Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > Sodium blast ನೀರಲ್ಲಿ ಸೋಡಿಯಂ ಸ್ಫೋಟ: ಡ್ರೋನ್ ಪ್ರತಾಪ್ ಜತೆ ನೆರವಾದ ಗೆಳೆಯನಿಗೂ ಸಂಕಷ್ಟ
ಕರ್ನಾಟಕಪ್ರಮುಖ

Sodium blast ನೀರಲ್ಲಿ ಸೋಡಿಯಂ ಸ್ಫೋಟ: ಡ್ರೋನ್ ಪ್ರತಾಪ್ ಜತೆ ನೆರವಾದ ಗೆಳೆಯನಿಗೂ ಸಂಕಷ್ಟ

Share
2 Min Read
SHARE

newsics.com

ತುಮಕೂರು: ಡ್ರೋನ್ ಮೂಲಕವೇ ದೇಶ ವಿದೇಶ ಸುತ್ತಾಡಿ ಬಳಿಕ ಕರ್ನಾಟಕ ರಾಜ್ಯ ಪ್ರವಾಸ ಮಾಡಿದ್ದ ಡ್ರೋನ್ ಪ್ರತಾಪ್ ಭಾರಿ ವಿವಾದ ಸೃಷ್ಟಿಸಿದ್ದರು. ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಡ್ರೋನ್ ತಮ್ಮ ಇಮೇಜ್ ಬದಲಿಸಿಕೊಂಡಿದ್ದರು.

ಆದರೆ ಈಗ ಮತ್ತೆ ಪ್ರಚಾರ ಹಾಗೂ ಹಣದ ಬೆನ್ನತ್ತಿ ಡ್ರೋನ್ ಪ್ರತಾಪ್‌ಗೆ ಇದೀಗ ಸೋಡಿಯಂ ಬ್ಲಾಸ್ಟ್ ಪ್ರಕರಣ ಕೊರಳಿಗೆ ಸುತ್ತಿಕೊಂಡಿದೆ.

ಯುಟ್ಯೂಬ್ ವಿಡಿಯೋಗಾಗಿ ಕೃಷಿ ಹೊಂಡದಲ್ಲಿ ಸೋಡಿಯಂ ಹಾಕಿ ಸ್ಫೋಟ ಮಾಡಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ತುಮಕೂರಿನ ಮಿಡಿಗೇಶಿ ಪೊಲೀಸರು ಈಗಾಗಲೇ ಡ್ರೋನ್ ಪ್ರತಾಪ್‌ನನ್ನು ಬಂಧಿಸಿದ್ದಾರೆ.
ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಡ್ರೋನ್ ತಮ್ಮ ಇಮೇಜ್ ಬದಲಿಸಿಕೊಂಡಿದ್ದರು. ಉಗಿದು ಉಪ್ಪಿನಕಾಯಿ ಹಾಕಿದ್ದ ಅದೇ ಮಂದಿ ಡ್ರೋನ್ ಪ್ರತಾಪ್ ಜತೆ ಫೋಟೋ ತೆಗೆಸಿಕೊಳ್ಳಲು ಮುಗಿಬಿದ್ದಿದ್ದರು.

ಆದರೆ ಈಗ ಮತ್ತೆ ಪ್ರಚಾರ ಹಾಗೂ ಹಣದ ಬೆನ್ನತ್ತಿ ಡ್ರೋನ್ ಪ್ರತಾಪ್‌ಗೆ ಇದೀಗ ಸೋಡಿಯಂ ಬ್ಲಾಸ್ಟ್ ಪ್ರಕರಣ ಕೊರಳಿಗೆ ಸುತ್ತಿಕೊಂಡಿದೆ.

ಯುಟ್ಯೂಬ್ ವಿಡಿಯೋಗಾಗಿ ಕೃಷಿ ಹೊಂಡದಲ್ಲಿ ಸೋಡಿಯಂ ಹಾಕಿ ಸ್ಫೋಟ ಮಾಡಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ತುಮಕೂರಿನ ಮಿಡಿಗೇಶಿ ಪೊಲೀಸರು ಈಗಾಗಲೇ ಡ್ರೋನ್ ಪ್ರತಾಪ್‌ನನ್ನು ಬಂಧಿಸಿದ್ದಾರೆ.

