Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > Cyber Crime ಎಚ್ಚರ..! ವಾಟ್ಸಾಪ್‌ಗೆ ಬಂದ ಮದುವೆ ಕಾರ್ಡ್ ನೋಡ್ತಿದ್ದಂತೆ ಖಾಲಿಯಾಯ್ತು ₹9 ಲಕ್ಷ ರೂ
ಪ್ರಮುಖCrimeಕರ್ನಾಟಕ

Cyber Crime ಎಚ್ಚರ..! ವಾಟ್ಸಾಪ್‌ಗೆ ಬಂದ ಮದುವೆ ಕಾರ್ಡ್ ನೋಡ್ತಿದ್ದಂತೆ ಖಾಲಿಯಾಯ್ತು ₹9 ಲಕ್ಷ ರೂ

Share
2 Min Read
SHARE

newsics.com | ನ್ಯೂಸಿಕ್ಸ್

Contents
ನಡೆದಿದ್ದೇನು?ಸೈಬರ್ ಠಾಣೆಗೆ ದೂರುಏನಿದು ‘APK ಫೈಲ್’ ಅಪಾಯ? ಸಾರ್ವಜನಿಕರೇ ಎಚ್ಚರ

ಬೆಂಗಳೂರು: ಮದುವೆ ಆಹ್ವಾನ ಪತ್ರಿಕೆ ಹೆಸರಿನಲ್ಲಿ ಬಂದ ವಾಟ್ಸಾಪ್ ಸಂದೇಶವೊಂದನ್ನು ನಂಬಿ ಓಪನ್ ಮಾಡಿದ ಸರ್ಕಾರಿ ಅಧಿಕಾರಿಯೊಬ್ಬರು ಬರೋಬ್ಬರಿ ₹9.96 ಲಕ್ಷ ಕಳೆದುಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಸೈಬರ್ ವಂಚಕರ ಈ ಹೊಸ ತಂತ್ರಕ್ಕೆ ಸಿಲುಕಿ ಅರಣ್ಯ ಇಲಾಖೆಯ ಅಧಿಕಾರಿ ಹಣ ಕಳೆದುಕೊಂಡಿದ್ದಾರೆ.

 

ನಡೆದಿದ್ದೇನು?

ರಾಜಧಾನಿಯ ಅರಣ್ಯ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ರಮೇಶ್ ಬಾಬು ಎಂಬುವರಿಗೆ ಅಪರಿಚಿತ ಮೊಬೈಲ್ ಸಂಖ್ಯೆಯಿಂದ ವಾಟ್ಸಾಪ್ ಸಂದೇಶವೊಂದು ಬಂದಿತ್ತು. ಆ ಸಂದೇಶದಲ್ಲಿ ಮದುವೆಯ ಆಹ್ವಾನ ಪತ್ರಿಕೆ ಇದ್ದು, ಅದನ್ನು ತಿಳಿದವರೇ ಕಳುಹಿಸಿರಬಹುದು ಎಂದು ಭಾವಿಸಿದ ರಮೇಶ್ ಬಾಬು ಆ ಫೈಲ್ ಕ್ಲಿಕ್ ಮಾಡಿ ಓಪನ್ ಮಾಡಿದ್ದಾರೆ.

ಫೈಲ್ ಓಪನ್ ಮಾಡಿದ ತಕ್ಷಣವೇ ಅದು ‘APK ಫೈಲ್’ ಎಂಬುದು ಅವರ ಗಮನಕ್ಕೆ ಬಂದಿದೆಯಾದರೂ, ಅವರು ಅದನ್ನು ಹೆಚ್ಚಾಗಿ ಗಂಭೀರವಾಗಿ ಪರಿಗಣಿಸಿರಲಿಲ್ಲ. ಆದರೆ, ಫೈಲ್ ಕ್ಲಿಕ್ ಮಾಡಿದ ಕೇವಲ 15 ನಿಮಿಷಗಳಲ್ಲಿ ಅವರ ಮೊಬೈಲ್‌ಗೆ ಸರಣಿ ಮೆಸೇಜ್‌ಗಳು ಬರಲು ಪ್ರಾರಂಭವಾಗಿವೆ. ಬ್ಯಾಂಕ್ ಖಾತೆಯಿಂದ ಹಂತ-ಹಂತವಾಗಿ ಹಣ ಕಡಿತಗೊಳ್ಳುತ್ತಿರುವ ಮೆಸೇಜ್ ನೋಡಿ ಬೆಚ್ಚಿಬಿದ್ದ ರಮೇಶ್ ಬಾಬು ತಕ್ಷಣ ಖಾತೆ ಪರಿಶೀಲಿಸಿದಾಗ, ಒಟ್ಟು ₹9,96,000 ವಂಚಕರ ಖಾತೆಗೆ ವರ್ಗಾವಣೆಯಾಗಿರುವುದು ಬೆಳಕಿಗೆ ಬಂದಿದೆ.

