newsics.com
ಬೆಂಗಳೂರು: ರೇಣುಕಾಸ್ವಾಮಿ ಬರ್ಬರ ಕೊಲೆ ಪ್ರಕರಣದ ಬಳಿಕ ಸ್ಟಾರ್ ನಟ ದರ್ಶನ್ ಅವರಿಂದ ಅಂತರ ಕಾಯ್ದುಕೊಂಡಿದ್ದ ಸ್ಯಾಂಡಲ್‌ವುಡ್‌ನ ಹಲವರಲ್ಲಿ ಇದೀಗ ಒಬ್ಬೊಬ್ಬರೇ ದರ್ಶನ್ ಭೇಟಿ ಮಾಡುತ್ತಿರುವುದು ಕುತೂಹಲ ಹುಟ್ಟಿಸಿದೆ.
50ಕ್ಕಿಂತ ಹೆಚ್ಚು ಸಿನಿಮಾ ಮಾಡಿರುವ ನಟ ದರ್ಶನ್, ಕೋಟ್ಯಂತರ ಅಭಿಮಾನಿಗಳ ಮೆಚ್ಚಿನ ನಟ. ಆದರೆ, ಜೈಲಿನಲ್ಲಿ ಬಂಧಿಯಾಗಿರುವ ಅವರನ್ನು ನೋಡಲು ಹೆಂಡತಿ ವಿಜಯಲಕ್ಷ್ಮಿ ಹಾಗೂ ಪುತ್ರ ವಿನೀಶ್ ಹೊರತಪಡಿಸಿದರೆ ಬೇರೆ ಯಾರೂ ಹೋಗಿಲ್ಲ ಎನ್ನಲಾಗುತ್ತಿತ್ತು. ಈ ಮಾತು ಚಾಲ್ತಿಯಲ್ಲಿ ಇರುವಾಗಲೇ ನಟ ದರ್ಶನ್ ಅವರನ್ನು ನೋಡಲು ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ನೀಡಿ ನಟ ವಿನೋದ್ ಪ್ರಭಾಕರ್ ಅವರು ಎಲ್ಲರಿಗೂ ಅಚ್ಚರಿ ಮೂಡಿಸಿದ್ದರು.
ಸ್ಯಾಂಡಲ್‌ವುಡ್ ಲವ್ಲಿ ಸ್ಟಾರ್ ಪ್ರೇಮ್ ಸೇರಿದಂತೆ ಇದೀಗ ನಟ ದರ್ಶನ್ ನೋಡಲು ಪರಪ್ಪನ ಅಗ್ರಹಾರಕ್ಕೆ ನಟ-ನಿರ್ದೇಶಕ ಜೋಗಿ ಪ್ರೇಮ್, ಹಾಗೂ ರಕ್ಷಿತಾ ಪ್ರೇಮ್ ಹೋಗಿ ಬಂದಿದ್ದಾರೆ. ಇದು ಶನಿವಾರದ ಬೆಳವಣಿಗೆ.
ನಟಿ ರಕ್ಷಿತಾ ಅವರು ದರ್ಶನ್ ಆಪ್ತ ಸ್ನೇಹಿತೆಯಾಗಿದ್ದು, ಸ್ವತಃ ದರ್ಶನ್ ಅವರೇ ಬಂದು ಭೇಟಿಯಾಗುವಂತೆ ಹೇಳಿದ್ದರು ಎನ್ನಲಾಗಿದೆ. ಸ್ನೇಹಿತನ ನೋಡಲು ಹೊರಟ ರಕ್ಷಿತಾ ಪ್ರೇಮ್ ಹಾಗೂ ಪ್ರೇಮ್ ಅವರು ಶನಿವಾರ ಸಾಯಂಕಾಲ 4:30ಕ್ಕೆ ಜೈಲಿಗೆ ಭೇಟಿ ನೀಡಿ, ನಟ ದರ್ಶನ್ ಅವರನ್ನು ಮಾತನಾಡಿಸಿಕೊಂಡು ಬಂದಿದ್ದಾರೆ.
