Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ರೈಲಿನ ಎಸಿ, ಸ್ಲೀಪರ್ ಕೋಚ್ನಲ್ಲಿ ಮಲುಗುವ ಸಮಯದಲ್ಲಿ ಬದಲಾವಣೆ
ಕರ್ನಾಟಕ

ರೈಲಿನ ಎಸಿ, ಸ್ಲೀಪರ್ ಕೋಚ್ನಲ್ಲಿ ಮಲುಗುವ ಸಮಯದಲ್ಲಿ ಬದಲಾವಣೆ

Share
2 Min Read
SHARE

newsics.com

ನವದೆಹಲಿ :ಭಾರತೀಯ ರೈಲ್ವೇಯು ದೇಶದಲ್ಲಿ ಪ್ರತಿ ದಿನ ಹಲವಾರು ಲಕ್ಷ ಪ್ರಯಾಣಿಕರನ್ನು ಅವರ ಗಮ್ಯಸ್ಥಾನಗಳಿಗೆ ಸಾಗಿಸುತ್ತದೆ.   ಭಾರತೀಯ ರೈಲ್ವೇ ಇತ್ತೀಚೆಗೆ ಮತ್ತೊಂದು ಮಹತ್ವದ ನಿರ್ಧಾರ ಕೈಗೊಂಡಿದೆ.

ರೈಲುಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರ ನಿದ್ರೆಯ ಸಮಯವನ್ನು ಬದಲಾಯಿಸಲಾಗಿದೆ. ಎಸಿ ಮತ್ತು ಸ್ಲೀಪರ್ ಕೋಚ್‌ಗಳಲ್ಲಿ ಮಧ್ಯಮ ಮತ್ತು ಸೈಡ್ ಲೋವರ್ ಬರ್ತ್‌ಗಳಲ್ಲಿ ಹೆಚ್ಚು ಹೊತ್ತು ಮಲಗಬಾರದು ಎಂದು ತಿಳಿದುಬಂದಿದೆ. ಈ ನಿರ್ಧಾರದಿಂದ ಇತರೆ ಬರ್ತ್‌ಗಳ ಪ್ರಯಾಣಿಕರಿಗೆ ನೆಮ್ಮದಿ ಸಿಗಲಿದೆ.

ರೈಲಿನಲ್ಲಿ ಒಂದು ಬದಿಯಲ್ಲಿ ಮೇಲಿನ, ಕೆಳಗಿನ ಮತ್ತು ಮಧ್ಯ ಎಂಬ ಮೂರು ಬರ್ತ್‌ಗಳಿವೆ. ರೈಲ್ವೆ ಇಲಾಖೆಯು ಎಸಿ ಮತ್ತು ಸ್ಲೀಪರ್ ಕೋಚ್‌ಗಳಲ್ಲಿ ಪ್ರಯಾಣಿಕರಿಗೆ ಮಧ್ಯಮ ಬರ್ತ್ ಅನ್ನು ನಿಗದಿಪಡಿಸುತ್ತದೆ. ಪ್ರಯಾಣಿಕರು ರಾತ್ರಿಯ ಸಮಯದಲ್ಲಿ ಮಲಗಲು ಈ ಮಧ್ಯದ ಬರ್ತ್ ಅನ್ನು ಬಳಸಬಹುದು. ಆದರೆ ಅದನ್ನು ತೆರೆದರೆ ಲೋಯರ್ ಬರ್ತ್ ಪ್ರಯಾಣಿಕರಿಗೆ ಕುಳಿತುಕೊಳ್ಳಲು ಅವಕಾಶವೇ ಇರುವುದಿಲ್ಲ.

