newsics.com
ಆರೋಗ್ಯಕರ ಸಂಬಂಧವು (Healthy relationship) ಪರಸ್ಪರ ತಿಳಿವಳಿಕೆ, ನಂಬಿಕೆ ಮತ್ತು ಒಪ್ಪಿಗೆ ಮೇಲೆ ನಿಂತಿದೆ. ಆದರೆ, ಕೆಲವೊಮ್ಮೆ ಸಂಗಾತಿಯು ದೈಹಿಕ ಸಂಬಂಧಕ್ಕಾಗಿ ಒತ್ತಡ ಹೇರಿದರೆ ಅಥವಾ ನಿಮ್ಮ ಭಾವನೆಗಳನ್ನು ಗೌರವಿಸದಿದ್ದರೆ ನೀವು ಜಾಗೃತರಾಗಬೇಕು. ಇಂತಹ ಸಂದರ್ಭಗಳನ್ನು ಗಂಭೀರವಾಗಿ ಪರಿಗಣಿಸುವುದು ಮುಖ್ಯ.
ದೈಹಿಕ ಸಂಬಂಧದಲ್ಲಿ ಇಬ್ಬರ ಒಪ್ಪಿಗೆಯೂ ಅತ್ಯಗತ್ಯ. ಒಬ್ಬರು ಒತ್ತಡ ಹೇರಿದಾಗ, ಸಂಬಂಧವು ಏಕಪಕ್ಷೀಯವಾಗಿ ಅಸಮತೋಲನಕ್ಕೊಳಗಾಗುತ್ತದೆ. ಇದು ಸಂಗಾತಿಯಲ್ಲಿ ತಪ್ಪಿತಸ್ಥ ಭಾವನೆ ಮೂಡಿಸಿ, ಮಾನಸಿಕ ಒತ್ತಡಕ್ಕೆ ಕಾರಣವಾಗಬಹುದು. ಇಂತಹ ವರ್ತನೆಯು ಆರೋಗ್ಯಕರ ಸಂಬಂಧದ ಗುಣವಲ್ಲ, ಲಕ್ಷಣವೂ ಅಲ್ಲ. ಬದಲಿಗೆ ಒಂದು ರೀತಿಯ ಮಾನಸಿಕ ಹಿಂಸೆಯೆನಿಸುತ್ತದೆ.
ಸಂಬಂಧ ಸರಿಯಿಲ್ಲದ ಲಕ್ಷಣಗಳು:
- ಪದೇಪದೇ ನಿರಾಕರಿಸಿದರೂ ದೈಹಿಕ ಸಂಬಂಧಕ್ಕೆ ಒತ್ತಡ ಹೇರುವುದು.
- ನಿಮ್ಮ ಭಾವನೆಗಳನ್ನು ನಿರ್ಲಕ್ಷಿಸುವುದು.
- ‘ಇಲ್ಲ’ ಎಂದಾಗ ಕೋಪಗೊಳ್ಳುವುದು ಅಥವಾ ದೂರವಿಡುವುದು.
- ದೈಹಿಕ ಸಂಬಂಧವನ್ನು ಪ್ರೀತಿಯ ಅಳತೆಯಾಗಿ ಪರಿಗಣಿಸುವುದು.
- ಒಪ್ಪಿಗೆಯಿಲ್ಲದೆ ಮುಟ್ಟಲು ಪ್ರಯತ್ನಿಸುವುದು.
ಈ ವೇಳೆ ಏನು ಮಾಡಬಹುದು?
ನಿಮ್ಮ ಭಾವನೆಗಳಿಗೆ ಆದ್ಯತೆ ನೀಡಿ:
ನೀವು ದೈಹಿಕ ಸಂಬಂಧಕ್ಕೆ ಸಿದ್ಧವಿಲ್ಲದಿದ್ದರೆ, ‘ಇಲ್ಲ’ ಎಂದು ಹೇಳುವುದು ನಿಮ್ಮ ಹಕ್ಕು. ಇದಕ್ಕೆ ಯಾವುದೇ ಸಮರ್ಥನೆಯ ಅಗತ್ಯವಿಲ್ಲ.
ಮುಕ್ತವಾಗಿ ಮಾತನಾಡಿ:
ನಿಮ್ಮ ಸಂಗಾತಿಗೆ ಸ್ಪಷ್ಟವಾಗಿ, ಗೌರವದಿಂದ ನಿಮ್ಮ ಭಾವನೆಗಳನ್ನು ತಿಳಿಸಿ. ಅವರ ಪ್ರತಿಕ್ರಿಯೆಯನ್ನು ಗಮನಿಸಿ.
ಇತಿಮಿತಿ ತಿಳಿಸಿ:
ನಿಮ್ಮ ಮಿತಿಗಳೇನು ತಿಳಿಸಿ. ಯಾರಾದರೂ ಅವುಗಳನ್ನು ಪದೇಪದೇ ಗೌರವಿಸದಿದ್ದರೆ, ಸಂಬಂಧವನ್ನು ಮರುಪರಿಶೀಲಿಸಿ.
ಬೆಂಬಲ ಹುಡುಕಿ:
ಗೊಂದಲ ಅಥವಾ ಆತಂಕವಿದ್ದರೆ, ವಿಶ್ವಾಸಾರ್ಹ ಸ್ನೇಹಿತ, ಕುಟುಂಬ ಸದಸ್ಯ ಅಥವಾ ಸಲಹೆಗಾರರೊಂದಿಗೆ ಮಾತನಾಡಿ.
ಆರೋಗ್ಯಕರ ಸಂಬಂಧವು ಇಬ್ಬರ ಒಪ್ಪಿಗೆ, ಗೌರವ ಮತ್ತು ಪರಸ್ಪರ ಸಂತೋಷದ ಮೇಲೆ ಆಧಾರಿತವಾಗಿರುತ್ತದೆ. ಒತ್ತಡ, ಭಾವನಾತ್ಮಕ ಬ್ಲ್ಯಾಕ್‌ಮೇಲ್ ಅಥವಾ ಗಡಿಗಳ ಉಲ್ಲಂಘನೆಯಂತಹ ಸಂಕೇತಗಳನ್ನು ಗಂಭೀರವಾಗಿ ಪರಿಗಣಿಸಿ. ನಿಮ್ಮ ಸ್ವಾತಂತ್ರ್ಯ ಮತ್ತು ಮನಸ್ಸಿನ ಶಾಂತಿಯನ್ನು ರಕ್ಷಿಸಿಕೊಳ್ಳಲು ಧೈರ್ಯದಿಂದ ಮುಂದಾಗಿ.
Pregnancy tips ಗರ್ಭದಲ್ಲಿರುವ ಮಗುವನ್ನು ಚುರುಕುಗೊಳಿಸಲು ಗರ್ಭಿಣಿಯರು ಏನೆಲ್ಲಾ ಮಾಡಬೇಕು?
Orange Juice ಗರ್ಭಿಣಿಯರು ಅಲ್ಟ್ರಾಸೌಂಡ್‌ಗೆ ಮುಂಚೆ ಕಿತ್ತಳೆ ಹಣ್ಣಿನ ಜ್ಯೂಸ್ ಕುಡಿದರೇನಾಗುತ್ತೆ?