newsics.com / ನ್ಯೂಸಿಕ್ಸ್
ಬೆಂಗಳೂರು: ಓಲಾ ಆಯಪ್ನಲ್ಲಿ ಕ್ಯಾಬ್ ಬುಕ್ ಮಾಡ್ಕೊಂಡು ಮನೆಯತ್ತ ಹೋಗ್ತಿದ್ದ ಮಹಿಳೆಗೆ ಚಾಲಕನೇ ಲೈಂಗಿಕ ದೌರ್ಜನ್ಯವೆಸಗಿರೋ (Sexual Assault) ಫಟನೆ ಬೆಳಕಿಗೆ ಬಂದಿದೆ.
ಈ ಸಂಬಂಧ ಎಫ್‌ಐಆರ್ ದಾಖಲಾಗಿದೆ. ಮಧ್ಯರಾತ್ರಿ ಚಾಲಕನ (Driver) ದುರ್ವರ್ತನೆಗೆ ಮಹಿಳೆ ನಡುಗಿ ಹೋಗಿದ್ದಾರೆ. ಜೂನ್ 9ರ ರಾತ್ರಿ ನಡೆದಿದ್ದೇನು?
ಕ್ಯಾಬ್ನಲ್ಲಿ ಓಡಾಡುವ ಮಹಿಳೆಯರೇ ಎಚ್ಚರ:
ಕ್ಯಾಬ್ನಲ್ಲಿ ಓಡಾಡೋ ಮಹಿಳೆಯರು ಎಷ್ಟು ಕೇರ್ ಫುಲ್ ಆಗಿ ಇದ್ರೂ ಕಡಿಮೇನೇ.
ಬೆಂಗಳೂರಲ್ಲೇ ಕ್ಯಾಬ್ನಲ್ಲಿ ಮಹಿಳೆಗೆ ಲೈಂಗಿಕ ದೌರ್ಜನ್ಯವೆಸಗಿರೋ ಘಟನೆ ಇದೀಗ ವರದಿ ಆಗಿದೆ. ಜೂನ್ 09ರಂದು ಮಧ್ಯರಾತ್ರಿ 1:30- 1:40ರ ಸುಮಾರಿಗೆ ಘಟನೆ ನಡೆದಿದ್ದು, ಮಹಿಳೆಯ ಜತೆ ಚಾಲಕ ಅಸಭ್ಯವಾಗಿ ವರ್ತಿಸಿದ್ದಾನೆ ಎನ್ನುವ ಆರೋಪ ಕೇಳಿಬಂದಿದೆ.
ಜೂನ್ 9ರ ಮಧ್ಯರಾತ್ರಿ ಓಲಾದಲ್ಲಿ ಕ್ಯಾಬ್ ಬುಕ್ ಮಾಡಿಕೊಂಡು ಮನೆಯತ್ತ ಹೋಗ್ತಿದ್ದ ಮಹಿಳೆಗೆ ನಡು ರಸ್ತೆಯಲ್ಲೇ ಶಾಕ್ ಕಾದಿತ್ತು. ಕ್ಯಾಬ್ ಡ್ರೈವರ್ ನೇರವಾಗಿ ಯುವತಿಯನ್ನು ಲೊಕೇಷನ್‌ಗೆ ಕರೆದೊಯ್ಯದೆ ಕತ್ತಲು ಪ್ರದೇಶಕ್ಕೆ ಕ್ಯಾಬ್ ತೆಗೆದುಕೊಂಡು ಹೋಗಿದ್ದ. ಟ್ರಾಫಿಕ್ ನೆಪ ಹೇಳಿ ಕತ್ತಲೆಯ ಜಾಗದಲ್ಲಿ ರೌಂಡ್ಸ್ ಹೊಡೆದು ದಿಢೀರ್ ಕಾರು ನಿಲ್ಲಿಸಿದ್ದಾನೆ.
ಕತ್ತಲೆಯ ಜಾಗದಲ್ಲಿ ದಿಢೀರ್ ಕ್ಯಾಬ್ ನಿಲ್ಲಿಸಿದ ಚಾಲಕ, ಹಿಂದೆ ಕುಳಿತಿದ್ದ ಯುವತಿಯತ್ತ ಹೋಗಿ ಲೈಂಗಿಕ ದೌರ್ಜನ್ಯವೆಸಗಿದ್ದಾನೆ. ಹಿಂಬದಿ ಸೀಟ್ಗೆ ತೆರಳಿ ಮಹಿಳೆ ಮೇಲೆ ಎರಗಿದ್ದ ಎನ್ನುವ ಆರೋಪ ಕೇಳಿಬಂದಿದೆ.
ಮಹಿಳೆಯನ್ನು ವಿವಸ್ತ್ರಗೊಳಿಸಲು ಯತ್ನ!
ಘಟನೆ ಬಳಿಕ ಸಂತ್ರಸ್ತೆ ಪೊಲೀಸ್ ಠಾಣೆಗೆ ದೂರು ನೀಡಿದ್ದು, FIRನಲ್ಲಿ ಹಲವು ವಿಚಾರಗಳನ್ನು ಉಲ್ಲೇಖ ಮಾಡಲಾಗಿದೆ. ಕ್ಯಾಬ್ ಚಾಲಕ ಮಹಿಳೆಯನ್ನು ವಿವಸ್ತ್ರಗೊಳಿಸಲು ಯತ್ನಿಸಿದ್ದನಂತೆ. ಈ ವೇಳೆ ಜೋರಾಗಿ ಕೂಗಿದ ಮಹಿಳೆ, ಗಂಡನಿಗೆ ಕಾಲ್ ಮಾಡಿದ್ದಾಳೆ. ಮಹಿಳೆ ಕೂಗಾಟ ಕಂಡು ಗಾಬರಿಯಾದ ಚಾಲಕ ಕಾರಿನಿಂದ ಮಹಿಳೆಯನ್ನು ಹೊರಗಡೆ ತಳ್ಳಿ ಎಸ್ಕೇಪ್ ಆಗಿದ್ದಾನೆ.
ದೂರು ದಾಖಲು, ಆರೋಪಿ ಅರೆಸ್ಟ್!
KA-05 AQ 7124 ಕ್ಯಾಬ್ ಡ್ರೈವರ್ ವಿರುದ್ಧ ದೂರು ದಾಖಲು ಆವಲಹಳ್ಳಿ ಠಾಣೆಯಲ್ಲಿ FIR ದಾಖಲಾಗಿದೆ. ದೂರು ದಾಖಲಾಗ್ತಿದ್ದಂತೆ ಅಲರ್ಟ್ ಆದ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.
Heart attack ಹೃದಯಾಘಾತದಿಂದ ಶಾಲೆಯಲ್ಲೇ ಉಸಿರು ಚೆಲ್ಲಿದ ಒಂದನೇ ತರಗತಿ ಬಾಲಕ!
ಅಶ್ಲೀಲ ಮೆಸೇಜ್ ಮಾಡಿದ್ದಕ್ಕೆ ಯುವಕನ ಕೊಂದು, ಶವ ಸುಟ್ಟು ಹಾಕಿದ ದಂಪತಿ!
ಚಲಿಸುತ್ತಿರುವ ಬೈಕ್ ಮೇಲೆಯೇ ಲ್ಯಾಪ್ ಟಾಪ್ ಇಟ್ಕೊಂಡು ಕೆಲಸ ಮಾಡಿದ ಯುವಕ : ವೈರಲ್ ವಿಡಿಯೋ ನೋಡಿ