Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > Cabinet Expansion ಕರ್ನಾಟಕ ಕಾಂಗ್ರೆಸ್‌ ಸಂಪುಟ ಸರ್ಜರಿಗೆ ಹೈಕಮಾಂಡ್ ಗ್ರೀನ್ ಸಿಗ್ನಲ್? ಯಾರಿಗೆ ಸಿಗಲಿದೆ ಮಂತ್ರಿಗಿರಿ? ಇಲ್ಲಿದೆ ಮಾಹಿತಿ
ಪ್ರಮುಖಕರ್ನಾಟಕ

Cabinet Expansion ಕರ್ನಾಟಕ ಕಾಂಗ್ರೆಸ್‌ ಸಂಪುಟ ಸರ್ಜರಿಗೆ ಹೈಕಮಾಂಡ್ ಗ್ರೀನ್ ಸಿಗ್ನಲ್? ಯಾರಿಗೆ ಸಿಗಲಿದೆ ಮಂತ್ರಿಗಿರಿ? ಇಲ್ಲಿದೆ ಮಾಹಿತಿ

Share
2 Min Read
SHARE

newsics.com | ನ್ಯೂಸಿಕ್ಸ್

Contents
ಇಬ್ಬರಿಗೆ ಡಿಸಿಎಂ ಪಟ್ಟ, 18 ಶಾಸಕರಿಗೆ ಒಲಿಯಲಿದೆಯೇ ಸಚಿವ ಸ್ಥಾನ?ಕನ್ಫರ್ಮ್ ಲಿಸ್ಟ್‌ನಲ್ಲಿರುವ ಪ್ರಮುಖ ನಾಯಕರುರೇಸ್‌ನಲ್ಲಿರುವ ಇತರ ಪ್ರಬಲ ಸಂಭಾವ್ಯ ನಾಯಕರುಮುಂದಿನ ವಾರವೇ ಪ್ರಮಾಣವಚನ?

ಬೆಂಗಳೂರು:ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲ ಮೂಡಿಸಿರುವ ಸಚಿವ ಸಂಪುಟ ವಿಸ್ತರಣೆ ಕಸರತ್ತು ಅಂತಿಮ ಘಟ್ಟಕ್ಕೆ ಬಂದು ತಲುಪಿದೆ. ಇತ್ತೀಚೆಗೆ ರಾಜ್ಯದ ಮಾಜಿ ಸಿಎಂ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಹಾಗೂ ಬಿ.ಕೆ. ಹರಿಪ್ರಸಾದ್ ದೆಹಲಿಗೆ ತೆರಳಿ ಹೈಕಮಾಂಡ್ ಜತೆ ಮಾತುಕತೆ ನಡೆಸಿದ್ದು, ವಿದ್ಯಾರ್ಥಿಗಳ ಪ್ರತಿಭಟನೆಯಂತಹ ತುರ್ತು ವಿದ್ಯಮಾನಗಳಿಂದಾಗಿ ಚರ್ಚೆ ಅಪೂರ್ಣಗೊಂಡಿತ್ತು. ಆದರೆ ಈಗ ಮತ್ತೆ ಸಂಪುಟ ಪುನಾರಚನೆ ಕಾವೇರಿದೆ.

 

 

ಇಬ್ಬರಿಗೆ ಡಿಸಿಎಂ ಪಟ್ಟ, 18 ಶಾಸಕರಿಗೆ ಒಲಿಯಲಿದೆಯೇ ಸಚಿವ ಸ್ಥಾನ?

  • ಜಾತಿ ಸಮೀಕರಣ ಸರಿದೂಗಿಸಲು ಲಿಂಗಾಯತ ಹಾಗೂ ಅಹಿಂದ ಸಮುದಾಯದಿಂದ ತಲಾ ಒಬ್ಬರಿಗೆ ಉಪಮುಖ್ಯಮಂತ್ರಿ (DCM) ಹುದ್ದೆ ನೀಡುವ ಸಾಧ್ಯತೆ ದಟ್ಟವಾಗಿದೆ.
  • ಒಟ್ಟು 20 ಖಾಲಿ ಸ್ಥಾನಗಳ ಪೈಕಿ ಮೊದಲ ಹಂತದಲ್ಲಿ 17 ರಿಂದ 18 ಶಾಸಕರಿಗೆ ಮಾತ್ರ ಅವಕಾಶ ಸಿಗಬಹುದು.
  • ಸಂಪುಟ ವಿಸ್ತರಣೆಯ ನಂತರ ಪಕ್ಷದಲ್ಲಿ ಏಳಬಹುದಾದ ಅಸಮಾಧಾನವನ್ನು ಶಮನಗೊಳಿಸಲು 2-3 ಸ್ಥಾನಗಳನ್ನು ಕಾಯ್ದಿರಿಸಲು ವರಿಷ್ಠರು ನಿರ್ಧರಿಸಿದ್ದಾರೆ.

