newsics.com
ಹೆಚ್ಚಿನವರಿಗೆ ಚಪಾತಿಯೆಂದರೆ ತುಂಬಾ ಇಷ್ಟ. ತೂಕ ಇಳಿಸಿಕೊಳ್ಳಲು ಬಯಸುವವರು ರಾತ್ರಿಯೂ ಚಪಾತಿ ಸೇವಿಸುತ್ತಾರೆ.
ರಾತ್ರಿಯ ಊಟದ ಭಾಗವಾಗಿ ಚಪಾತಿ ತಿನ್ನುವುದರಿಂದ ತೂಕ ಇಳಿಕೆ ಜತೆಗೆ ಇನ್ನೂ ಅನೇಕ ಆರೋಗ್ಯ ಪ್ರಯೋಜನಗಳು ಲಭಿಸುತ್ತವೆ.
ರಾತ್ರಿ ಸಮಯದಲ್ಲಿ ಮಾತ್ರವಲ್ಲ, ದಿನಕ್ಕೆ ಒಂದು ಬಾರಿ ಚಪಾತಿ ತಿನ್ನುವುದರಿಂದ ಉತ್ತಮ ಪರಿಣಾಮ ಬೀರುತ್ತದೆ ಎಂದು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ.
2019ರ ಆಹಾರ ವಿಜ್ಞಾನ ಮತ್ತು ತಂತ್ರಜ್ಞಾನ (Journal of Food Science and Technology) ಅಧ್ಯಯನದ ಪ್ರಕಾರ, ಚಪಾತಿ ಹೃದಯದ ಆರೋಗ್ಯಕ್ಕೂ ಒಳ್ಳೆಯದು. ದೆಹಲಿ ವಿಶ್ವವಿದ್ಯಾಲಯದ ಸಂಶೋಧಕ ಅಮಿತ್ ಕುಮಾರ್ ಅವರು Whole grain chapati consumption improves cardiovascular risk factors in healthy adults ಎಂಬ ಅಧ್ಯಯನದಲ್ಲಿ ಭಾಗವಹಿಸಿದ್ದರು. ಚಪಾತಿಯಲ್ಲಿ ಕೊಬ್ಬನ್ನು ಕಡಿಮೆ ಮಾಡುವ ಅಂಶ ಸೇರಿದೆ ಎಂದು ಅವರು ವಿವರಿಸಿದ್ದಾರೆ.
ತೂಕ ಇಳಿಸಲು ಚಪಾತಿಯು ಉತ್ತಮವಾದ ಆಹಾರವಾಗಿದೆ ಎನ್ನುತ್ತಾರೆ ಸಂಶೋಧಕರು. ದಿನಕ್ಕೆ ಎರಡು ಸಾಮಾನ್ಯ ಗಾತ್ರದ ಚಪಾತಿಗಳನ್ನು ಸೇವಿಸುವುದರಿಂದ ಹೆಚ್ಚಿನ ಫೈಬರ್ ಅಂಶವು ದೇಹಕ್ಕೆ ಲಭಿಸುತ್ತದೆ. ಇದು ಹೊಟ್ಟೆಯನ್ನು ಹೆಚ್ಚು ಕಾಲ ತುಂಬಿರುವಂತೆ ಮಾಡುತ್ತದೆ. ಇದರಿಂದ ಹಸಿವಾಗದಂತೆ ಮತ್ತು ಬೇರೆ ತಿಂಡಿಗಳತ್ತ ಮನಸ್ಸು ಮಾಡದಂತೆ ಎಚ್ಚರಿಕೆ ವಹಿಸಲು ಕೂಡ ಸಾಧ್ಯವಾಗುತ್ತದೆ.
