newsics.com / ನ್ಯೂಸಿಕ್ಸ್
ಬೆಂಗಳೂರು: ವಿಧಾನಸೌಧದ ಸಿಬ್ಬಂದಿ ಸರಿಯಾಗಿ ಹತ್ತು ಗಂಟೆಗೆ ಕಚೇರಿಗೆ ಬರಬೇಕು, ಸಮಯ ಪಾಲನೆ ಮಾಡಲು ಸಿಎಂ ಡಿಕೆ ಶಿವಕುಮಾರ್ ಖಡಕ್ ಸೂಚನೆ ನೀಡಿದ್ದರು. ಆದರೆ ಸಿಎಂ ಡಿಕೆ ಶಿವಕುಮಾರ್ ಆದೇಶಕ್ಕೆ ಸಿಬ್ಬಂದಿ ಡೋಂಟ್ ಕೇರ್ ಎಂದಿದ್ದಾರೆ.
ಬೆಳಗ್ಗೆ 10 ಒಳಗೆ ಕೆಲಸಕ್ಕೆ ಹಾಜರಾಗುವಂತೆ ಸಿಎಂ ಸೂಚನೆ ನೀಡಿದ್ದ ಹಿನ್ನೆಲೆಯಲ್ಲಿ, ಈ ಕುರಿತು ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಆದೇಶ ಹೊರಡಿಸಿದ್ದರು. ಕಡ್ಡಾಯವಾಗಿ 10ಯೊಳಗೆ ಹಾಜರಿರುವಂತೆ ಸಿಎಸ್ ಆದೇಶ ಮಾಡಿದ್ದರು. ವಿಧಾನಸೌಧದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಆದೇಶ ಪಾಲನೆ ಮಾಡುವಂತೆ ಸೂಚನೆ ನೀಡಲಾಗಿತ್ತು.
ಪಾಲನೆ ಆಗ್ತಿದ್ಯಾ?
ಸಿಎಂ ಡಿಕೆ ಶಿವಕುಮಾರ್ ಸೂಚನೆ ಕೊಟ್ಟರೂ, ಅಧಿಕೃತವಾಗಿ ಈ ಬಗ್ಗೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಆದೇಶ ಮಾಡಿದ್ದರೂ, ಸಿಬ್ಬಂದಿಗಳು ಹಾಗೂ ಅಧಿಕಾರಿಗಳು ಸಮಯ ಪಾಲನೆ ಮಾಡುತ್ತಿಲ್ಲ.
ವಿಧಾನಸೌಧದ ಸಿಬ್ಬಂದಿಗಳ ಸಮಯಪಾಲನೆ ಹೇಳೋರಿಲ್ಲ, ಕೇಳೋರಿಲ್ಲ ಎಂಬಂತಾಗಿದೆ. ಗಂಟೆ 11 ಆದ್ರೂ ಒಬ್ಬೊಬ್ಬರಾಗಿಯೇ ಸಿಬ್ಬಂದಿ ಆಗಮಿಸುತ್ತಿರುವ ದೃಶ್ಯಗಳು ಸಾಮಾನ್ಯವಾಗಿವೆ. ಸಿಎಂ ಆದೇಶದಲ್ಲಿ ಉಲ್ಲೇಖ ಮಾಡಿದಂತೆ ಹತ್ತು ಗಂಟೆಗೆ ವಿಧಾನಸೌಧಕ್ಕೆ ಆಗಮಿಸಿದ ಸಿಬ್ಬಂದಿ ಸಂಖ್ಯೆ ತುಂಬಾ ವಿರಳ ಎಂದು ಹೇಳಬಹುದು.