ಕನ್ಫರ್ಮ್ ಲಿಸ್ಟ್‌ನಲ್ಲಿರುವ ಪ್ರಮುಖ ನಾಯಕರು

ಕಳೆದ ಕೆಲವು ದಿನಗಳಿಂದ ಹರಿದಾಡುತ್ತಿರುವ ಮಾಹಿತಿಯಂತೆ, ಜಿಲ್ಲಾವಾರು ಮತ್ತು ಪಕ್ಷಾಂತರದ ಲೆಕ್ಕಾಚಾರದ ಮೇಲೆ ಕೆಳಗಿನ ನಾಯಕರಿಗೆ ಮಂತ್ರಿಗಿರಿ ಬಹುತೇಕ ಖಚಿತ ಎನ್ನಲಾಗುತ್ತಿದೆ.

  • ಲಕ್ಷ್ಮಣ ಸವದಿ (ಅಥಣಿ)
  • ಬಿ. ಶಿವಣ್ಣ (ಆನೇಕಲ್)
  • ಟಿ. ರಘುಮೂರ್ತಿ (ಚಳ್ಳಕೆರೆ)
  • ಅಬ್ಬಯ್ಯ ಪ್ರಸಾದ್ (ಹುಬ್ಬಳ್ಳಿ-ಧಾರವಾಡ ಪೂರ್ವ)
  • ಕೆ.ಎಸ್. ಆನಂದ್ (ಕಡೂರು) ಅಥವಾ ನಯನಾ ಮೋಟಮ್ಮ (ಮೂಡಿಗೆರೆ) – (ಮೊದಲ ಬಾರಿಯ ಶಾಸಕರಾಗಿದ್ದರೂ ಪ್ರಾದೇಶಿಕ ಪ್ರಾತಿನಿಧ್ಯದ ಆಧಾರದಲ್ಲಿ ಪರಿಗಣನೆ).

ರೇಸ್‌ನಲ್ಲಿರುವ ಇತರ ಪ್ರಬಲ ಸಂಭಾವ್ಯ ನಾಯಕರು

ಹಳೆಯ ಸರ್ಕಾರದ ಅನುಭವಸ್ಥರ ಜೊತೆಗೆ ಈ ಕೆಳಗಿನ ಆರು ನಾಯಕರ ಹೆಸರುಗಳು ತೀವ್ರ ಚರ್ಚೆಯಲ್ಲಿವೆ.

  1. ಎನ್.ಎ. ಹ್ಯಾರಿಸ್ (ಶಾಂತಿನಗರ)
  2. ಎಚ್.ಸಿ. ಬಾಲಕೃಷ್ಣ (ಮಾಗಡಿ)
  3. ಕೆ.ಎಂ. ಶಿವಲಿಂಗೇಗೌಡ (ಅರಸೀಕೆರೆ)
  4. ಶರತ್ ಬಚ್ಚೇಗೌಡ (ಹೊಸಕೋಟೆ)
  5. ಪಿ.ಎಂ. ನರೇಂದ್ರಸ್ವಾಮಿ (ಮಳವಳ್ಳಿ)
  6. ಎಸ್.ಎನ್. ಸುಬ್ಬಾರೆಡ್ಡಿ (ಬಾಗೇಪಲ್ಲಿ)

ಮುಂದಿನ ವಾರವೇ ಪ್ರಮಾಣವಚನ?

ಈ ವಾರಾಂತ್ಯದಲ್ಲಿ ರಾಜ್ಯ ನಾಯಕರು ಮತ್ತೊಮ್ಮೆ ದೆಹಲಿಗೆ ಪ್ರಯಾಣ ಬೆಳೆಸುವ ಅಥವಾ ದೂರವಾಣಿ ಮೂಲಕ ವರಿಷ್ಠರ ಜೊತೆ ಆಖೈರು ಚರ್ಚೆ ನಡೆಸುವ ಸಾಧ್ಯತೆಯಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಮುಂದಿನ ವಾರದ ಸೋಮವಾರ ಅಥವಾ ಬುಧವಾರದ ವೇಳೆಗೆ ನೂತನ ಸಚಿವರ ಪ್ರಮಾಣವಚನ ಕಾರ್ಯಕ್ರಮ ನಡೆಯಲಿದೆ ಎಂದು ಅಂದಾಜಿಸಲಾಗಿದೆ.

