newsics.com
ಬೆಂಗಳೂರು: ಸಚಿವ ಜಮೀರ್ ಪುತ್ರ ಝೈದ್ ಖಾನ್ ಅಭಿನಯದ ‘ಕಲ್ಟ್’ ಚಿತ್ರದ ಡ್ರೋನ್ ಟೆಕ್ನೀಶಿಯನ್ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಸಂತೋಷ್ ಆತ್ಮಹತ್ಯೆಗೆ ಯತ್ನಿಸಿದ ತಂತ್ರಜ್ಞ. ಸಂತೋಷ್ ದಿನಕ್ಕೆ 25 ಸಾವಿರ ರೂ. ನಿಗದಿ ಮಾಡಿ ಡ್ರೋನ್ ಶೂಟ್ ಮಾಡುತ್ತಿದ್ದರು. ಆದರೆ ಚಿತ್ರದುರ್ಗದ ಗುಡ್ಡದಲ್ಲಿ ಶೂಟಿಂಗ್ ವೇಳೆ ಡ್ರೋನ್ ರೆಕ್ಕೆ ಯಾವುದೋ ವಿಂಡ್ ಫ್ಯಾನ್‌ಗೆ ತಗುಲಿ ಡ್ರೋನ್ ಹಾಳಾಗಿತ್ತು.
ಇದರ ನಷ್ಟ ಭರಿಸುವಂತೆ ಕಲ್ಟ್’ ಚಿತ್ರದ ಡ್ರೋನ್ ತಂತ್ರಜ್ಞ ಸಂತೋಷ್ ಚಿತ್ರತಂಡವನ್ನು ಕೇಳಿಕೊಂಡಿದ್ದಾರೆ. ಆದರೆ ಚಿತ್ರತಂಡ ಯಾವುದೇ ನಷ್ಟ ಭರಿಸದೇ ಮೆಮೊರಿ ಕಾರ್ಡ್ ಕಿತ್ತುಕೊಂಡಿದೆ ಎಂಬ ಆರೋಪ ಕೇಳಿಬಂದಿದೆ. ಇದರಿಂದ ಮನನೊಂದು ಸಂತೋಷ್ ಆತ್ಮಹತ್ಯೆಗೆ ಯತ್ನಿಸಿದ್ದಾರೆನ್ನಲಾಗಿದೆ. ಸಂತೋಷ್ ಪ್ರಾಣಾಪಾಯದಿಂದ ಪಾರಾಗಿದ್ದು, ಮಾಗಡಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
Relationship | ಕುಳ್ಳಗಿರುವ ಹುಡುಗಿಯರೇ ಯಾಕೆ ಹುಡುಗರಿಗೆ ಹೆಚ್ಚು ಇಷ್ಟವಾಗ್ತಾರೆ?
Menstrual fluctuations | ಋತುಚಕ್ರ ಏರುಪೇರಾಗ್ತಿದ್ಯಾ? ಮುಟ್ಟು ಹೆಚ್ಚು ಕಮ್ಮಿಯಾಗಲು ಈ ಅಂಶಗಳೇ ಕಾರಣ!
Elon Musk | ಮಂಗಳಗ್ರಹದ ಪ್ರಯಾಣ ಸಮಯ 90 ದಿನಗಳಿಗೆ ಇಳಿಸಲಿರುವ ಸ್ಟಾರ್‌ಶಿಪ್!