Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > Giant Lizard ಅಮೆರಿಕದ ನಿದ್ದೆಗೆಡಿಸಿದ 4 ಅಡಿ ಉದ್ದ, 5 ಕೆಜಿ ತೂಕದ ದೈತ್ಯ ಹಲ್ಲಿ
ದೇಶಪ್ರಮುಖವಿದೇಶ

Giant Lizard ಅಮೆರಿಕದ ನಿದ್ದೆಗೆಡಿಸಿದ 4 ಅಡಿ ಉದ್ದ, 5 ಕೆಜಿ ತೂಕದ ದೈತ್ಯ ಹಲ್ಲಿ

Share
2 Min Read
SHARE

newsics.com/ನ್ಯೂಸಿಕ್ಸ್

ನಾಲ್ಕು ಅಡಿ ಉದ್ದ, ಬರೋಬ್ಬರಿ 5 ಕೆಜಿ ತೂಕ, ನೋಡಲು ದೈತ್ಯ ಹಲ್ಲಿಯಂತೆ ಕಾಣುವ ಈ ಕ್ರೂರ ಜೀವಿಯ ಹೆಸರೇ ‘ಅರ್ಜೆಂಟೈನ್ ಬ್ಲ್ಯಾಕ್ ಅಂಡ್ ವೈಟ್ ತೇಗು’.ಪ್ರಸ್ತುತ ಅಮೆರಿಕದ ವನ್ಯಜೀವಿ ಸಂರಕ್ಷಣಾ ಇಲಾಖೆಯ ನಿದ್ದೆಗೆಡಿಸಿರುವ ಈ ಹೆಮ್ಮಾರಿ ಜೀವಿಗಳ ಆಕ್ರಮಣದ ಬಗ್ಗೆ ಅಧಿಕಾರಿಗಳು ಜನರಿಗೆ ತೀವ್ರ ಎಚ್ಚರಿಕೆ ನೀಡಿದ್ದಾರೆ.

ಕೇವಲ ನೋಟದಲ್ಲಷ್ಟೇ ಅಲ್ಲದೆ, ಪ್ರಕೃತಿ ಮತ್ತು ಜೀವಸಂಕುಲಕ್ಕೆ ಭೀಕರ ಹಾನಿ ಉಂಟುಮಾಡುವ ಈ ಅಪಾಯಕಾರಿ ದೈತ್ಯ ಹಲ್ಲಿ ಎಲ್ಲೇ ಕಣ್ಣಿಗೆ ಬಿದ್ದರೂ ತಕ್ಷಣವೇ ವರದಿ ಮಾಡುವಂತೆ ಅಧಿಕಾರಿಗಳು ಸಾರ್ವಜನಿಕರಿಗೆ ಖಡಕ್ ಸೂಚನೆ ನೀಡಿದ್ದು, ಸದ್ಯ ಇದರ ಹಾವಳಿ ಜನರಲ್ಲಿ ತೀವ್ರ ಆತಂಕ ಸೃಷ್ಟಿಸಿದೆ!

 

ನಮ್ಮ ದೇಶದಲ್ಲಿ ಸಾಮಾನ್ಯವಾಗಿ ಕಂಡುಬರುವ ಉಡ ಅಥವಾ ಇಗುವಾನಾ ಜಾತಿಗೆ ಸೇರಿದ ದೈತ್ಯ ಹಲ್ಲಿಗಳಂತೆ ಕಾಣುವ ಈ ‘ತೇಗು’ ಜೀವಿಗಳು, ಪರಿಸರ ಪ್ರೇಮಿಗಳ ನಿದ್ದೆಗೆಡಿಸಿವೆ. ಇತರ ಅಪರೂಪದ ಪ್ರಾಣಿ-ಪಕ್ಷಿ ಸಂಕುಲವನ್ನು ಸಂಪೂರ್ಣವಾಗಿ ನಾಶಪಡಿಸುವ ಹಾಗೂ ಇಡೀ ಪರಿಸರ ವ್ಯವಸ್ಥೆಯ ಸಮತೋಲನವನ್ನೇ ಏರುಪೇರು ಮಾಡುವ ಭೀಕರ ಸಾಮರ್ಥ್ಯ ಈ ದೈತ್ಯ ಹಲ್ಲಿಗಳಿಗಿದೆ. ಈ ಜೀವಿಗಳ ಇದೇ ಅಪಾಯಕಾರಿ ಗುಣ ಇದೀಗ ವನ್ಯಜೀವಿ ಸಂರಕ್ಷಣಾ ಇಲಾಖೆಯ ತೀವ್ರ ಆತಂಕಕ್ಕೆ ಕಾರಣವಾಗಿದೆ.