ಅಲ್ಲದೆ ಇತರ ಪದಾರ್ಥಗಳಿಗೆ ಹೋಲಿಸಿದರೆ, ಇದು ಕಡಿಮೆ ಕ್ಯಾಲೋರಿಗಳನ್ನು ಹೊಂದಿದೆ. ನೀವು ಸುರಕ್ಷಿತವಾಗಿ ತೂಕ ಕಳೆದುಕೊಳ್ಳಲು ತುಂಬಾ ಸಹಾಯವಾಗುತ್ತದೆ. ಇದರಲ್ಲಿರುವ ಫೈಬರ್ ಜೀರ್ಣಾಂಗ ವ್ಯವಸ್ಥೆಯ ಆರೋಗ್ಯಕ್ಕೆ ಸಹಕಾರಿಯಾಗಿದೆ. ಆದರೆ, ಮಲಬದ್ಧತೆ, ಡಿಸ್ಪೆಪ್ಸಿಯಾ, ಗ್ಯಾಸ್ ಇತ್ಯಾದಿ ಜೀರ್ಣಕ್ರಿಯೆಯ ಸಮಸ್ಯೆ ಹೊಂದಿರುವವರು ತಜ್ಞರ ಸಲಹೆ ಪಡೆಯುವುದು ಉತ್ತಮ.
ಚಪಾತಿಯನ್ನು ಪೌಷ್ಟಿಕಾಂಶಗಳ ಸಂಯೋಜನೆಯಾಗಿದೆ. ವಿಟಮಿನ್ ಬಿ ಮತ್ತು ಇ ಜತೆಗೆ ಕ್ಯಾಲ್ಸಿಯಂ, ಸತು, ತಾಮ್ರ, ಅಯೋಡಿನ್, ಸಿಲಿಕಾನ್, ಪೊಟ್ಯಾಸಿಯಮ್, ಮ್ಯಾಂಗನೀಸ್ ಸೇರಿದಂತೆ ವಿವಿಧ ಖನಿಜಗಳು ಹೇರಳವಾಗಿ ದೊರೆಯುತ್ತವೆ. ಇವೆಲ್ಲವೂ ದೇಹಕ್ಕೆ ಅಗತ್ಯವಿರುವ ಪೋಷಕಾಂಶಗಳನ್ನು ದಿನನಿತ್ಯದ ಸಣ್ಣ ಪ್ರಮಾಣದಲ್ಲಿ ಬದಲಿಸುತ್ತವೆ ಎಂದು ಸಂಶೋಧಕರು ಹೇಳಿದ್ದಾರೆ.
ಚಪಾತಿಯಲ್ಲಿರುವ ಹೆಚ್ಚಿನ ಕಬ್ಬಿಣಾಂಶವು ದೇಹದಲ್ಲಿನ ಹಿಮೋಗ್ಲೋಬಿನ್ ಮಟ್ಟವನ್ನು ನಿಯಂತ್ರಿಸುತ್ತದೆ. ಇದರಿಂದ ರಕ್ತಹೀನತೆ ಉಂಟಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ತಜ್ಞರು ಬಹಿರಂಗಪಡಿಸಿದ್ದಾರೆ.
ಚಪಾತಿಯಲ್ಲಿರುವ ಸೆಲೆನಿಯಂ ದೇಹವನ್ನು ಕಾರ್ಸಿನೋಜೆನಿಕ್ ಏಜೆಂಟ್‌ಗಳಿಂದ ರಕ್ಷಿಸುತ್ತದೆ.
ಚಪಾತಿಯಲ್ಲಿರುವ ಕಾಂಪ್ಲೆಕ್ಸ್ ಕಾರ್ಬೋಹೈಡ್ರೇಟ್‌ಗಳು ದೇಹಕ್ಕೆ ಶಕ್ತಿಯನ್ನು ನೀಡುತ್ತದೆ. ಇದರಿಂದ ಅದು ದಿನವಿಡೀ ದೇಹಕ್ಕೆ ಶಕ್ತಿ ಲಭಿಸುವಂತೆ ಮಾಡುತ್ತದೆ.
ಚಪಾತಿಯಲ್ಲಿರುವ ಸತು ಹಾಗೂ ಇತರ ಖನಿಜಗಳು ಚರ್ಮದ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ ಎಂದು ತಜ್ಞರು ಹೇಳುತ್ತಾರೆ.
