newsics.com
ನವದೆಹಲಿ: ಶುಕ್ರವಾರ ಸುರಿದ ಭಾರೀ ಮಳೆಯಿಂದಾಗಿ ಉತ್ತರ ದೆಹಲಿಯ ಸಮಯಪುರ ಬದ್ಲಿ ಪ್ರದೇಶದಲ್ಲಿ ಶನಿವಾರದಂದು ಜಲಾವೃತವಾದ ಅಂಡರ್ಪಾಸ್ನಲ್ಲಿ ಮುಳುಗಿ ಇಬ್ಬರು ಬಾಲಕರು ಸಾವನ್ನಪ್ಪಿದ್ದು, ಇದರೊಂದಿಗೆ ಸಾವಿನ ಸಂಖ್ಯೆ 11ಕ್ಕೆ ಏರಿದೆ.
ಶನಿವಾರ ಮಧ್ಯಾಹ್ನ 2.25ರ ಸುಮಾರಿಗೆ ಸಿರಸ್ಪುರ ಅಂಡರ್ಪಾಸ್ ಬಳಿ 12 ವರ್ಷದ ಬಾಲಕ ನೀರಿನಲ್ಲಿ ಮುಳುಗಿದ ಬಗ್ಗೆ ತಮಗೆ ಕರೆ ಬಂದಿತ್ತು. ಕೂಡಲೇ ಪೊಲೀಸರು ಘಟನಾ ಸ್ಥಳಕ್ಕೆ ಧಾವಿಸಿದ್ದರು. ಅಗ್ನಿಶಾಮಕ ದಳವು ತನ್ನ ರಕ್ಷಣಾ ವಾಹನಗಳನ್ನು ರವಾನಿಸಿತು ಎಂದು ಉಪ ಪೊಲೀಸ್ ಆಯುಕ್ತ (ಹೊರ-ಉತ್ತರ) ಆರ್ಕೆ ಸಿಂಗ್ ತಿಳಿಸಿದ್ದಾರೆ.
ಮೆಟ್ರೋ ಬಳಿಯ ಅಂಡರ್ಪಾಸ್ನಲ್ಲಿ ಸುಮಾರು 3 ಅಡಿಗಿಂತಲೂ ಹೆಚ್ಚು ನೀರಿನಿಂದ ತುಂಬಿರುವುದು ಕಂಡುಬಂದಿತ್ತು. ಅಗ್ನಿಶಾಮಕ ದಳವು ಶೋಧ ಕಾರ್ಯಾಚರಣೆ ನಡೆಸಿ ಇಬ್ಬರು ಬಾಲಕರ ಶವವನ್ನು ಹೊರತೆಗೆದಿದೆ ಎಂದು ಡಿಸಿಪಿ ತಿಳಿಸಿದ್ದಾರೆ.
ಇಬ್ಬರೂ ಬಾಲಕರನ್ನು ತಕ್ಷಣವೇ ಬಾಬು ಜಗಜೀವನ್ ರಾಮ್ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಪ್ರಯೋಜನವಾಗಲಿಲ್ಲ.
ಬಾಲಕರು ಈಜಾಡುವ ಸಲುವಾಗಿ ನೀರಿಗೆ ಇಳಿದಿದ್ದಾಗ ಈ ದುರ್ಘಟನೆ ಸಂಭವಿಸಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಆಗ್ನೇಯ ದೆಹಲಿಯ ಓಖ್ಲಾ ಪ್ರದೇಶದಲ್ಲಿ ಶುಕ್ರವಾರ ಸ್ಕೂಟರ್ನಲ್ಲಿ ಹೋಗುತ್ತಿದ್ದ 60 ವರ್ಷದ ವ್ಯಕ್ತಿಯೊಬ್ಬರು ನೀರಿನಿಂದ ತುಂಬಿರುವ ಅಂಡರ್ಪಾಸ್ನಲ್ಲಿ ಬಿದ್ದು ಪ್ರಾಣ ಕಳೆದುಕೊಂಡಿದ್ದಾರೆ.
ಉತ್ತರಾಖಂಡ್ನಲ್ಲೂ ಮಳೆ ಆರ್ಭಟ ಮುಂದುವರಿದಿದ್ದು, ಹರಿದ್ವಾರದಲ್ಲಿ ನೂರಾರು ಕಾರುಗಳು ಪ್ರವಾಹದಲ್ಲಿ ಕೊಚ್ಚಿ ಹೋಗಿವೆ.
ಹೃದಯದ ಭಾಗಗಳಿಗೆ ಹುಡುಗಿಯರ ಹೆಸರು! ಪರೀಕ್ಷೆಯಲ್ಲಿ ವಿದ್ಯಾರ್ಥಿಯ ಉತ್ತರ ವೈರಲ್
T20 World cup 2024 ದೆಹಲಿ ಏರ್ಪೋರ್ಟ್ನಲ್ಲಿ ಅಂತಿಮ ಪಂದ್ಯ ವೀಕ್ಷಿಸಿದ ಸಿದ್ದರಾಮಯ್ಯ, ವಿಡಿಯೋ ವೈರಲ್
Cow Dung Soup! ಈ ದೇಶದಲ್ಲಿ ಹಸುವಿನ ಸಗಣಿಯಿಂದ ತಯಾರಾಗುತ್ತೆ ವಿಶೇಷ್ ಸೂಪ್
ದರ್ಶನ್ ಭೇಟಿಗೆ ಮುಂದಾದ ನಟ, ನಟಿಯರು: ಬದಲಾಯ್ತಾ ಸ್ಯಾಂಡಲ್ವುಡ್ ಮಂದಿಯ ಧೋರಣೆ?