newsics.com
ಅಕೋಲಾ(ಮಹಾರಾಷ್ಟ್ರ): ಕರ್ನಾಟಕದಲ್ಲಿ ಆಡಳಿತ ನಡೆಸುತ್ತಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಚುನಾವಣಾ ಖರ್ಚಿಗಾಗಿ ಮದ್ಯ ವ್ಯಾಪಾರಿಗಳಿಂದ ಹಣ ವಸೂಲಿಯಲ್ಲಿ ತೊಡಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ಗುಡುಗಿದ್ದಾರೆ.
ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಅಕೋಲಾದಲ್ಲಿ ಪ್ರಚಾರ ನಡೆಸಿದ ಪ್ರಧಾನಿ ಮೋದಿ, ಕರ್ನಾಟಕ ಸರ್ಕಾರ ಮದಗಯ ವರ್ತಕರಿಂದ 700 ಕೋಟಿ ರೂ. ಸುಲಿಗೆ ಮಾಡಿದೆ ಎಂದು ಗಂಭೀರ ಆರೋಪ ಮಾಡಿದರು.
ಕಾಂಗ್ರೆಸ್ ಸರ್ಕಾರ ಎಲ್ಲೆಲ್ಲಿ ರಚನೆಯಾಗುತ್ತದೋ ಆ ರಾಜ್ಯವು ಪಕ್ಷದ ಶಾಹಿ ಪರಿವಾರ ಅಂದರೆ ರಾಜ ಕುಟುಂಬದ ಎಟಿಎಂ ಆಗುತ್ತದೆ. ಆದರೆ ನಾವು ಮಹಾರಾಷ್ಟ್ರವನ್ನು ಎಟಿಎಂ ಆಗಲು ಬಿಡುವುದಿಲ್ಲ ಎಂದು ಹೇಳಿದ್ದಾರೆ ಹೇಳಿದ್ದಾರೆ.
ಮಹಾರಾಷ್ಟ್ರ ಚುನಾವಣೆಗಾಗಿ ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳಿಂದ ಹಣ ಬರುತ್ತಿದೆ ಎಂದು ಮೋದಿ ಆರೋಪಿಸಿದ್ದಾರೆ. ಚುನಾವಣೆ ಗೆಲ್ಲಲು ಕಾಂಗ್ರೆಸ್ ಇಷ್ಟೊಂದು ಭ್ರಷ್ಟಾಚಾರ ನಡೆಸಿದರೆ, ಒಮ್ಮೆ ಅಧಿಕಾರಕ್ಕೆ ಬಂದರೆ ಆ ಪಕ್ಷ ಎಷ್ಟು ಭ್ರಷ್ಟವಾಗುತ್ತದೆ ಎಂದು ಊಹಿಸಬಹುದು ಎಂದು ಪ್ರಧಾನಿ ವಾಗ್ದಾಳಿ ನಡೆಸಿದರು.
ತೆಲಂಗಾಣ ಮತ್ತು ಹಿಮಾಚಲ ಪ್ರದೇಶಗಳೂ ಈ ಶಾಹಿ ಪರಿವಾರದ ಎಟಿಎಂಗಳಾಗಿ ಮಾರ್ಪಟ್ಟಿವೆ. ಮಹಾರಾಷ್ಟ್ರದಲ್ಲಿ ಆಡಳಿತ ನಡೆಸುತ್ತಿರುವ ಪ್ರಣಾಳಿಕೆಯು ಮಹಿಳಾ ಭದ್ರತೆ, ಉದ್ಯೋಗಾವಕಾಶಗಳು, ಲಡ್ಕಿ ಬಹಿನ್ ಯೋಜನೆಯ ವಿಸ್ತರಣೆಯ ಮೇಲೆ ಕೇಂದ್ರೀಕರಿಸುತ್ತದೆ ಎಂದು ಪ್ರಧಾನಿ ಹೇಳಿದರು,
ಆದರೆ ಕಾಂಗ್ರೆಸ್, ಶಿವಸೇನೆ (ಯುಬಿಟಿ) ಮತ್ತು ಶರದ್ ಪವಾರ್ ಅವರ ಎನ್‌ಸಿಪಿ ಒಳಗೊಂಡ ಮಹಾ ವಿಕಾಸ್ ಅಘಾಡಿ ಬಂದಿವೆ. ಎಂವಿಎ ಎಂದರೆ ಭ್ರಷ್ಟಾಚಾರ, ಟೋಕನ್ ಹಣ ಮತ್ತು ವರ್ಗಾವಣೆ ಪೋಸ್ಟಿಂಗ್ ವ್ಯವಹಾರ ಎಂದು ಇಡೀ ದೇಶಕ್ಕೆ ತಿಳಿದಿದೆ ಎಂದು ಮೋದಿ ಟಾಂಗ್ ಕೊಟ್ಟರು.
ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಪ್ರಧಾನಿ, ತಾವು ಎಂದಾದರೂ ಬಾಬಾಸಾಹೇಬ್ ಅಂಬೇಡ್ಕರ್ ಅವರ ಪಂಚತೀರ್ಥಕ್ಕೆ ಭೇಟಿ ನೀಡಿದ್ದರೆ ಅದನ್ನು ಸಾಬೀತುಪಡಿಸಲು ಪಕ್ಷದ ಶಾಹಿ ಪರಿವಾರಕ್ಕೆ ಧೈರ್ಯವಿದೆಯೇ ಎಂದು ಪ್ರಶ್ನಿಸಿದರು.
ಯೋಗ ಶಿಕ್ಷಕಿ ಕಿಡ್ನ್ಯಾಪ್ ಕೇಸ್: ಟೆಂಪಲ್ ರನ್ ನಡೆಸಿದ್ದ ಆರೋಪಿಗಳು ಅಂದರ್ ಆಗಿದ್ದು ಹೇಗೆ..?
ರೆಸ್ಟೋರೆಂಟ್‌ಗಳ ಜತೆ ಒಳ ಒಪ್ಪಂದ: ಗ್ರಾಹಕರಿಗೆ ಮೋಸ, ಸ್ವಿಗ್ಗಿ, ಜೊಮಾಟೋಗೆ ಸಂಕಷ್ಟ
ಎಷ್ಟೇ ಕ್ಲೀನ್ ಮಾಡಿದ್ರು ಮಿಕ್ಸಿ ಜಾರಿನ ಕೊಳೆ ಹೋಗ್ತಿಲ್ವಾ? ; ಈ ರೀತಿ ಸುಲಭವಾಗಿ ಕ್ಲೀನ್ ಮಾಡಿ
ಲಕ್ಕಿ ಕಾರ್ ಗೆ ಅಂತಿಮ ನಮನ; 1500 ಜನರ ಸಮ್ಮುಖದಲ್ಲಿ ಮಣ್ಣು ಮಾಡುವ ಕಾರ್ಯ..!