ಮಾರುಕಟ್ಟೆಯಲ್ಲಿ ಈ ಅಪರೂಪದ ಜೀವಿಗಳಿಗೆ ಬೇಡಿಕೆ ಹೆಚ್ಚಾಗುತ್ತಿದ್ದಂತೆ, ಇವುಗಳನ್ನು ಅಕ್ರಮವಾಗಿ ಖರೀದಿಸಿ ತಳಿ ಅಭಿವೃದ್ಧಿ ಮಾಡುವ ಮಾಫಿಯಾಗಳು ಸಕ್ರಿಯವಾಗಿವೆ. ಆದರೆ, ಇವುಗಳನ್ನು ಆರಂಭದಲ್ಲಿ ಮನೆಯಲ್ಲಿ ಸಾಕಿದರೂ, ಅತ್ಯಂತ ವೇಗವಾಗಿ ತೂಕ ಹೆಚ್ಚಿಸಿಕೊಂಡು ದೈತ್ಯಾಕಾರವಾಗಿ ಬೆಳೆಯುವುದರಿಂದ ಕಂಗಾಲಾದ ಜನರು ಇವುಗಳನ್ನು ಮನೆಗಳಿಂದ ಹೊರಹಾಕಲು ಪ್ರಾರಂಭಿಸಿದ್ದಾರೆ. ಕಾಲಾನಂತರದಲ್ಲಿ ಜನರ ಈ ನಡೆ ದೊಡ್ಡದೊಂದು ಗಂಡಾಂತರವನ್ನೇ ಸೃಷ್ಟಿಸಿದೆ. ಪ್ರಸ್ತುತ ಕಾಡು ಸೇರಿರುವ ಈ ಜೀವಿಗಳು ತಮ್ಮ ಕಣ್ಣಿಗೆ ಕಾಣುವ ಪ್ರತಿಯೊಂದು ಪ್ರಾಣಿ-ಪಕ್ಷಿಗಳ ಮೊಟ್ಟೆಗಳನ್ನು ನುಂಗಿ ನೀರು ಕುಡಿಯುತ್ತಿದ್ದು, ಇದರಿಂದಾಗಿ ಹಲವು ಜೀವಿಗಳು ಭೂಮಿಯಿಂದ ಶಾಶ್ವತವಾಗಿ ನಿರ್ನಾಮವಾಗುವ ಭೀತಿ ಎದುರಾಗಿದೆ.

ಅಮೆರಿಕದ ಜಾರ್ಜಿಯಾದಲ್ಲಂತೂ ಈ ತೇಗು ಹಲ್ಲಿಗಳು ಅಲ್ಲಿನ ಸಂರಕ್ಷಿತ ವನ್ಯಜೀವಿಗಳ ಪಟ್ಟಿಯಲ್ಲಿರುವ ಗೋಫರ್ ಆಮೆಗಳು, ಕಾಡು ಕೋಳಿಗಳು ಹಾಗೂ ಮೊಸಳೆಗಳ ಮೊಟ್ಟೆಗಳನ್ನು ತಿಂದು ಮಾರಣಹೋಮ ನಡೆಸುತ್ತಿವೆ. ಇವುಗಳು ಅತಿ ವೇಗವಾಗಿ ಬೆಳೆಯುವುದರಿಂದ ಇವುಗಳನ್ನು ಬೇಟೆಯಾಡುವ ಇತರ ಕ್ರೂರ ಪ್ರಾಣಿಗಳೂ ಕಾಡಿನಲ್ಲಿ ಇಲ್ಲದಂತಾಗಿದ್ದು, ಈ ಬಿಕ್ಕಟ್ಟು ಮತ್ತಷ್ಟು ಉಲ್ಬಣಿಸಿದೆ.