ಹೆಚ್ಚು ಎಣ್ಣೆ ಮತ್ತು ತುಪ್ಪವನ್ನು ಸೇರಿಸಿ ಚಪಾತಿ ಮಾಡುವುದರಿಂದ ದೇಹಕ್ಕೆ ಅನಗತ್ಯ ಕೊಬ್ಬು ಸೇರಿಕೊಳ್ಳುತ್ತದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. ಆದ್ದರಿಂದ ಸಾಧ್ಯವಾದಷ್ಟು ಕಡಿಮೆ ತುಪ್ಪ ಹಾಗೂ ಎಣ್ಣೆ ಬಳಸಬೇಕು. ಸಾಧ್ಯವಾದರೆ ಈ ಎರಡನ್ನು ಬಳಸದೆ ಮಾಡಿದ ಚಪಾತಿ ತುಂಬಾ ಒಳ್ಳೆಯದು ಎನ್ನುತ್ತಾರೆ ತಜ್ಞರು.
ಮಾರುಕಟ್ಟೆಯಲ್ಲಿ ಸಿಗುವ ಗೋಧಿ ಹಿಟ್ಟಿನಲ್ಲಿ ಮೈದಾ ಇರುತ್ತದೆ. ಇದರಿಂದ ಹಸಿ ಗೋಧಿಯನ್ನು ತೆಗೆದುಕೊಂಡು ನೀವೇ ಹಿಟ್ಟನ್ನು ರೆಡಿ ಮಾಡಿಸಿಕೊಳ್ಳಬೇಕಾಗುತ್ತದೆ. ನೀವೇ ಸಿದ್ಧಪಡಿಸುವಂತಹ ಹಿಟ್ಟಿನಿಂದ ಚಪಾತಿ ಮಾಡುವುದು ಉತ್ತಮ.
ಚಪಾತಿ ಜತೆ ಗಟ್ಟಿಯಾದ ಬೇಳೆ ಪಲ್ಯ ಹಾಗೂ ಆಲೂಗಡ್ಡೆ ಪಲ್ಯವನ್ನು ಹೊರತುಪಡಿಸಿ ಎಲ್ಲಾ ತರಹದ ತರಕಾರಿಗಳಿಂದ ಮಾಡಿದ ಪಲ್ಯಗಳನ್ನು ತಿನ್ನುವುದರಿಂದ ದೇಹಕ್ಕೆ ಸಕಲ ಪೋಷಕಾಂಶಗಳು ಒದಗುತ್ತವೆ.
ಗೋಧಿ ಹಿಟ್ಟು ಕಲಸಿಕೊಳ್ಳುವಾಗ ಬೀನ್ಸ್, ಕ್ಯಾರೆಟ್ ತುಂಡುಗಳು, ವಿವಿಧ ಸೊಪ್ಪುಗಳನ್ನು ಸೇರಿಸಿ ಚಪಾತಿ ಮಾಡಿದರೆ ರುಚಿಯ ಜೊತೆಗೆ ಆರೋಗ್ಯಕ್ಕೂ ಒಳ್ಳೆಯದು.
ರಾಗಿ, ಸೋಯಾಬೀನ್ ಹಾಗೂ ಸಣ್ಣ ಕಾಳುಗಳೊಂದಿಗೆ ಗೋಧಿ ಹಿಟ್ಟನ್ನು ಬೆರೆಸಿಯೂ ಚಪಾತಿ ತಯಾರಿಸಬಹುದು ಎಂದು ಸಂಶೋಧಕರು ವಿವರಿಸುತ್ತಾರೆ.
winter season ಚಳಿಗಾಲದಲ್ಲಿ ಹೆಚ್ಚು ಬಿಸಿ ನೀರು ಕುಡಿದರೆ ಏನಾಗತ್ತೆ?
Relationship tips ಪ್ರಣಯಕ್ಕೂ ಮುನ್ನ ದಂಪತಿ ನೆನಪಿನಲ್ಲಿಟ್ಟುಕೊಳ್ಳಬೇಕಾದ ವಿಷಯಗಳಿವು!