ಸದ್ಯ ವಿಧಾನಸೌಧದ ಸಿಬ್ಬಂದಿಗಳಿಗೆ ಬಯೊಮೆಟ್ರಿಕ್ ವ್ಯವಸ್ಥೆ ಇಲ್ಲ. ಕರ್ತವ್ಯ ಆಯಪ್ ಮೂಲಕವೇ ಅವರು ತಮ್ಮ ಹಾಜರಾತಿಯನ್ನು ಹಾಕಬೇಕಾಗಿದೆ. ಹಾಗಿದ್ದರೂ ವಿಧಾನಸೌಧದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಕಳ್ಳಾಟ ಆಡುತ್ತಿದ್ದಾರೆ ಎಂಬ ಅಸಮಾಧಾನ ಕೇಳಿಬರುತ್ತಲೇ ಇದೆ. ಇದಕ್ಕೆ ಸರ್ಕಾರ ಯೌ ರೀತಿ ಅಂಕುಶ ಹಾಕಲಿದೆ ಎಂಬುದನ್ನು ಕಾದುನೋಡಬೇಕಿದೆ.
ಆದೇಶದಲ್ಲಿ ಏನಿದೆ?
ಕರ್ನಾಟಕ ವಿಧಾನಸಭೆ ಸಚಿವಾಲಯದಲ್ಲಿ (ಶಾಸಕರ ಭವನವು ಸೇರಿದಂತೆ) ಕಾರ್ಯನಿರ್ವಹಿಸುತ್ತಿರುವ ಅಧಿಕಾರಿ/ನೌಕರರುಗಳ ದೈನಂದಿನ ಹಾಜರಾತಿಯನ್ನು ಪರಿಶೀಲಿಸಲು KAAMS (Karnataka Advance Attendance Management System Kartavya App) ತಂತ್ರಾಂಶವನ್ನು ಈ ಸಚಿವಾಲಯದಲ್ಲಿ ಅಳವಡಿಸಿಕೊಳ್ಳಲು ಕ್ರಮ ಕೈಗೊಳ್ಳಲಾಗುತ್ತಿದೆ.
ಆದ್ದರಿಂದ ಕರ್ತವ್ಯ ಆಯಪ್ ಮುಖೇನ ಹಾಜರಾತಿಯನ್ನು ದಾಖಲಿಸಲು ಅನುಕೂಲವಾಗುವಂತ ಈ ಸಚಿವಾಲಯದ ಎಲ್ಲಾ ಅಧಿಕಾರಿ/ನೌಕರರು ಮಾಹಿತಿಯನ್ನು ಶಾಖಾವಾರು ಭರ್ತಿ ಮಾಡಬೇಕು. ಈ ಪ್ರಕ್ರಿಯೆ ಮುಂದುವರೆದಿದೆಯಾದರೂ, ಸಮಯ ಪಾಲನೆ ಒಂದು ಸವಾಲಾಗಿ ಪರಿಣಮಿಸಿದೆ.
ಪಾಲನೆಗೆ ಕ್ರಮ ಏನು?
ಸಿಬ್ಬಂದಿ ಸರಿಯಾದ ಸಮಯಕ್ಕೆ ಕಚೇರಿಗೆ ಆಗಮಿಸುವ ನಿಟ್ಟಿನಲ್ಲಿ ಆದೇಶ ಏನೋ ಮಾಡಲಾಗಿದೆ . ಆದರೆ ಇದನ್ನು ಪಾಲನೆ ಮಾಡುವುದು ಅಗತ್ಯವಾಗಿದೆ. ಇಲ್ಲದೇ ಇದ್ದರೆ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ ಸಿಎಂ ಡಿಕೆ ಶಿವಕುಮಾರ್ ಏನು ಕ್ರಮ ಕೈಗೊಳ್ಳಲಿದ್ದಾರೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
Gruhalakshmi ಯೋಜನೆ ಪರಿಷ್ಕರಣೆ ಆರಂಭ: 3.89 ಲಕ್ಷ ಮಂದಿ ‘ಗೃಹಲಕ್ಷ್ಮಿ’ಯಿಂದ ಔಟ್
Actress Sanchita Ugale ಆತ್ಮ*ಹ*ತ್ಯೆ ವಿರೋಧಿಸುತ್ತಲೇ ಜೀವ ಕಳೆದುಕೊಂಡ ನಟಿ ಸಂಚಿತಾ ಉಗಾಲೆ!