newsics.com
ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ, ಫಹದ್ ಫಾಸಿಲ್ ಅಭಿನಯದ ಪುಷ್ಪ 2 ಥಿಯೇಟರ್ನಲ್ಲಿ ದಾಖಲೆ ನಿರ್ಮಿಸಿದ್ದಾಯ್ತು. ಇದೀಗ OTT ಅಲ್ಲೂ ಪುಷ್ಪ 2 ಸಿನಿಮಾ ಧೂಳೆಬ್ಬಿಸಲು ಆರಂಭಿಸಿದೆ. OTT ಅಲ್ಲಿ ಪುಷ್ಪ 2 ರೀಲೋಡೆಡ್ ಸಿನಿಮಾ ರಿಲೀಸ್ ಆಗಿದ್ದು, ಥಿಯೇಟರ್ನಲ್ಲಿ ನೋಡಿರದ 23 ನಿಮಿಷದ ದೃಶ್ಯಗಳು ರಿಲೀಸ್ ಆಗಿದೆ.
ನೆಟ್ಫ್ಲಿಕ್ಸ್ನಲ್ಲಿ ಪುಷ್ಪ 2 ರೀಲೋಡೆಡ್ ಸಿನಿಮಾ ರಿಲೀಸ್ ಆಗಿದ್ದು, ಅಲ್ಲು ಅರ್ಜುನ್ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಕಳೆದ ಡಿಸೆಂಬರ್ 5ರಂದು ಪುಷ್ಪ 2 ಸಿನಿಮಾ ಪ್ಯಾನ್ ಇಂಡಿಯಾದಲ್ಲಿ ಬಿಡುಗಡೆ ಆಗಿತ್ತು. ದೇಶ, ವಿದೇಶದಲ್ಲೂ ಭರ್ಜರಿ ಪ್ರದರ್ಶನ ಕಂಡ ಅಲ್ಲು ಅರ್ಜುನ್ ಸಿನಿಮಾ 1831 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದ ದಾಖಲೆ ಮಾಡಿದೆ. ಸದ್ಯ OTT ಅಲ್ಲಿ ಪುಷ್ಪ 2 ಸಿನಿಮಾ 275 ಕೋಟಿ ರೂಪಾಯಿ ಮಾರಾಟ ಮಾಡಿರುವ ಬಗ್ಗೆ ವರದಿಯಾಗಿದೆ.
ವರ್ಲ್ಡ್ ವೈಡ್ ಪುಷ್ಪ 2 ಸಿನಿಮಾಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕ ಮೇಲೆ OTT ಅಲ್ಲಿ ಯಾವಾಗ ರಿಲೀಸ್ ಆಗುತ್ತೆ ಅನ್ನೋ ನಿರೀಕ್ಷೆ ಇತ್ತು. ಪುಷ್ಪ-2 ನಿರ್ಮಾಪಕರು ಪುಷ್ಪ-2 ಚಿತ್ರಮಂದಿರಗಳಲ್ಲಿ 56 ದಿನಗಳು ಪೂರೈಸಿದ ನಂತರ OTT ಅಲ್ಲಿ ಬಿಡುಗಡೆಯಾಗಲಿದೆ ಎಂದು ಹೇಳಿದ್ದರು. ಇದೀಗ ನೆಟ್ಫ್ಲಿಕ್ಸ್ನಲ್ಲಿ ಪುಷ್ಪ 2 ಹೆಚ್ಚುವರಿ 23 ನಿಮಿಷದ ದೃಶ್ಯಗಳೊಂದಿಗೆ ರಿಲೀಸ್ ಆಗಿದೆ.
ಥಿಯೇಟರ್ನಲ್ಲಿ ರಿಲೀಸ್ ಆದ ಪುಷ್ಪ 2 ಸಿನಿಮಾ 3 ಗಂಟೆ 20 ನಿಮಿಷ ಇತ್ತು. ನೆಟ್ಫ್ಲಿಕ್ಸ್ನಲ್ಲಿ ರಿಲೀಸ್ ಆದ ಪುಷ್ಪ 2 ಬರೋಬ್ಬರಿ 3 ಗಂಟೆ 43 ನಿಮಿಷಗಳನ್ನು ಹೊಂದಿದೆ. ಸದ್ಯ ನೆಟ್ಫ್ಲಿಕ್ಸ್ನಲ್ಲಿ ಪುಷ್ಪ 2 ಸಿನಿಮಾವನ್ನು ತೆಲುಗು, ಹಿಂದಿ, ತಮಿಳು, ಮಲೆಯಾಳಂ ಭಾಷೆಯಲ್ಲಿ ವೀಕ್ಷಿಸಬಹುದಾಗಿದೆ.