ಮಧ್ಯಮ ಬರ್ತ್ನ ಪ್ರಯಾಣಿಕರು ನಿಗದಿತ ಸಮಯಕ್ಕಿಂತ ಹೆಚ್ಚು ಸಮಯ ನಿದ್ರಿಸುತ್ತಾರೆ. ಇದರಿಂದ ಕೆಳ ಮತ್ತು ಮೇಲಿನ ಬರ್ತ್ ಪ್ರಯಾಣಿಕರು ಕುಳಿತುಕೊಳ್ಳಲು ಅನಾನುಕೂಲವಾಗುತ್ತದೆ. ಈ ಕುರಿತು ಪ್ರಯಾಣಿಕರಿಂದ ಪದೇ ಪದೇ ದೂರುಗಳು ಬರುತ್ತಿರುವ ಹಿನ್ನೆಲೆಯಲ್ಲಿ ರೈಲ್ವೆ ಇಲಾಖೆ ಇತ್ತೀಚೆಗೆ ನಿರ್ಧಾರ ಕೈಗೊಂಡಿದೆ. ಮಧ್ಯದ ಬರ್ತ್ ಪ್ರಯಾಣಿಕರ ನಿದ್ರೆಯ ಸಮಯವನ್ನು ಕಡಿತಗೊಳಿಸಿದೆ. ಈ ನಿಟ್ಟಿನಲ್ಲಿ ‘ಇಂಡಿಯನ್ ರೈಲ್ವೇಸ್ ಕಮರ್ಷಿಯಲ್ ಮ್ಯಾನ್ಯುಯಲ್’ ನ ಮೊದಲ ಸಂಪುಟದ ಪ್ಯಾರಾ 652 ಅನ್ನು ತಿದ್ದುಪಡಿ ಮಾಡಲಾಗಿದೆ

ರೈಲ್ವೆ ಇಲಾಖೆಯ ಇತ್ತೀಚಿನ ತಿದ್ದುಪಡಿಗಳ ಪ್ರಕಾರ, ಸ್ಲೀಪರ್ ಮತ್ತು ಎಸಿ ಕೋಚ್‌ಗಳಲ್ಲಿ ಮಧ್ಯದ ಬರ್ತ್ ಅನ್ನು ನಿಗದಿಪಡಿಸಿದ ಪ್ರಯಾಣಿಕರು 8 ಗಂಟೆಗಳ ಕಾಲ ಮಾತ್ರ ಮಲಗಬೇಕು. ಮೊದಲು ಈ ಸಮಯ 9 ಗಂಟೆಗಳಾಗಿತ್ತು. ರಾತ್ರಿ 9 ರಿಂದ ಬೆಳಿಗ್ಗೆ 6 ರವರೆಗೆ ಮಲಗಲು ಅವಕಾಶವಿತ್ತಯ. ಈಗ ಮಧ್ಯದ ಬರ್ತ್ ಅನ್ನು ರಾತ್ರಿ 10 ಗಂಟೆಯ ನಂತರ ಮಾತ್ರ ತೆರೆಯಬೇಕು.

ಸೈಡ್ ಲೋವರ್ ಬರ್ತ್ ನಿಯಮಗಳಲ್ಲೂ ರೈಲ್ವೆ ಇಲಾಖೆ ಬದಲಾವಣೆ ಮಾಡಿದೆ. ಸೈಡ್ ಮೇಲಿನ ಬರ್ತ್ ಪ್ರಯಾಣಿಕರು ಹಗಲಿನ ಸಮಯದಲ್ಲಿ ಕೆಳಗಿನ ಬರ್ತ್‌ನಲ್ಲಿ ಕುಳಿತುಕೊಳ್ಳಬಹುದು. ಈ ನಿಯಮ RAC ಟಿಕೆಟ್ ಪ್ರಯಾಣಿಕರಿಗೂ ಅನ್ವಯಿಸುತ್ತದೆ. ಅದೇ ರೀತಿ, ಸೈಡ್ ಅಪ್ಪರ್ ಬರ್ತ್ ಪ್ರಯಾಣಿಕರಿಗೆ ರಾತ್ರಿ 10 ಮೇಲೆ ಬೆಳಿಗ್ಗೆ 6 ರವರೆಗೆ ಕುಳಿತುಕೊಳ್ಳಲು ಅವಕಾಶ ಇರುವುದಿಲ್ಲ