ಸೈಬರ್ ಠಾಣೆಗೆ ದೂರು

ಹಣ ಕಳೆದುಕೊಂಡು ಕಂಗಾಲಾದ ಅಧಿಕಾರಿ ತಕ್ಷಣವೇ ಉತ್ತರ ವಿಭಾಗದ ಸೈಬರ್ ಕ್ರೈಮ್ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

ಏನಿದು ‘APK ಫೈಲ್’ ಅಪಾಯ? ಸಾರ್ವಜನಿಕರೇ ಎಚ್ಚರ

  • APK ಎಂದರೇನು?: ‘ಆಂಡ್ರಾಯ್ಡ್ ಪ್ಯಾಕೇಜ್ ಫೈಲ್’ (APK) ಎಂಬುದು ಮೊಬೈಲ್‌ಗಳಲ್ಲಿ ಆಪ್‌ಗಳನ್ನು ಇನ್‌ಸ್ಟಾಲ್ ಮಾಡಲು ಬಳಸುವ ಫೈಲ್ (ಕಂಪ್ಯೂಟರ್‌ನಲ್ಲಿನ .exe ಫೈಲ್‌ನಂತೆ).
  • ವಂಚನೆ ಹೇಗೆ?: ಗೂಗಲ್ ಪ್ಲೇ ಸ್ಟೋರ್ ಹೊರತಾಗಿ ಇಂಟರ್ನೆಟ್, ವಾಟ್ಸಾಪ್ ಅಥವಾ ಟೆಲಿಗ್ರಾಮ್ ಮೂಲಕ ಬರುವ ಇಂತಹ APK ಫೈಲ್‌ಗಳನ್ನು ಕ್ಲಿಕ್ ಮಾಡಿದಾಗ, ಮೊಬೈಲ್‌ಗೆ ಹಾನಿಕಾರಕ ವೈರಸ್/ಸಾಫ್ಟ್‌ವೇರ್ ಇನ್‌ಸ್ಟಾಲ್ ಆಗಿ ಇಡೀ ಮೊಬೈಲ್ ವಂಚಕರ ನಿಯಂತ್ರಣಕ್ಕೆ ಸಿಗುತ್ತದೆ.
  • ಮುನ್ನೆಚ್ಚರಿಕೆ: ಅಪರಿಚಿತ ಸಂಖ್ಯೆಗಳಿಂದ ಬರುವ ಮದುವೆ ಇನ್ವಿಟೇಶನ್, ಆಫರ್ ಲಿಂಕ್‌ಗಳು ಅಥವಾ ಯಾವುದೇ APK ಫೈಲ್‌ಗಳನ್ನು ಯಾವುದೇ ಕಾರಣಕ್ಕೂ ಡೌನ್‌ಲೋಡ್ ಅಥವಾ ಓಪನ್ ಮಾಡಬಾರದು ಎಂದು ಸೈಬರ್ ತಜ್ಞರು ಎಚ್ಚರಿಸಿದ್ದಾರೆ.

