newsics.com
ನವಿ ಮುಂಬೈನ ವಾಶಿ ಮತ್ತು ಸನ್ಪಾಡಾ ರೈಲು ನಿಲ್ದಾಣಗಳ ನಡುವೆ ಸಂಚರಿಸುತ್ತಿದ್ದ ಕಾರೊಂದರ ಡಿಕ್ಕಿಯಿಂದ ಕೈಯೊಂದು ನೇತಾಡುತ್ತಿರುವುದನ್ನು ಕಂಡ ಸ್ಥಳೀಯರೊಬ್ಬರು ತಕ್ಷಣವೇ ವಿಡಿಯೋ ಚಿತ್ರೀಕರಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಈ ವಿಡಿಯೋ ನೋಡಿ ನವಿ ಮುಂಬೈ ಪೊಲೀಸರು ಮತ್ತು ಅಪರಾಧ ವಿಭಾಗದ ತಂಡ ಕಾರನ್ನು ಪತ್ತೆಹಚ್ಚಲು ತನಿಖೆ ಆರಂಭಿಸಿತು. ಸುಮಾರು 8.30 ರ ಹೊತ್ತಿಗೆ ಘಾಟ್ಕೋಪರ್ ಬಳಿ ಕಾರನ್ನು ಪತ್ತೆಹಚ್ಚಿದಾಗ, ಮೂವರು ಯುವಕರು ಲ್ಯಾಪ್ಟಾಪ್ ಒಂದರ ಪ್ರಚಾರಕ್ಕಾಗಿ ರೀಲ್ ಮಾಡುತ್ತಿರುವುದು ಬೆಳಕಿಗೆ ಬಂದಿದೆ.
ಈ ಯುವಕರು ಮುಂಬೈನಿಂದ ಮದುವೆ ಸಮಾರಂಭಕ್ಕೆಂದು ನವಿ ಮುಂಬೈಗೆ ಬಂದಿದ್ದರು. ರೀಲ್ನಲ್ಲಿ, ಬೈಕ್ ಸವಾರನೊಬ್ಬ ಕಾರನ್ನು ನಿಲ್ಲಿಸಿ ಡಿಕ್ಕಿ ತೆರೆಯಲು ಕೇಳುತ್ತಾನೆ. ಆಗ ಡಿಕ್ಕಿಯಿಂದ ಕೈ ಹೊರಹಾಕಿದ್ದ ಯುವಕ ಡಿಕ್ಕಿ ತೆರೆದು, “ಹೆದರಿಕೊಂಡ್ರಾ ? ನಾನು ಸತ್ತಿಲ್ಲ, ಬದುಕಿದ್ದೇನೆ. ಆದರೆ ಲ್ಯಾಪ್ಟಾಪ್ ಮೇಲೆ ನಾವು ನೀಡುತ್ತಿರುವ ಅದ್ಭುತ ಆಫರ್ ಕೇಳಿ” ಎಂದು ಹೇಳುತ್ತಾನೆ.
ಯುವಕರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಲಾಗುತ್ತಿದೆ. ಸದ್ಯಕ್ಕೆ ಈ ಸಂಬಂಧ ಯಾವುದೇ ಎಫ್ಐಆರ್ ದಾಖಲಾಗಿಲ್ಲ