newsics.com
ಖ್ಯಾತ ಕನ್ನಡ ನಟಿ ವೈಷ್ಣವಿ ಗೌಡ ಅವರು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಈ ಮೂಲಕ ಅಭಿಮಾನಿಗಳಿಗೆ ಸರ್‌ಪ್ರೈಸ್ ನೀಡಿದ್ದಾರೆ.
ನಿಶ್ಚಿತಾರ್ಥದ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅವರ ನಿಶ್ಚಿತಾರ್ಥದ ಫೋಟೋಗಳು ಮತ್ತು ವಿಡಿಯೋಗಳು ಅಭಿಮಾನಿಗಳಲ್ಲಿ ಸಂತೋಷ ಮತ್ತು ಆಶ್ಚರ್ಯವನ್ನು ಉಂಟುಮಾಡಿವೆ. ವಿವಾಹದ ದಿನಾಂಕವನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲ.
ನಟಿ ನಿಶ್ಚಿತಾರ್ಥ ಆಗಿರೋದು ಅಭಿಮಾನಿಗಳಿಗೆ ಶಾಕ್ ಹಾಗೂ ಖುಷಿ ಎರಡನ್ನೂ ನೀಡಿದೆ. ಅವರಿಗೆ ಎಲ್ಲ ಕಡೆಗಳಿಂದ ಅಭಿನಂದನೆಗಳು ಬರುತ್ತಿವೆ.
ವೈಷ್ಣವಿ ಗೌಡ ಅವರು ‘ಬಿಗ್ ಬಾಸ್’ನಲ್ಲಿ ಸ್ಪರ್ಧಿಸಿದ್ದ ಸಂದರ್ಭದಲ್ಲಿ ತಮಗೆ ಮದುವೆ ಬಗ್ಗೆ ಇರುವ ಕನಸುಗಳ ಬಗ್ಗೆ ಹೇಳಿಕೊಂಡಿದ್ದರು. ಮದುವೆನ ಹೀಗೆ ಆಗ್ತೀನಿ, ಹಾಗೆ ಆಗ್ತೀನಿ ಎಂದೆಲ್ಲ ವಿವರಿಸಿದ್ದರು. ಅವರಿಗೆ ಸಾಕಷ್ಟು ಮದುವೆ ಆಫರ್‌ಗಳು ಬಂದರೂ ಅದನ್ನು ಒಪ್ಪಿಲ್ಲ ಎಂದಿದ್ದರು. ಈಗ ವೈಷ್ಣವಿ ಗೌಡ ಅವರಿಗೆ ಕಂಕಣ ಭಾಗ್ಯ ಕೂಡಿ ಬಂದಿದೆ.
ಹುಡುಗ ಯಾರು?
ವೈಷ್ಣವಿ ಗೌಡ ಅವರು ಮದುವೆ ಆಗುತ್ತಿರುವ ಹುಡುಗನ ಹೆಸರು ಅನುಕೂಲ್ (ಅಕಾಯ್) ಎಂದು. ಅವರು ತಮ್ಮದೇ ಆದ ಉದ್ಯಮ ಹೊಂದಿದ್ದಾರೆ ಎನ್ನಲಾಗಿದೆ. ಈ ಮೂಲಕ ವೈಷ್ಣವಿ ಅವರು ಬಣ್ಣದ ಲೋಕದವರನ್ನು ಬಿಟ್ಟು ಹೊರಗಿನವರನ್ನು ಕೈ ಹಿಡಿಯುತ್ತಿದ್ದಾರೆ
ವೈಷ್ಣವಿ ಅವರು ‘ಸೀತಾ ರಾಮ’ ಧಾರಾವಾಹಿಯಲ್ಲಿ ಸೀತಾ ಹೆಸರಿನ ಪಾತ್ರ ಮಾಡುತ್ತಿದ್ದಾರೆ. ಈ ಪಾತ್ರ ಸಾಕಷ್ಟು ಗಮನ ಸೆಳೆದಿದೆ. ಈ ಧಾರಾವಾಹಿಯ ಕಲಾವಿದೆ ಮೇಘನಾ ಶಂಕರಪ್ಪ ಕೂಡ ಇತ್ತೀಚೆಗೆ ವಿವಾಹವಾಗಿದ್ದರು.
Relationship Astrology:ಗಂಡ ಹೆಂಡತಿ ತಪ್ಪಾಗಿಯೂ ಈ ದಿನದಂದು ಒಂದಾಗಬಾರದು
Relationship ಮತ್ತೆ ಮತ್ತೆ ದೈಹಿಕ ಸಂಬಂಧಕ್ಕೆ ಒತ್ತಾಯಿಸಿದರೆ ಹೀಗೆ ಮಾಡಿ…
Health Tips ಬೇಸಿಗೆಯಲ್ಲಿ ದೇಹವನ್ನು ತಂಪಾಗಿಡಲು ಈ ಆಹಾರಗಳನ್ನು ಸೇವಿಸಿ
Rain alert ರಾಜ್ಯದ ವಿವಿಧೆಡೆ ಮುಂದಿನ ಒಂದು ವಾರ ವರುಣನ ಆರ್ಭಟ – ಈ ಜಿಲ್ಲೆಗಳಲ್ಲಿ ಭಾರೀ ಮಳೆಯ ಮುನ್ಸೂಚನೆ!