newsics.com/ನ್ಯೂಸಿಕ್ಸ್
ಗಂಡನಿಗೆ ಅಪಘಾತವಾದ ವಿಚಾರವನ್ನೇ ದಾಳವಾಗಿಸಿಕೊಂಡ ಪತ್ನಿ, ಪ್ರಿಯಕರನ ಜೊತೆ ಸೇರಿ ಗ್ಲುಕೋಸ್ ಬಾಟಲ್ನಲ್ಲಿ ವಿಷ ಹಾಕಿ ಕೊಲೆಗೈದಿರೋ ಘಟನೆ ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಘೋಡಗೇರಿ ಗ್ರಾಮದಲ್ಲಿ
ಘೋಡಗೇರಿ ಗ್ರಾಮದ ಮಾಜಿ ಸೈನಿಕ ಸಂದೀಪ್ ಮಂಜರಗಿ (45) ಕೊಲೆಯಾದ ದುರ್ದೈವಿ ಎನ್ನಲಾಗ್ತಿದೆ. ಮೂರು ತಿಂಗಳ ಬಳಿಕ ಹೊತ್ತಿದ್ದ ಶವವನ್ನ ಅಧಿಕಾರಿಗಳು ಹೊರತೆಗೆದಿದ್ದು, ಹೂತು ಹೋದ ರಹಸ್ಯವನ್ನ ಯಮಕನಮರಡಿ ಪೊಲೀಸರು ಬಯಲು ಮಾಡಿದ್ದಾರೆ.
ಹುಕ್ಕೇರಿಯಲ್ಲಿ ನಡೆದ ಲಕ್ಷ್ಮೀ ದೇವಿ ಜಾತ್ರೆ ಮುಗಿಸಿಕೊಂಡು ವಾಪಸ್ ಬರುವಾಗ ಸಂದೀಪ್ ಮಂಜರಗಿ ರಸ್ತೆ ಅಪಘಾತಕ್ಕೀಡಾಗಿದ್ದಾರೆ. ಆ ನಂತರ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ಸಂದೀಪ್ ಅವರನ್ನು ದಾಖಲು ಮಾಡಲಾಗಿತ್ತು. ಗಂಡನಿಗಾದ ಅಪಘಾತವನ್ನೇ ದಾಳವಾಗಿಸಿಕೊಂಡ ಪತ್ನಿ ಸುಮಾ ಪ್ರಿಯಕರನೊಂದಿಗೆ ಸೇರಿ ಕೊಲೆಗೆ ಸಂಚು ಮಾಡಿದ್ದಳು ಎನ್ನಲಾಗ್ತಿದೆ.
ಜೊತೆ ಅಕ್ರಮ ಸಂಬಂಧ ಹೊಂದಿದ್ದ ಆರೋಪ ಕೂಡ ಮಹಿಳೆ ಮೇಲಿದ್ದು, ಅನೈತಿಕ ಸಂಬಂಧ ಹೊರಬರಬಾರದು, ಗಂಡ ಸತ್ತರೆ ವಿಮೆ ಹಣ ಬರುತ್ತೆ ಅಂತ ಸ್ಕೆಚ್ ಹಾಕಿ ಪತ್ನಿ ಸುಮಾ ಹಾಗೂ ಪ್ರಿಯಕರ ಪುಂಡಲೀಕ ಎಂಬಾತನೇ ಈ ಕೃತ್ಯವೆಸಗಿದ್ದಾರೆ ಎಂದು ಕುಟುಂಬಸ್ಥರು ಆರೋಪ ಮಾಡಿದ್ದಾರೆ.
ಮೂರು ತಿಂಗಳ ಹಿಂದೆ ಘಟನೆ ನಡೆದಿದ್ದು, ಸಂದೀಪ್ ಸಾವಿನ ಬಗ್ಗೆ ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ ಹಿನ್ನೆಲೆ ಇದೀಗ ಹೂತಿಟ್ಟ ಶವ ಹೊರಕ್ಕೆ ತೆಗೆದು ಪೊಲೀಸರು ತನಿಖೆ ನಡೆಸುತ್ತಿದ್ದು, ಶವದಲ್ಲಿನ ಅವಶೇಷಗಳನ್ನ ಮತ್ತೊಮ್ಮೆ ಎಫ್ಎಸ್ಎಲ್ಗೆ ರವಾನೆ ಮಾಡಲಾಗಿದೆ.