 

British Airways ಮೂವರೂ ಪೈಲಟ್‌ಗಳು ಅಸ್ವಸ್ಥ; 30,000 ಅಡಿ ಎತ್ತರದಲ್ಲಿ ಬ್ರಿಟಿಷ್ ಏರ್‌ವೇಸ್ ವಿಮಾನಕ್ಕೆ ಎದುರಾಯ್ತು ಭಾರೀ ದುರಂತ

TAGGED:#CM DK Shivakumar #Siddaramaiah #BK Hariprasad #news #newsics
Share This Article
Facebook Twitter Copy Link Print
Previous Article British Airways ಮೂವರೂ ಪೈಲಟ್‌ಗಳು ಅಸ್ವಸ್ಥ; 30,000 ಅಡಿ ಎತ್ತರದಲ್ಲಿ ಬ್ರಿಟಿಷ್ ಏರ್‌ವೇಸ್ ವಿಮಾನಕ್ಕೆ ಎದುರಾಯ್ತು ಭಾರೀ ದುರಂತ

Popular Posts

Cabinet Expansion ಕರ್ನಾಟಕ ಕಾಂಗ್ರೆಸ್‌ ಸಂಪುಟ ಸರ್ಜರಿಗೆ ಹೈಕಮಾಂಡ್ ಗ್ರೀನ್ ಸಿಗ್ನಲ್? ಯಾರಿಗೆ ಸಿಗಲಿದೆ ಮಂತ್ರಿಗಿರಿ? ಇಲ್ಲಿದೆ ಮಾಹಿತಿ

2 Min Read

British Airways ಮೂವರೂ ಪೈಲಟ್‌ಗಳು ಅಸ್ವಸ್ಥ; 30,000 ಅಡಿ ಎತ್ತರದಲ್ಲಿ ಬ್ರಿಟಿಷ್ ಏರ್‌ವೇಸ್ ವಿಮಾನಕ್ಕೆ ಎದುರಾಯ್ತು ಭಾರೀ ದುರಂತ

2 Min Read

Mansoon Updats ISRO ಉಪಗ್ರಹ ಸೆರೆಹಿಡಿದ ಅಪರೂಪದ ಚಿತ್ರ; ಭಾರತದ 95% ಭಾಗ ದಟ್ಟ ಮಳೆಮೋಡಗಳ ಹೊದಿಕೆಯಲ್ಲಿ, ಮುಂಗಾರು ಮತ್ತಷ್ಟು ಬಿರುಸು

2 Min Read

CWG 2026: ಲವ್ಲಿನಾ ಬೊರ್ಗೊಹೈನ್‌ಗೆ ಭಾರತದ ಮೊದಲ ಪದಕ ಖಚಿತ

2 Min Read

You Might Also Like

ಕರ್ನಾಟಕ

Mangalore Students News Invention ಮಂಗಳೂರಿನಲ್ಲಿ ವಿದ್ಯಾರ್ಥಿಗಳಿಂದ AI ಚಾಲಿತ ಸ್ವಯಂಚಾಲಿತ ಎಲೆಕ್ಟ್ರಿಕ್ ವಾಹನ ಅಭಿವೃದ್ಧಿ; ಶ್ರೀನಿವಾಸ್ ವಿಶ್ವವಿದ್ಯಾಲಯದ ‘ಶ್ರೀ ವಾಹನ’ ಗಮನ ಸೆಳೆದ ಸಾಧನೆ

2 Min Read
ಕರ್ನಾಟಕಪ್ರಮುಖ

Highcourt order ಮನೆ ಖರ್ಚಿಗೆ 5 ಸಾವಿರ ರೂ. ಕೇಳಿದ ವೃದ್ಧ ಪತ್ನಿ‌ ಮೇಲೆ ಹಲ್ಲೆ: ತಿಂಗಳಿಗೆ ಹತ್ತು ಸಾವಿರ ನೀಡಲು ಪತಿಗೆ ಹೈಕೋರ್ಟ್ ಆದೇಶ!

2 Min Read
ಕರ್ನಾಟಕದೇಶ

Kaveri River Issue | ಡಿಕೆ ಶಿವಕುಮಾರ್-ತಮಿಳುನಾಡು ಸಿಎಂ ವಿಜಯ್ ಭೇಟಿ ದಿನಾಂಕ ನಿಗದಿ

2 Min Read
ಕರ್ನಾಟಕಪ್ರಮುಖ

Sexual harrassment for minor ಕೆಲಸಕ್ಕೆಂದು ತೆರಳಿ ನಾಪತ್ತೆಯಾಗಿದ್ದ ಅಪ್ರಾಪ್ತೆ ಪತ್ತೆ: ಲೈಂ*ಗಿಕ ದೌರ್ಜನ್ಯ, ಆರೋಪಿ ಬಂಧನ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?