 

Gold Price ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆ, ಇಂದಿನ ದರ ವಿವರ ಇಲ್ಲಿದೆ

TAGGED:#Money Scam #Bangalore #Government officer #news #newsics
Share This Article
Facebook Twitter Copy Link Print
Previous Article Gold Price ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆ, ಇಂದಿನ ದರ ವಿವರ ಇಲ್ಲಿದೆ
Next Article DK Shivakumar ಡಿ.ಕೆ. ಶಿವಕುಮಾರ್ ಸಂಪುಟ ರೇಸ್; ಸಚಿವ ಸ್ಥಾನಕ್ಕಾಗಿ ಕ್ಯೂ ನಿಂತ ಶಾಸಕರು! ಯಾರಿಗೆ ಸಿಗಲಿದೆ ಸ್ಥಾನ?

Popular Posts

NEET Protest ಪಿಎಂ ನಿವಾಸದ ಎದುರು ಬೃಹತ್ ಧರಣಿ; ಪ್ರಧಾನಿ ನಿವಾಸದ ಮುಂಭಾಗದಲ್ಲಿ ರಾಹುಲ್ ಗಾಂಧಿ ಬಂಧನ

1 Min Read

Nandamuri Balakrishna ಶೂಟಿಂಗ್ ಸೆಟ್‌ನಲ್ಲಿ ಅವಘಡ: ‘ನಟಸಿಂಹ’ ಬಾಲಕೃಷ್ಣ ಮೊಣಕಾಲಿಗೆ ಗಾಯ, ಆಸ್ಪತ್ರೆಗೆ ದಾಖಲು

1 Min Read

Cabinet expansion ನಾಳೆಯೇ ಸಚಿವ ಸಂಪುಟ ವಿಸ್ತರಣೆಯಾಗತ್ತಾ? ಲಕ್ಷ್ಮೀ ಹೆಬ್ಬಾಳ್ಕರ್‌ಗೋಸ್ಕರ ಮತ್ತೆ ಚರ್ಚೆಗಿಳಿದ ಹೈಕಮಾಂಡ್! ಪ್ರಮಾಣವಚನ ಮುಂದೂಡಿಕೆ ಸಾಧ್ಯತೆ

1 Min Read

Middle East War ಕುವೈತ್, ಬಹ್ರೇನ್ ಮಿಲಿಟರಿ ನೆಲೆಗಳ ಮೇಲೆ ಭೀಕರ ದಾಳಿ ನಡೆಸಿದ ಇರಾನ್

1 Min Read

You Might Also Like

ಪ್ರಮುಖದೇಶವೈರಲ್

Viral Video ಮದ್ಯದಂಗಡಿಗೆ ಎಂಟ್ರಿ ಕೊಟ್ಟ ಚಿರತೆ; ಮೂವರ ಮೇಲೆ ದಾಳಿ-ವಿಡಿಯೋ ನೋಡಿ

1 Min Read
ಪ್ರಮುಖCrimeಕರ್ನಾಟಕ

Crime Case ಘೋರ ದುರಂತ; ಹೆಂಡತಿ, ಇಬ್ಬರು ಮಕ್ಕಳನ್ನು ಕೊಂದು ವ್ಯಕ್ತಿ ಆತ್ಮಹತ್ಯೆ; ಡೆತ್‌ನೋಟ್ ಪತ್ತೆ

1 Min Read
ದೇಶಪ್ರಮುಖವೈರಲ್

Transgender attack ಹಣ ಕೊಡದ ಯುವಕನ ಮೇಲೆ ಮಂಗಳಮುಖಿಯರಿಂದ ರೈಲಿನಲ್ಲೇ ಹಲ್ಲೆ, ಅಸಭ್ಯ ವರ್ತನೆ, ವಿಡಿಯೋ ನೋಡಿ

1 Min Read
ಪ್ರಮುಖಆರೋಗ್ಯಲೈಫ್‌ಸ್ಟೈಲ್

Cooking Oil Storage ನೀವು ಬಳಸುವ ಅಡುಗೆ ಎಣ್ಣೆ ಸುರಕ್ಷಿತವೇ? ಎಣ್ಣೆ ಹಾಳಾಗಿದೆಯೇ ಎಂದು ತಿಳಿಯಲು ಈ ಮುಖ್ಯ ಸಂಗತಿಗಳನ್ನು ಗಮನಿಸಿ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?