ನಟ ದರ್ಶನ್ ಭೇಟಿ ಬಳಿಕ ರಕ್ಷಿತಾ ಅವರು ಕಣ್ಣೀರು ಹಾಕಿದ್ದಾರೆ. ಈ ಬಗ್ಗೆ ರಕ್ಷಿತಾ ‘ಹದಿನೈದು ಇಪ್ಪತ್ತು ದಿನದಿಂದ ಆಗಿರುವುದು ದುರದೃಷ್ಟಕರ ಬೆಳವಣಿಗೆ. ನಮಗೆ ಈ ಪ್ರಕರಣದ ಬಗ್ಗೆ ಬೇಜಾರು ಇದೆ’ ಎಂದಷ್ಟೇ ಹೇಳಿ ಬೇಸರದಲ್ಲಿ ರಕ್ಷಿತಾ ಹೊರಟಿದ್ದಾರೆ.
ಪ್ರಕರಣ ನ್ಯಾಯಾಲಯದಲ್ಲಿದೆಯೆಂದು ಮಾತು ಆರಂಭಿಸಿದ ನಟ ಪ್ರೇಮ್ ‘ ನಾವು ಈ ಸಂದರ್ಭದಲ್ಲಿ ಪ್ರಕರಣದ ಬಗ್ಗೆ ಮಾತನಾಡುವುದು ಸರಿಯಲ್ಲ. ಜೈಲಿನಲ್ಲಿ ದರ್ಶನ್ ಜತೆ ನಡೆದ ಮಾತುಕತೆ ಬಗ್ಗೆ ನಾನು ಯಾವುದೇ ಮಾಹಿತಿ ನೀಡಲಾರೆ ಎಂದಿದ್ದಾರೆ.
ಒಂದು ವಾರದಲ್ಲಿ ಮೂವರ ಭೇಟಿಗೆ ಮಾತ್ರ ಅವಕಾಶ ಇರುತ್ತದೆ. ಈಗಾಗಲೇ ಪತ್ನಿ ವಿಜಯಲಕ್ಷ್ಮಿ ಹಾಗೂ ಮಗ ಭೇಟಿ ಮಾಡಿದ್ದರು.
ವಿನೋದ್ ಪ್ರಭಾಕರ್ ದರ್ಶನ್ ಭೇಟಿ ಮಾಡಿದ್ದರು. ಪ್ರೇಮ್-ರಕ್ಷಿತಾ ಕೂಡ ಭೇಟಿಯಾಗಿದ್ದರು.
ಅಚ್ಚರಿ ಬೆಳವಣಿಗೆ ಎಂಬಂತೆ ಪರಪ್ಪನ ಅಗ್ರಹಾರ ಜೈಲಿನ ಬಳಿ, ನಟ ದರ್ಶನ್ ಅವರನ್ನು ನೋಡಲು ಚಿತ್ರರಂಗದಿಂದ ಒಬ್ಬೊಬ್ಬರಾಗಿ ಬರುತ್ತಿದ್ದಾರೆ. ಇಷ್ಟು ದಿನ ಮೌನವಾಗಿದ್ದ ಚಿತ್ರೋದ್ಯಮದ ಗಣ್ಯರು, ನಟ-ನಟಿಯರು, ಪ್ರಮುಖರು ನಿಧಾನವಾಗಿ ಮಾತನಾಡಲಾರಂಭಿಸಿದ್ದಾರೆ.
ದರ್ಶನ್ ಫ್ಯಾನ್ಸ್‌ಗಳಿಂದ ಬ್ಯಾಡ್ ಕಮೆಂಟ್ಸ್ ಟಾರ್ಚರ್; ಅಳಲು ತೋಡಿಕೊಂಡ ಸೋನು ಗೌಡ
ಶಾಂತಂ ಪಾಪಂ ಟೆಲಿ ಸರಣಿಯಲ್ಲಿ ನಟ ದರ್ಶನ್ ಕಥೆ! ಏನಿದು ಡೇರ್ ಡೆವಿಲ್ ದೇವದಾಸ್ ಕಹಾನಿ?
ಹಾಟ್ ಲುಕ್‌ನಲ್ಲಿ ಪಡ್ಡೆ ಹುಡುಗರ ನಿದ್ದೆ ಕದ್ದ ‘ಟೋಬಿ’ ಚೆಲುವೆ ಚೈತ್ರ ಆಚಾರ್