ತನಿಖೆ ತೀವ್ರಗೊಳಿಸಿರುವ ಪೊಲೀಸರು ಸೋಡಿಯಂ ಮೂಲ ಪತ್ತೆಗೆ ಮುಂದಾಗಿದ್ದಾರೆ. ಡ್ರೋನ್ ಪ್ರತಾಪ್ ಗೆಳೆಯನ ಮೂಲಕ ಸೋಡಿಯಂ ಪಡೆದುಕೊಂಡಿದ್ದಾರೆ ಅನ್ನೋ ಮಾಹಿತಿ ತನಿಖೆಯಲ್ಲಿ ಬಹಿರಂಗವಾಗಿದೆ. ಹೀಗಾಗಿ ಡ್ರೋನ್ ಬಳಿ ಗೆಳೆಯನ ಕುರಿತು ವಿಚಾರಣೆ ನಡೆಸಿದ್ದಾರ.

ಆದರೆ ಸ್ಫೋಟ ಪ್ರಕರಣದಲ್ಲಿ ಡ್ರೋನ್ ಪ್ರತಾಪ್ ಅರೆಸ್ಟ್ ಆಗುತ್ತಿದ್ದಂತೆ ಸೋಡಿಯಂ ಸ್ಫೋಟಕ ನೀಡಿದ ಗೆಳೆಯ ನಾಪತ್ತೆಯಾಗಿದ್ದಾನೆ. ಇದೀಗ ಪೊಲೀಸರು ಡ್ರೋನ್ ಪ್ರತಾಪ್ ಗೆಳೆಯನ ಹುಡುಕಾಟ ಆರಂಭಿಸಿದ್ದಾರೆ. ಈ ಸ್ಫೋಟಕವನ್ನು ಯಾವ ಅಂಗಡಿಯಲ್ಲಿ ಖರೀದಿ ಮಾಡಲಾಗಿದೆ ಅನ್ನೋದರ ತನಿಖೆಯೂ ನಡೆಯುತ್ತಿದೆ. ಡ್ರೋನ್ ಪ್ರತಾಪ್ ಗೆಳೆಯ ಈ ಸ್ಫೋಟಕ ಖರೀದಿಸಿ ನೀಡಿದ್ದಾನೆ ಎನ್ನಲಾಗುತ್ತಿದೆ. ಗೆಳೆಯನ ವಿಚಾರಣೆ ನಡೆಸಿದರೆ ಸ್ಫೋಟಕ ಖರೀದಿಸಿದ ಅಂಗಡಿ ಸೇರಿದಂತೆ ಇತರ ಮಾಹಿತಿಗಳು ಬಹಿರಂಗವಾಗಲಿದೆ.

ಸೋಶಿಯಲ್ ಮೀಡಿಯಾದ ವಿಡಿಯೋಗಾಗಿ ಈ ಸ್ಫೋಟ ನಡೆಸಲಾಗಿದೆ ಅನ್ನೋದನ್ನು ಡ್ರೋನ್ ಪ್ರತಾಪ್ ಹೇಳಿದ್ದಾರೆ. ಹಾಗಿದ್ದರೆ ಶೂಟ್ ಮಾಡಿದ ಕ್ಯಾಮೆರಾ ಎಲ್ಲಿ ಎಂದು ಪೊಲೀಸರು ಪ್ರಶ್ನಿಸಿದ್ದಾರೆ. ಈ ಕ್ಯಾಮೆರಾ ವಶಪಡಿಸಿಕೊಳ್ಳಲು ಪೊಲೀಸರು ಬೆಂಗಳೂರಿಗೆ ಆಗಮಿಸಿದ್ದಾರೆ. ಈ ಪ್ರಕರಣ ಮೇಲ್ನೋಟಕ್ಕೆ ಸಾಮಾನ್ಯ ಎನಿಸಿದರೂ ಗಂಭೀರವಾಗಿದೆ. ಹೀಗಾಗಿ ಡ್ರೋನ್ ಸಂಕಷ್ಟಗಳ ಸರಮಾಲೆಯೆ ತೆರೆದುಕೊಳ್ಳುವ ಸಾಧ್ಯತೆ ಇದೆ. ಈಗಾಗಲೇ ಮಿಡಿಗೇಶಿ ಠಾಣಾ ಪೊಲೀಸರು ಡ್ರೋನ್ ಪ್ರತಾಪ್‌ನ ಕರೆದುಕೊಂಡು ಸ್ಥಳ ಮಹಜರು ನಡೆಸಿದ್ದಾರೆ. ಸ್ಫೋಟಕ ನಡೆಸಿದ ಕೃಷಿ ಹೊಂಡದ ಬಳಿಯೂ ಮಹಜರು ನಡೆಸಲಾಗಿದೆ.

