newsics.com
ನವದೆಹಲಿ: ಭಾರತದ ಕಾಂಪಿಟೇಷನ್ ಕಮಿಷನ್ ಆಫ್ ಇಂಡಿಯಾದ (ಸಿಸಿಐ) ತನಿಖಾ ವಿಭಾಗವು ಫುಡ್ ಅಗ್ರಿಗೇಟರ್ ಕಂಪನಿಗಳಾದ ಜೊಮಾಟೋ ಹಾಗೂ ಸ್ವಿಗ್ಗಿಯ ವಂಚನೆಯನ್ನು ಬಯಲು ಮಾಡಿದೆ.
ಸಿಸಿಐನ ಆ್ಯಂಟಿಟ್ರಸ್ಟ್ ಬಾಡಿ ನಡೆಸಿದ ತನಿಖೆಯಲ್ಲಿ ಆಹಾರ ವಿತರಣಾ ದೈತ್ಯ ಕಂಪನಿಗಳಾದ ಜೊಮಾಟೊ ಮತ್ತು ಸಾಫ್ಟ್‌ಬ್ಯಾಂಕ್-ಬೆಂಬಲಿತ ಸ್ವಿಗ್ಗಿ ಸ್ಪರ್ಧೆಯ ಕಾನೂನುಗಳನ್ನು ಉಲ್ಲಂಘಿಸಿರುವುದು ಕಂಡುಬಂದಿದೆ.
ಈ ಎರಡೂ ಕಂಪನಿಗಳ ಬಿಸಿನೆಸ್ ಅಭ್ಯಾಸಗಳು ತಮ್ಮ ಫ್ಲಾಟ್‌ಫಾರ್ಮ್‌ನಲ್ಲಿ ಪಟ್ಟಿ ಮಾಡಲಾಗಿರುವ ಆಯ್ದ ರೆಸ್ಟೋರೆಂಟ್‌ಗಳಿಗೆ ಅನುಕೂಲಕರವಾಗಿರುವಂತೆ ಮಾಡಿವೆ ಎಂದು ದಾಖಲೆಗಳು ತೋರಿಸಿವೆ.
ಜೊಮಾಟೊ ಕಡಿಮೆ ಕಮಿಷನ್‌ಗಳಿಗೆ ಪ್ರತಿಯಾಗಿ ರೆಸ್ಟೋರೆಂಟ್‌ಗಳ ಪಾಲುದಾರರೊಂದಿಗೆ ‘ವಿಶೇಷ ಒಪ್ಪಂದ’ಗಳನ್ನು ಮಾಡಿಕೊಂಡಿದೆ. ಆದರೆ ಸ್ವಿಗ್ಗಿ ಕೆಲವು ಕಂಪನಿಗಳಿಗೆ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಪ್ರತ್ಯೇಕವಾಗಿ ಪಟ್ಟಿಮಾಡಿದರೆ ವ್ಯಾಪಾರ ಬೆಳವಣಿಗೆಯನ್ನು ಖಾತರಿಪಡಿಸುತ್ತದೆ, ಭಾರತೀಯ ಸ್ಪರ್ಧಾತ್ಮಕ ಆಯೋಗ (CCI) ಸಿದ್ಧಪಡಿಸಿದ ಸಾರ್ವಜನಿಕವಲ್ಲದ ದಾಖಲೆಗಳ ಪ್ರಕಾರ ಈ ಮಾಹಿತಿ ಹೊರಬಿದ್ದಿದೆ.
Swiggy, Zomato ಮತ್ತು ಅವರ ಸಂಬಂಧಿತ ರೆಸ್ಟೋರೆಂಟ್ ಪಾಲುದಾರರ ನಡುವಿನ ವಿಶೇಷ ಒಪ್ಪಂದಗಳು ಮಾರುಕಟ್ಟೆಯು ಹೆಚ್ಚು ಸ್ಪರ್ಧಾತ್ಮಕವಾಗುವುದನ್ನು ತಡೆಯುತ್ತದೆ ಎಂದು CCIನ ತನಿಖಾ ವಿಭಾಗ ತಿಳಿಸಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಲು ಜೋಮೊಟೋ, ಸ್ವಿಗ್ಗಿ ಹಾಗೂ ಸಿಸಿಐ ನಿರಾಕರಿಸಿವೆ. ಈ ವರದಿಯ ನಂತರ ಮಾರುಕಟ್ಟೆಯಲ್ಲಿ ಜೋಮೊಟೋ ಕಂಪನಿಯ ಷೇರುಗಳು ದಿನದ ಕೊನೆಯಲ್ಲಿ ಶೇ. 3ರಷ್ಟು ಕುಸಿದಿವೆ.
CCI ಪ್ರಕರಣವನ್ನು Swiggy ನ IPO ಪ್ರಾಸ್ಪೆಕ್ಟಸ್‌ನಲ್ಲಿ ‘ಆಂತರಿಕ ಅಪಾಯಗಳು’ ಎಂದು ಉಲ್ಲೇಖಿಸಿದೆ.
ನಿದ್ದೆಗೆಡಿಸಿದ ಟ್ರಂಪ್ ಗೆಲುವು! ಲೈಂಗಿಕ ಕ್ರಿಯೆಗೆ ಸಹಕರಿಸಲ್ಲ ಎಂದ ಮಹಿಳೆಯರು; ಇದೇ ಕಾರಣ
ಲಕ್ಕಿ ಕಾರ್ ಗೆ ಅಂತಿಮ ನಮನ; 1500 ಜನರ ಸಮ್ಮುಖದಲ್ಲಿ ಮಣ್ಣು ಮಾಡುವ ಕಾರ್ಯ..!
ಎಷ್ಟೇ ಕ್ಲೀನ್ ಮಾಡಿದ್ರು ಮಿಕ್ಸಿ ಜಾರಿನ ಕೊಳೆ ಹೋಗ್ತಿಲ್ವಾ? ; ಈ ರೀತಿ ಸುಲಭವಾಗಿ ಕ್ಲೀನ್ ಮಾಡಿ