Share This Article
Facebook Twitter Copy Link Print
Previous Article ಭಾರಿ ಮಳೆ ಹಿನ್ನೆಲೆ ದಕ್ಷಿಣ ಕನ್ನಡಕ್ಕೆ ರೆಡ್ ಅಲರ್ಟ್ ! ನಾಳೆಯೂ ಶಾಲೆಗಳಿಗೆ ರಜೆ ಘೋಷಣೆ
Next Article ಹೊಸೂರಿನಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: ತಮಿಳುನಾಡು ಸಿಎಂ ಸ್ಟಾಲಿನ್ ಘೋಷಣೆ

Popular Posts

ಮ್ಯಾಗಿಯಲ್ಲಿ ಕೀಟ ಪತ್ತೆ ಪ್ರಕರಣ : FSSAI ನೋಟಿಸ್, ಪಾತಾಳಕ್ಕೆ ಕುಸಿದ Nestle ಕಂಪೆನಿ ಷೇರು

1 Min Read

40 ಕಿಮೀ ವೇಗದ ಬಿರುಗಾಳಿಯೊಂದಿಗೆ ಮುಂದಿನ 10 ದಿನಗಳವರೆಗೆ ಭಾರೀ ಮಳೆಯ ಎಚ್ಚರಿಕೆ

1 Min Read

ಹೊರಟ್ಟಿ ಗ್ರಾಮದಲ್ಲಿ 40 ವಿದ್ಯಾರ್ಥಿಗಳಲ್ಲಿ ಜ್ವರ: ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲು 

1 Min Read

ಕೋಟಿ ವಿಮೆ ಹಣಕ್ಕಾಗಿ ಗಂಡನಿಗೆ ಚಟ್ಟ ಕಟ್ಟಿದ ಐನಾತಿ!

2 Min Read

You Might Also Like

ಕರ್ನಾಟಕಪ್ರಮುಖ

Ricky Rai ಮತ್ತೆ ಬೆಂಗಳೂರಲ್ಲಿ ಮಾಜಿ ಡಾನ್ ಪುತ್ರ ರಿಕ್ಕಿ ರೈ ಲ್ಯಾಂಬೋರ್ಗಿನಿ ಪುಂಡಾಟ

1 Min Read
ಕರ್ನಾಟಕಪ್ರಮುಖ

ಕೊಟ್ಟ ಸಾಲ ವಾಪಾಸ್ ಬಾರದೇ ಕಾಲೇಜು ಶುಲ್ಕ ಕಟ್ಟಲಾಗದೇ ಮನನೊಂದ ವಿದ್ಯಾರ್ಥಿನಿ ಆತ್ಮಹತ್ಯೆ

1 Min Read
ಕರ್ನಾಟಕಪ್ರಮುಖ

Dharmasthala Case ಎಸ್ಐಟಿ ರಚನೆಯಾದಾಗ ವೀರೇಂದ್ರ ಹೆಗ್ಗಡೆ ಜೈಲಿಗೆ ಹೋಗ್ತಾರೆಂದು ಬುರುಡೆ ಗ್ಯಾಂಗ್ ಸಂಭ್ರಮಿಸಿತ್ತು: ಚಿನ್ನಯ್ಯ

1 Min Read
ಕರ್ನಾಟಕಪ್ರಮುಖ

ಧರ್ಮದ ಕಾರಣಕ್ಕೆ ಜಾಬ್ ರಿಜೆಕ್ಟ್: ಸೋಷಿಯಲ್ ಮೀಡಿಯಾದಲ್ಲಿ ಭಯಂಕರ ಚರ್ಚೆ!

1 Min Read

Social Networks

Facebook-f Instagram Twitter
Welcome Back!

Sign in to your account

Lost your password?