಟ್ ಮಾಡಲಾಗಿತ್ತು. ಆದರೆ, ಅದಕ್ಕೆ ನೀಡಲಾದ ಕಾರಣ ಮಾತ್ರ ಎಲ್ಲರನ್ನೂ ಬೆಚ್ಚಿಬೀಳಿಸುವಂತಿದೆ
ತನ್ನ ಆರೋಪಕ್ಕೆ ಪುಷ್ಟಿ ನೀಡಲು ಅಮೀನ್ ಅವರು ವಾಟ್ಸಾಪ್ ಚಾಟ್‌ನ ಸ್ಕ್ರೀನ್‌ಶಾಟ್ ಒಂದನ್ನು ಅಪ್‌ಲೋಡ್ ಮಾಡಿದ್ದಾರೆ. ಅದರಲ್ಲಿ ಕಂಪನಿಯ ರೆಕ್ರೂಟರ್ (ಉದ್ಯೋಗ ನೀಡುವ ಅಧಿಕಾರಿ), ಅಭ್ಯರ್ಥಿಯ ಧರ್ಮದ ಕಾರಣಕ್ಕಾಗಿಯೇ ಆತನ ಪ್ರೊಫೈಲ್ ಅನ್ನು ಮುಂದಿನ ಹಂತಕ್ಕೆ ಪರಿಗಣಿಸುತ್ತಿಲ್ಲ ಎಂದು ನೇರವಾಗಿ ಹೇಳಿರುವುದು ಕಂಡುಬಂದಿದೆ.
ಅಭ್ಯರ್ಥಿಯ ವಿದ್ಯಾರ್ಹತೆ, ಅನುಭವ ಅಥವಾ ಕೌಶಲ್ಯಗಳನ್ನು ಪರಿಗಣಿಸದೆ, ಕೇವಲ ಆತನ ಧರ್ಮದ ಗುರುತನ್ನು ನೋಡಿ ಇಂಟರ್ವ್ಯೂ ಅವಕಾಶ ನಿರಾಕರಿಸಿರುವುದು ಅತ್ಯಂತ ಆಘಾತಕಾರಿ ಮತ್ತು ಬೇಸರದ ಸಂಗತಿ ಎಂದು ಕಾನೂನು ವಿದ್ಯಾರ್ಥಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಪೋಸ್ಟ್‌ಗೆ ಲಿಂಕ್ಡ್‌ಇನ್ ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ:
ಒಂದು ವರ್ಗದ ಆಕ್ರೋಶ: ಯಾವುದೇ ಉದ್ಯೋಗವನ್ನು ಅಭ್ಯರ್ಥಿಯ ಕೌಶಲ್ಯ ಮತ್ತು ಯೋಗ್ಯತೆಯ ಮೇಲೆ ನೀಡಬೇಕೇ ಹೊರತು ಧರ್ಮ ಅಥವಾ ಜಾತಿಯ ಆಧಾರದ ಮೇಲಲ್ಲ. ಇದು ಸಮಾಜದಲ್ಲಿ ಇನ್ನು ಜೀವಂತವಾಗಿರುವ ಪೂರ್ವಾಗ್ರಹ ಪೀಡಿತ ಮನಸ್ಥಿತಿಗೆ ಹಿಡಿದ ಕನ್ನಡಿ ಎಂದು ಹಲವರು ಆತಂಕ ವ್ಯಕ್ತಪಡಿಸಿದ್ದಾರೆ.
ಆರು ವರ್ಷದ ಪ್ರೀತಿ : ಗಗನಸಖಿಗೆ ಮನಸು ಕೊಟ್ಟ ಖ್ಯಾತ ನಟನ ಲೈಫ್ ಬರ್ಬಾದ್ ಮಾಡಿದಳಾ ಆ ಚೆಲುವೆ?