newsics.com
ಮೀರತ್: ಉತ್ತರ ಪ್ರದೇಶದ ಮೀರತ್ನಲ್ಲಿ ದಂಪತಿ, ಮೂವರು ಹೆಣ್ಣುಮಕ್ಕಳು ಸೇರಿ ಒಂದೇ ಕುಟುಂಬದ ಐವರು ಶವವಾಗಿ ಪತ್ತೆಯಾಗಿದ್ದಾರೆ.
ಮೂರು ಮಕ್ಕಳು ಮಂಚದ ಪೆಟ್ಟಿಗೆಯೊಳಗೆ ಶವವಾಗಿ ಮಲಗಿದ್ದರು. ಲಿಸಾಡಿ ಗೇಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಮೊಯಿನ್ ಅವರ ಸಹೋದರ ಎಷ್ಟೇ ಕರೆ ಮಾಡಿದ್ದರೂ ಮೊಯಿನ್ ರಿಸೀವ್ ಮಾಡಿರಲಿಲ್ಲ, ಮನೆ ಬಳಿ ಬಂದಾಗ ಮನೆಗೆ ಬೀಗ ಹಾಕಿತ್ತು.
ಬಳಿಕ ಬಾಗಿಲು ಒಡೆದು ನೋಡಿದಾಗ ಮೊಯಿನ್, ಅವರ ಪತ್ನಿ ಅಸ್ಮಾ ಮತ್ತು ಅವರ ಮೂವರು ಪುತ್ರಿಯರಾದ ಅಫ್ಸಾ (8), ಅಜೀಜಾ (4), ಮತ್ತು ಆದಿಬಾ (1) ಶವವಾಗಿದ್ದರು.
ಹಳೇ ದ್ವೇಷವೇ ಅಪರಾಧದ ಹಿಂದಿನ ಉದ್ದೇಶವಾಗಿರಬಹುದು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದ್ದು, ಪರಿಚಿತರಿಂದಲೇ ಕೊಲೆ ಕೃತ್ಯ ನಡೆದಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ.
ಮೃತರಲ್ಲಿ ಒಬ್ಬರ ಕಾಲನ್ನು ಬೆಡ್ಶೀಟ್ನಿಂದ ಕಟ್ಟಲಾಗಿದೆ. ಕುಟುಂಬವು ಇತ್ತೀಚೆಗಷ್ಟೇ ಮೀರತ್ ಪ್ರದೇಶಕ್ಕೆ ತೆರಳಿದ್ದು, ಪೊಲೀಸರು ಅವರ ಹಿನ್ನೆಲೆಯನ್ನು ತನಿಖೆ ಮಾಡುತ್ತಿದ್ದಾರೆ ಎಂದು ಎಸ್ಎಸ್ಪಿ ತಿಳಿಸಿದ್ದಾರೆ.
ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದ ಮೊಯಿನ್ ಮತ್ತು ಅವರ ಪತ್ನಿ ಅಸ್ಮಾ ಬುಧವಾರದಿಂದ ನಾಪತ್ತೆಯಾಗಿದ್ದರು.
Old coin fraud ಹಳೆ ನಾಣ್ಯದ ಜಾಹೀರಾತಿಗೆ ಮರುಳಾಗಿ 58 ಲಕ್ಷ ಕಳೆದುಕೊಂಡ ಮಂಗಳೂರಿಗ!
Vaikuntha Ekadashi ವೈಕುಂಠ ಏಕಾದಶಿ ಇಂದು: ಹೀಗೆ ಮಾಡಿದರೆ ದೇವರ ಅನುಗ್ರಹ ಪ್ರಾಪ್ತಿ