https://www.newsics.com/2026/06/12/light-vehicles-allowed-to-ply-at-hulikal-ghat-from-today/

TAGGED:5-kg giant lizard has disturbed America's sleepA 4-foot-long
Share This Article
Facebook Twitter Copy Link Print
Previous Article ಹುಲಿಕಲ್ ಘಾಟ್‌ ನಲ್ಲಿ ಇಂದಿನಿಂದ ಲಘು ವಾಹನಗಳ ಸಂಚಾರಕ್ಕೆ ಅವಕಾಶ
Next Article 12 ವರ್ಷ ಪೂರೈಸಿದ ಮೋದಿ ಸರ್ಕಾರದ ವಿಶೇಷ ಹಾಡು ಬಿಡುಗಡೆ ಮಾಡಿದ ಬಿಜೆಪಿ ಸಂಸದ ಮನೋಜ್ ತಿವಾರಿ

Popular Posts

12 ವರ್ಷ ಪೂರೈಸಿದ ಮೋದಿ ಸರ್ಕಾರದ ವಿಶೇಷ ಹಾಡು ಬಿಡುಗಡೆ ಮಾಡಿದ ಬಿಜೆಪಿ ಸಂಸದ ಮನೋಜ್ ತಿವಾರಿ

1 Min Read

Giant Lizard ಅಮೆರಿಕದ ನಿದ್ದೆಗೆಡಿಸಿದ 4 ಅಡಿ ಉದ್ದ, 5 ಕೆಜಿ ತೂಕದ ದೈತ್ಯ ಹಲ್ಲಿ

2 Min Read

ಹುಲಿಕಲ್ ಘಾಟ್‌ ನಲ್ಲಿ ಇಂದಿನಿಂದ ಲಘು ವಾಹನಗಳ ಸಂಚಾರಕ್ಕೆ ಅವಕಾಶ

1 Min Read

ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿಯಾದ ಸಿಎಂ ಡಿಕೆ ಶಿವಕುಮಾರ್

3 Min Read

You Might Also Like

ಪ್ರಮುಖಆರೋಗ್ಯ

40 ವರ್ಷಕ್ಕಿಂತ ಮೊದಲೇ ಮುಟ್ಟು ನಿಂತ್ರೆ ಈ ಅಪಾಯ ಹೆಚ್ಚು

2 Min Read
ಕರ್ನಾಟಕದೇಶಪ್ರಮುಖ

CM Vijay to Kollur ಮೂಕಾಂಬಿಕೆಗೆ ಬೆಳ್ಳಿ ಖಡ್ಗ ಅರ್ಪಿಸಿದ ತಮಿಳುನಾಡು ಸಿಎಂ! ಅರ್ಚಕರಲ್ಲಿ ವಿಜಯ್ ಮಾಡಿದ ಆ ಒಂದು ಸ್ಪೆಷಲ್ ರಿಕ್ವೆಸ್ಟ್ ಏನು?

1 Min Read
ದೇಶಪ್ರಮುಖ

ವೃದ್ಧಾಪ್ಯಕ್ಕೆ ಬ್ರೇಕ್ ಹಾಕುವ ಪ್ರಯೋಗ ಆರಂಭ!

2 Min Read
ಕರ್ನಾಟಕಪ್ರಮುಖ

ಹಾಸ್ಟೇಲ್‌ನಲ್ಲಿ ಮಗುವಿಗೆ ಜನ್ಮಕೊಟ್ಟ 9ನೇ ತರಗತಿ ವಿದ್ಯಾರ್ಥಿನಿ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?