newsics.com
ಮೈಸೂರು: ಜಿಲ್ಲೆಯ ಎಚ್.ಡಿ.ಕೋಟೆ ಪಟ್ಟಣದ ಚಾಕಹಳ್ಳಿ ಬಳಿ ಹುಲಿಯೊಂದು ಮೃತಪಟ್ಟಿದ್ದು, ಶನಿವಾರ ಪತ್ತೆಯಾಗಿದೆ.
ಹುಲಿ ಸುಮಾರು ಒಂದೂವರೆ ವರ್ಷದ ಮರಿ ಎಂದು ಅಂದಾಜಿಸಲಾಗಿದ್ದು, ಹುಲಿಯು ಮತ್ತೊಂದು ಹುಲಿಯೊಂದಿಗೆ ಕಾದಾಟದಲ್ಲಿ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ.
ಸ್ಥಳಕ್ಕೆ ವೈದ್ಯಾಧಿಕಾರಿಗಳಾದ ಡಾ. ಮುಜಿಬ್ ಡಾ. ರಮೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಹುಲಿಗಳ ನಡುವೆ ಕಾಳಗವಾಗಿದ್ದು, ಕಾಳಗದಲ್ಲಿ ಮೃತಪಟ್ಟ ಹುಲಿಯನ್ನು ಮರಿಗಳಾಗಿದ್ದರೆ ತಿನ್ನುತ್ತವೆ. ಹಾಗಾಗಿ ಹುಲಿ ಮೃತಪಟ್ಟ ಸ್ಥಳದಲ್ಲಿ ಸುತ್ತಲೂ ನಾಲ್ಕು ಕ್ಯಾಮರಾಗಳನ್ನು ಅಳವಡಿಸಲಾಗಿದ್ದು ಭಾನುವಾರದವರೆಗೂ ಪರಿಶೀಲನೆ ನಡೆಸಿ ನಂತರ ಮೇಲಧಿಕಾರಿಗಳ ಮಾರ್ಗದರ್ಶನದಲ್ಲಿ ಮುಂದಿನ ಕ್ರಮ ವಹಿಸಲಾಗುವುದು ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕಳೆದ ಹಲವು ದಿನಗಳಿಂದ ಪಟ್ಟಣ ವ್ಯಾಪ್ತಿಯ ಹಾಗೂ ಅಕ್ಕಪಕ್ಕದ ಹಳ್ಳಿಗಳಲ್ಲಿ ಹುಲಿ ಮತ್ತು ಮರಿಹುಲಿಗಳು ನಿರಂತರವಾಗಿ ಓಡಾಡುತ್ತಿದ್ದುದು ರೈತರಿಗೆ ಭಯ ಉಂಟುಮಾಡಿತ್ತು,
Leelavathi Baipaditthaya ಪ್ರಥಮ ವೃತ್ತಿಪರ ಯಕ್ಷಗಾನ ಭಾಗವತರಾದ ಲೀಲಾವತಿ ಬೈಪಡಿತ್ತಾಯ ಇನ್ನಿಲ್ಲ
Health Tips ನಿತ್ಯವೂ ಚಪಾತಿ ತಿಂದ್ರೆ ಏನಾಗತ್ತೆ? ಒಳ್ಳೆಯದಾ, ಕೆಟ್ಟದ್ದಾ?
Sodium blast ನೀರಲ್ಲಿ ಸೋಡಿಯಂ ಸ್ಫೋಟ: ಡ್ರೋನ್ ಪ್ರತಾಪ್ ಜತೆ ನೆರವಾದ ಗೆಳೆಯನಿಗೂ ಸಂಕಷ್ಟ