ಇತ್ತ ಸಾಮಾಜಿಕ ಮಾಧ್ಯಮಗಳಲ್ಲಿ ಡ್ರೋನ್ ಪ್ರತಾಪ್ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ. ಅನುಮತಿ ಪಡೆಯದೆ ಸ್ಫೋಟ ನಡೆಸಿರುವುದು ದೊಡ್ಡ ತಪ್ಪು. ಕೃಷಿ ಹೊಂಡದಲ್ಲಿ ಸ್ಫೋಟ ನಡೆಸಿರುವುದು ಮತ್ತೊಂದು ದುರಂತ ಎಂದು ಪರಿಸರ ಪ್ರೇಮಿಗಳು ಡ್ರೋನ್ ಪ್ರತಾಪ್ ವಿರುದ್ಧ ಹರಿಹಾಯ್ದಿದ್ದಾರೆ. ಕಠಿಣ ಶಿಕ್ಷೆಗೆ ಆಗ್ರಹಿಸಿದ್ದಾರೆ. ಇದು ಎಲ್ಲರಿಗೂ ಪಾಠವಾಗಬೇಕು ಎಂದು ಸೋಶಿಯಲ್ ಮೀಡಿಯಾದಲ್ಲಿ ಆಗ್ರಹಗಳು ಕೇಳಿಬರುತ್ತಿದೆ.

Pejawara Seer ನಕ್ಸಲ್‌ಪೀಡಿತ ಕಾಡಲ್ಲಿ ಪೇಜಾವರ ಶ್ರೀಗಳ ಮೆರವಣಿಗೆ, ಮೊಳಗಿದ ರಾಮಮಂತ್ರ!

SWIFT City ಬೆಂಗಳೂರಿನ ಸರ್ಜಾಪುರದಲ್ಲಿ ಸ್ವಿಫ್ಟ್ ಸಿಟಿ: ಸರ್ಕಾರ ನಿರ್ಧಾರ

Warning to Seer ನಮ್ಮ ತಂಟೆಗೆ ಬಂದರೆ ಕೈ ಕತ್ತರಿಸುತ್ತೇವೆ: ಪಂಚಮಸಾಲಿ ಶ್ರೀಗಳಿಗೆ ಎಚ್ಚರಿಕೆ

TAGGED:Sodium explosion in water: The friend who helped Pratap with the drone is also in trouble
Share This Article
Facebook Twitter Copy Link Print
Previous Article Pejawara Seer ನಕ್ಸಲ್‌ಪೀಡಿತ ಕಾಡಲ್ಲಿ ಪೇಜಾವರ ಶ್ರೀಗಳ ಮೆರವಣಿಗೆ, ಮೊಳಗಿದ ರಾಮಮಂತ್ರ!
Next Article Health Tips ನಿತ್ಯವೂ ಚಪಾತಿ ತಿಂದ್ರೆ ಏನಾಗತ್ತೆ? ಒಳ್ಳೆಯದಾ, ಕೆಟ್ಟದ್ದಾ?

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಪ್ರಮುಖದೇಶ

NEET Protest ಪಿಎಂ ನಿವಾಸದ ಎದುರು ಬೃಹತ್ ಧರಣಿ; ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ಪ್ರಮುಖ ನಾಯಕರ ಬಂಧನ

1 Min Read
ಪ್ರಮುಖದೇಶಮನರಂಜನೆ

Nandamuri Balakrishna ಶೂಟಿಂಗ್ ಸೆಟ್‌ನಲ್ಲಿ ಅವಘಡ: ‘ನಟಸಿಂಹ’ ಬಾಲಕೃಷ್ಣ ಮೊಣಕಾಲಿಗೆ ಗಾಯ, ಆಸ್ಪತ್ರೆಗೆ ದಾಖಲು

1 Min Read
ಕರ್ನಾಟಕದೇಶಪ್ರಮುಖ

Cabinet expansion ನಾಳೆಯೇ ಸಚಿವ ಸಂಪುಟ ವಿಸ್ತರಣೆಯಾಗತ್ತಾ? ಲಕ್ಷ್ಮೀ ಹೆಬ್ಬಾಳ್ಕರ್‌ಗೋಸ್ಕರ ಮತ್ತೆ ಚರ್ಚೆಗಿಳಿದ ಹೈಕಮಾಂಡ್! ಪ್ರಮಾಣವಚನ ಮುಂದೂಡಿಕೆ ಸಾಧ್ಯತೆ

1 Min Read
ಪ್ರಮುಖCrimeವಿದೇಶ

Middle East War ಕುವೈತ್, ಬಹ್ರೇನ್ ಮಿಲಿಟರಿ ನೆಲೆಗಳ ಮೇಲೆ ಭೀಕರ ದಾಳಿ ನಡೆಸಿದ ಇರಾನ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?