newsics.com
ಬರ್ನ್(ಸ್ವಿಝರ್ಲ್ಯಾಂಡ್): ಭಾರತ ಮತ್ತು ಸ್ವಿಝರ್ಲ್ಯಾಂಡ್ ನಡುವಿನ ಡಬಲ್ ಟ್ಯಾಕ್ಸ್ ಅವಾಯ್ಡೆನ್ಸ್ ಅಗ್ರಿಮೆಂಟ್'(ಡಿಟಿಎಎ)ನಲ್ಲಿನ ಪರಮಾಪ್ತ ರಾಷ್ಟ್ರ ಸ್ಥಾನಮಾನ(ಎಂಎಫ್‍ಎನ್)ವನ್ನು ಸ್ವಿಝರ್ಲ್ಯಾಂಡ್ ಸರಕಾರ ಅಮಾನತುಗೊಳಿಸಿದೆ.
ಇದು ಭಾರತದಲ್ಲಿನ ಸ್ವಿಸ್ ಹೂಡಿಕೆಗಳ ಮೇಲೆ ಪರಿಣಾಮ ಬೀರಬಹುದು ಮತ್ತು ಸ್ವಿಝರ್ಲ್ಯಾಂಡ್‍ನಲ್ಲಿ ಕಾರ್ಯನಿರ್ವಹಿಸುತ್ತಿರುವ ಭಾರತೀಯ ಕಂಪನಿಗಳ ಮೇಲೆ ಹೆಚ್ಚಿನ ತೆರಿಗೆಗೆ ಕಾರಣವಾಗಲಿದೆ.
ಸ್ವಿಝರ್ಲ್ಯಾಂಡ್ ಆ ದೇಶದಲ್ಲಿ ಭಾರತೀಯ ಸಂಸ್ಥೆಗಳು ಗಳಿಸುವ ಲಾಭಾಂಶಗಳಿಗೆ 2025ರ ಜನವರಿ 1ರಿಂದ 10% ತೆರಿಗೆ ವಿಧಿಸಲಿದೆ.
ಕಳೆದ ವರ್ಷ ಭಾರತದ ಸುಪ್ರೀಂಕೋರ್ಟ್ ನೀಡಿದ ಆದೇಶದ ಬಳಿಕ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸ್ವಿಝರ್ಲ್ಯಾಂಡ್ ಸರಕಾರ ಹೇಳಿದೆ.
ಒಂದು ದೇಶವು ಒಇಸಿಡಿಗೆ ಸೇರ್ಪಡೆಗೊಳ್ಳುವ ಮೊದಲು ಭಾರತ ಸರಕಾರವು ಆ ದೇಶದೊಂದಿಗೆ ತೆರಿಗೆ ಒಪ್ಪಂದಕ್ಕೆ ಸಹಿ ಹಾಕಿದರೆ, ಆ ದೇಶವು ಒಇಸಿಡಿ(ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಸಂಸ್ಥೆ)ಗೆ ಸೇರ್ಪಡೆಗೊಂಡಾಗ ಎಂಎಫ್‍ಎನ್ ಷರತ್ತು ಸ್ವಯಂಚಾಲಿತವಾಗಿ ಪ್ರಚೋದಿಸುವುದಿಲ್ಲ ಎಂದು ಸುಪ್ರೀಂ ಕೋರ್ಟ್ ತೀರ್ಪಿನಲ್ಲಿ ಉಲ್ಲೇಖಿಸಲಾಗಿದೆ.
Leelavathi Baipaaditthaya ಪ್ರಥಮ ವೃತ್ತಿಪರ ಯಕ್ಷಗಾನ ಭಾಗವತರಾದ ಲೀಲಾವತಿ ಬೈಪಾಡಿತ್ತಾಯ ಇನ್ನಿಲ್ಲ
Health Tips ನಿತ್ಯವೂ ಚಪಾತಿ ತಿಂದ್ರೆ ಏನಾಗತ್ತೆ? ಒಳ್ಳೆಯದಾ, ಕೆಟ್ಟದ್ದಾ?
Sodium blast ನೀರಲ್ಲಿ ಸೋಡಿಯಂ ಸ್ಫೋಟ: ಡ್ರೋನ್ ಪ್ರತಾಪ್ ಜತೆ ನೆರವಾದ ಗೆಳೆಯನಿಗೂ ಸಂಕಷ್ಟ
International Tea Day ಚಹಾ ಕುಡಿದ್ರೆ ತೂಕ ಜಾಸ್ತಿಯಾಗತ್ತಾ? ಕಡಿಮೆಯಾಗತ್ತಾ? ನೀವು ಕುಡಿಯುವ ಟೀ ಹೇಗಿರಬೇಕು?