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಂಡನಿಗೆ ಐನಾತಿ ಮಹಿಳೆ ಚಟ್ಟ ಕಟ್ಟಿದಳು ಎನ್ನಲಾಗ್ತಿದೆ. ಆತನನ್ನ ಕೊಲೆ ಮಾಡಲು ಗ್ಲೂಕೋಸ್ ಬಾಟಲ್ನಲ್ಲಿ ವಿಷ ಹಾಕಿ ಪತ್ನಿ ಹಾಗೂ ಆತನ ಪ್ರಿಯಕರನೇ ಕೊಲೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಕೋಟಿ, ಕೋಟಿ ವಿಮೆ ಹಣದ ಆಸೆ!
ಕಳೆದ 3 ವರ್ಷಗಳಿಂದ ಅದೇ ಗ್ರಾಮದ ಪುಂಡಲಿಕ ಎಂಬಾತನ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಆರೋಪ ಕೂಡ ಮಹಿಳೆ ಮೇಲಿದ್ದು, ಅನೈತಿಕ ಸಂಬಂಧ ಹೊರಬರಬಾರದು, ಗಂಡ ಸತ್ತರೆ ವಿಮೆ ಹಣ ಬರುತ್ತೆ ಅಂತ ಸ್ಕೆಚ್ ಹಾಕಿ ಪತ್ನಿ ಸುಮಾ ಹಾಗೂ ಪ್ರಿಯಕರ ಪುಂಡಲೀಕ ಎಂಬಾತನೇ ಈ ಕೃತ್ಯವೆಸಗಿದ್ದಾರೆ ಎಂದು ಕುಟುಂಬಸ್ಥರು ಆರೋಪ ಮಾಡಿದ್ದಾರೆ.
ಗಂಡನಿಗೆ ಚಟ್ಟ ಕಟ್ಟಿದ ಐನಾತಿ!
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಂಡನಿಗೆ ಐನಾತಿ ಮಹಿಳೆ ಚಟ್ಟ ಕಟ್ಟಿದಳು ಎನ್ನಲಾಗ್ತಿದೆ. ಆತನನ್ನ ಕೊಲೆ ಮಾಡಲು ಗ್ಲೂಕೋಸ್ ಬಾಟಲ್ನಲ್ಲಿ ವಿಷ ಹಾಕಿ ಪತ್ನಿ ಹಾಗೂ ಆತನ ಪ್ರಿಯಕರನೇ ಕೊಲೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಮೂರು ತಿಂಗಳ ಹಿಂದೆ ಘಟನೆ ನಡೆದಿದ್ದು, ಸಂದೀಪ್ ಸಾವಿನ ಬಗ್ಗೆ ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ ಹಿನ್ನೆಲೆ ಇದೀಗ ಹೂತಿಟ್ಟ ಶವ ಹೊರಕ್ಕೆ ತೆಗೆದು ಪೊಲೀಸರು ತನಿಖೆ ನಡೆಸುತ್ತಿದ್ದು, ಶವದಲ್ಲಿನ ಅವಶೇಷಗಳನ್ನ ಮತ್ತೊಮ್ಮೆ ಎಫ್ಎಸ್ಎಲ್ಗೆ ರವಾನೆ ಮಾಡಲಾಗಿದೆ.
ಈಗಾಗಲೇ ಪತ್ನಿ, ಪ್ರಿಯಕರ ಇಬ್ಬರನ್ನ ವಶಕ್ಕೆ ಪಡೆದ ಪೊಲೀಸರು ತೀವ್ರ ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆ ಪತ್ನಿ ಹಾಗೂ ಪ್ರಿಯಕರ ಕೊಲೆ ರಹಸ್ಯ ಬಿಚ್ಚಿಟ್ಟಿದ್ದಾರೆ. ಎಫ್ಎಸ್ಎಲ್ ವರದಿ ಬಳಿಕ ಕೊಲೆಯ ರಹಸ್ಯ ಬಯಲಾಗಲಿದೆ. ಈ ಸಂಬಂಧ ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Ricky Rai ಮತ್ತೆ ಬೆಂಗಳೂರಲ್ಲಿ ಮಾಜಿ ಡಾನ್ ಪುತ್ರ ರಿಕ್ಕಿ ರೈ ಲ್ಯಾಂಬೋರ್ಗಿನಿ ಪುಂಡಾಟ