newsics.com
ಖ್ಯಾತ ನಿರೂಪಕಿ, ನಟಿ ಅನುಶ್ರೀ ಪ್ರಯಾಗರಾಜ್ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳಕ್ಕೆ ತೆರಳಿದ್ದಾರೆ.
ಮೌನಿ ಅಮಾವಾಸ್ಯೆಯಂದು ಅನುಶ್ರೀ ತ್ರಿವೇಣಿ ಸಂಗಮದಲ್ಲಿ ಮಿಂದೆದ್ದಿದ್ದಾರೆ. ಅನುಶ್ರೀ ತಮ್ಮ ಇನ್ಸ್ಟಾ ಖಾತೆಯಲ್ಲಿ ಮಹಾಕುಂಭ ಮೇಳದ ಫೋಟೋ ಹಾಗೂ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಅನುಶ್ರೀ ಜತೆ ನಟ ಹಾಗೂ ನಿರ್ದೇಶಕ ರಾಜ್ ಬಿ. ಶೆಟ್ಟಿ, ನಿರ್ದೇಶಕ ಕಿರಣ್ ರಾಜ್ ಹಾಗೂ ರಂಜನ್ ಎಸ್. ಸೇರಿದಂತೆ ಏಳು ಮಂದಿಯಿದ್ದರು.
ಇನ್ಸ್ಟಾ ಪೋಸ್ಟ್ನಲ್ಲಿ ಅನುಶ್ರೀ ಎರಡು ಫೋಟೋ ಹಾಗೂ ಒಂದು ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಒಂದು ಫೋಟೋದಲ್ಲಿ ಅನುಶ್ರೀ ಮಾತ್ರ ಕಾಣಿಸಿಕೊಂಡಿದ್ದು, ಹಣೆಗೆ ತಿಲಕವಿಟ್ಟು, ನಗೆ ಬೀರಿದ್ದಾರೆ.
ಸಂಗಮದಲ್ಲಿ ಮಿಂದು, ಕಣ್ಣುಗಳು ನೆಂದು, ಭಗವಂತ ನೀನೆ ನಮಗೆಲ್ಲ ಅಂದು ಇಂದು ಇನ್ನೆಂದೆಂದು ಎಂದು. ಬಂದು ಕೂತಾಗ ಮನಸ್ಸಿಗೆ ಸಿಕ್ಕ ನೆಮ್ಮದಿ ಸಿಗದು ಎಂದೆಂದು. ಕೋಟಿ ಜನ ಸೇರೋ ಜಾಗ. ಸಿಕ್ಕಾಪಟ್ಟೆ ಕಷ್ಟ ಯಾಕೆ ಬೇಕು ನಮಗೆ ಅಂತ ಮನೆಯಲ್ಲಿ ಕೂತಿದ್ದ್ರೆ ಈ ದೈವಿಕ ಅನುಭವ ಸಿಗ್ತಿರ್ಲಿಲ್ಲ. 29/01/2025 ಮೌನಿ ಅಮಾವಾಸ್ಯೆ. ಹರ ಹರ ಮಹದೇವ್ ಎಂದು ಅನುಶ್ರೀ ಶೀರ್ಷಿಕೆ ಹಾಕಿದ್ದಾರೆ.
ಸದ್ಯ ಅನುಶ್ರೀ, ನಟ ರಾಜ್ ಬಿ. ಶೆಟ್ಟಿ ಜತೆ ಕಾಣಿಸಿಕೊಂಡಿದ್ದು ಕೆಲ ಅನುಮಾನಕ್ಕೂ ಕಾರಣವಾಗಿದೆ. ಇಬ್ಬರೂ ಮದುವೆ ಆಗ್ತಾರೆ ಎನ್ನುವ ಸುದ್ದಿ ಮಧ್ಯೆ ಇಬ್ಬರೂ ಒಟ್ಟಿಗೆ ಪ್ರಯಾಗರಾಜ್ಗೆ ಹೋಗಿರೋದು, ವದಂತಿಗೆ ರೆಕ್ಕೆಪುಕ್ಕ ಸಿಕ್ಕಂತಾಗಿದೆ. ಮದುವೆಗೆ ಮುನ್ನ ಮಹಾದೇವನ ಆಶೀರ್ವಾದ ಪಡೆಯಲು ಜೋಡಿ ಮುಂದಾಗಿದ್ಯಾ ಎನ್ನುವ ಪ್ರಶ್ನೆಯನ್ನು ಹುಟ್ಟುಹಾಕಿದೆ. 37 ವರ್ಷದ ಅನುಶ್ರೀ ಮದುವೆ ಮೇಲೆ ಸದ್ಯ ಎಲ್ಲರ ಕಣ್ಣು ನೆಟ್ಟಿದೆ.
https://www.instagram.com/p/DFb-e5YTkkc/?igsh=Ym03ZXNhaHlvbzV6
heavy rains: ನಾಳೆ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಭಾರೀ ಮಳೆ ಸಾಧ್ಯತೆ