newsics.com
ನಾಗ್ಪುರ(ಮಹಾರಾಷ್ಟ್ರ): ನಾಗ್ಪುರದ ಪ್ರಾಣಿ ರಕ್ಷಣಾ ಕೇಂದ್ರದ ಮೂರು ಹುಲಿಗಳು ಮತ್ತು ಒಂದು ಚಿರತೆ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿವೆ.
ಸೋಂಕಿಗೆ ಒಳಗಾಗಿದ್ದ ಚಿಕನ್ ತಿಂದು ಇವುಗಳು ಸಾವನ್ನಪ್ಪಿರುವ ಸಾಧ್ಯತೆ ಇದೆ ಎಂದು ರಾಜ್ಯ ಅರಣ್ಯ ಸಚಿವ ಗಣೇಶ್ ನಾಯ್ಕ್ ಶಂಕೆ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪ್ರಯೋಗಾಲಯದ ವರದಿ ಬಂದ ಬಳಿಕವೇ ಸ್ಪಷ್ಟವಾಗಿ ದೃಢೀಕರಿಸಲು ಸಾಧ್ಯ ಎಂದು ಚಂದ್ರಪುರ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ ಅವರು ಹೇಳಿದರು.
ವೈಜ್ಞಾನಿಕ ಪ್ರಯೋಗಾಲಯದ ವರದಿ ಇನ್ನಷ್ಟೇ ಕೈ ಸೇರಬೇಕಿದೆ. ಪ್ರಾಥಮಿಕ ಮಾಹಿತಿ ಅನುಸಾರ, ಸೋಂಕಿತ ಕೋಳಿಯನ್ನು ಸೇವಿಸಿ, ಈ ಪ್ರಾಣಿಗಳು ಸಾವನ್ನಪ್ಪಿರಬಹುದು. ಸಮಗ್ರ ತನಿಖೆಗೆ ಸೂಚಿಸಲಾಗಿದ್ದು, ಬಳಿಕವೇ ಮಾಹಿತಿ ಲಭ್ಯವಾಗಲಿದೆ ಎಂದರು.
ಪ್ರಾಣಿಗಳಿಗೆ ನೀಡುವ ಆಹಾರವನ್ನು ಪರಿಶೀಲನೆ ನಡೆಸಲು ನಿರ್ದೇಶಿಸಲಾಗಿದೆ. ಸಾವನ್ನಪ್ಪಿದ್ದ ಹುಲಿಗಳು ಮತ್ತು ಚಿರತೆಯನ್ನು ಪ್ರಾಣಿ-ಮಾನವ ಸಂಘರ್ಷದಿಂದ ರಕ್ಷಿಸಿ ಇಲ್ಲಿನ ಗೊರೆವಡಾ ರಕ್ಷಣಾ ಕೇಂದ್ರಕ್ಕೆ ತಂದು ಬಿಡಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Old coin fraud ಹಳೆ ನಾಣ್ಯದ ಜಾಹೀರಾತಿಗೆ ಮರುಳಾಗಿ 58 ಲಕ್ಷ ಕಳೆದುಕೊಂಡ ಮಂಗಳೂರಿಗ!
Vaikuntha Ekadashi ವೈಕುಂಠ ಏಕಾದಶಿ ಇಂದು: ಹೀಗೆ ಮಾಡಿದರೆ ದೇವರ ಅನುಗ್ರಹ ಪ್ರಾಪ್ತಿ
ಒಂದೇ ವಾರದಲ್ಲಿ ತಲೆ ಬೋಳು: ಈ ಗ್ರಾಮಗಳ ಜನರಿಗೆ ತಲೆ ಕೂದಲು ಉದುರುವ ಸಮಸ್ಯೆ
Nivedita Gowda ಟ್ರಾನ್ಸ್ ಪರೆಂಟ್ ಡ್ರೆಸ್ ನಲ್ಲಿ ಸಖತ್ ಪೋಸ್ ಕೊಟ್ಟ ನಿವೇದಿತಾ ಗೌಡ