newsics.com
ಉತ್ತರಪ್ರದೇಶ : ರುದ್ರಾಕ್ಷಿ ಮಾರುತ್ತಿದ್ದ ಚಿಗರಿಗಂಗಳ ಚೆಲುವೆ ರಾತ್ರೋ ರಾತ್ರಿ ಇಡಿ ಭಾರತದಲ್ಲಿಯೇ ಫೇಮಸ್ ಆದ್ರೂ. ಅವರ ವಿಡಿಯೋಗಳು ಸೋಷಿಯಲ್ ಮೀಡಿಯಾಗಳಲ್ಲಿ ಮಿಂಚಿನಂತೆ ಸಂಚರಿಸಲು ಶುರುವಾದವು. ಮೋನಾಲಿಸಾ ಇನ್ನೇನು ಕೆಲವೇ ದಿನಗಳಲ್ಲಿ ಬಾಲಿವುಡ್ ಸಿನಿಮಾದ ಮೂಲಕ ಬೆಳ್ಳಿ ತೆರೆಯಲ್ಲಿ ರಾರಾಜಿಸಲಿದ್ದಾರೆ.
16 ವರ್ಷದ ಹುಡುಗಿ ಮಧ್ಯಪ್ರದೇಶದ ಖಾರ್ಗೊನ್ ಜಿಲ್ಲೆಯ ಈ ಹುಡುಗಿ ಕುಂಭಮೇಳದಲ್ಲಿ ಕಂಡು ಸೋಷಿಯಲ್ ಮೀಡಿಯಾಗಳಲ್ಲಿ, ಪತ್ರಿಕೆಗಳ ತಲೆ ಬರಹದಲ್ಲಿ ಸುದ್ದಿಯಾಗಿ ಮಿಂಚಿದ್ದರು. ಈಗ ಮತ್ತೆ ಸುದ್ದಿಗೆ ಬಂದಿರುವ ಮೋನಾಲಿಸಾ ಹಿಂದಿಯ ಸಿನಿಮಾದಲ್ಲಿ ನಟಿಸಲಿದ್ದಾರೆ ಇತ್ತೀಚೆಗೆ ಬಂದ ವರದಿಯ ಪ್ರಕಾರ. ದಿ ಡೈರಿ ಆಫ್ ಮನಿಪುರ ಸಿನಿಮಾದಲ್ಲಿ ಮೋನಾಲಿಸಾ ನಟಿಸಲಿದ್ದಾರೆ ಎಂದು ತಿಳಿದು ಬಂದಿದೆ.
ಈ ಸಿನಿಮಾರದ ರೈಟರ್ ಹಾಗೂ ಡೈರಕ್ಟರ್ ಸನೋಜ್ ಮಿಶ್ರಾ ಮೋನಾಲಿಸಾ ಮನೆಗೆ ಭೇಟಿ ಕೊಟ್ಟು ಸಿನಿಮಾದಲ್ಲಿ ನಟಿಸುವಂತೆ ಆಫರ್ ಕೊಟ್ಟಿದ್ದಾರೆ. ಅದು ಮಾತ್ರವಲ್ಲ ಈ ವಿಷಯವನ್ನು ಅವರು ತಮ್ಮ ಇನ್ಸ್ಟಾಗ್ರಾಮ್ ಪೇಜ್ನಲ್ಲಿಯೂ ಕೂಡ ಹಂಚಿಕೊಂಡಿದ್ದಾರೆ.